31 C
ಪುತ್ತೂರು, ಬೆಳ್ತಂಗಡಿ
September 26, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮದ್ದಡ್ಕ ಎಸ್ ಕೆ ಎಸ್ ಎಸ್ ಎಫ್ ವಾರ್ಷಿಕ ಮಹಾಸಭೆ , ಸಮಿತಿ ರಚನೆ

ಕುವೆಟ್ಟು: ಎಸ್ ಕೆ ಎಸ್ ಎಸ್ ಎಫ್ ಮದ್ದಡ್ಕ ಯುನಿಟಿನ ವಾರ್ಷಿಕ ಮಹಾ ಸಭೆಯು ಸೆ13 ರoದು ನೂರುಲ್ ಹುದಾ ಸಮುದಾಯ ಭವನ ಮದ್ದಡ್ಕ ಇಲ್ಲಿ ನಡೆಯಿತು.

ಕಾರ್ಯಕ್ರಮವನ್ನು ದುವಾ ಮೂಲಕ ಹುಸೈನ್ ಮುಸ್ಲಿಯಾರ್ ಮದ್ದಡ್ಕ ಇವರು ಚಾಲನೆ ನೀಡಿದರು. ಅಬ್ದುಲ್ ಅಝೀಝ್ ಅಶ್ಯಾಫಿ ಉಸ್ತಾದ್ ಉದ್ಘಾಟಿಸಿದರು. ಇಲಿಯಾಝ್ ಚಿಲಿಂಬಿ ಅಧ್ಯಕ್ಷತೆ ವಹಿಸಿದರು.

ಪ್ರಧಾನ ಕಾರ್ಯದರ್ಶಿ ಎಮ್ ಎಮ್ ನೌಶಾದ್ ಮದ್ದಡ್ಕ ಲೆಕ್ಕಪತ್ರ ಮಂಡಿಸಿದರು ಸರ್ವಾನುಮತದಿಂದ. ಮುಖ್ಯಮಂತ್ರಿ ಪದಕ ವಿಜೇತರಾದ ಇರ್ಷಾದ್ ಪೊಲೀಸ್ ಮತ್ತು ಹಲವಾರು ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಶ್ರಫ್ ಪೊಲೀಸ್ ಇವರನ್ನು ಎಸ್ ಕೆ ಎಸ್ ಎಸ್ ಎಫ್ ಮದ್ದಡ್ಕ ಮತ್ತು ಶಂಸುಲ್‌ಉಲಮಾ ಕ್ರಿಯಾ ಸಮಿತಿ ಮದ್ದಡ್ಕ ಇದರ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು ಮತ್ತು ಊರ ಹಿರಿಯರಾದ ಪಿ ಎಮ್ ಅಹ್ಮದ್ ಇಬ್ರಾಹಿಮ್,ಎಮ್ ಎಚ್ ಸುಲೈಮಾನ್, ಅಬ್ದುಲ್ಲಾ ಸುಪ್ರಿಮ್ ಪಾದೆ, ಹುಸನಬ್ಬ ಚಿಲಿಂಬಿ. ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ನಂತರ ನೂತನ‌ ಕಮೀಟಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಎಂ ಎಂ ನೌಶಾದ್ ಮದ್ದಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ರಿಝ್ವಾನ್ ಮದ್ದಡ್ಕ. ಕೋಶಾಧಿಕಾರಿಯಾಗಿ ಇಲಿಯಾಝ್ ಚಿಲಿಂಬಿ. ಉಪಾಧ್ಯಕ್ಷರಾಗಿ ಆಸಿಫ್ ಮದ್ದಡ್ಕ, ಇರ್ಶಾದ್ ಚಿಲಿಂಬಿ. ಕಾರ್ಯದರ್ಶಿಯಾಗಿ ರಝೀನ್ ಮದ್ದಡ್ಕ. ಜೊತೆ ಕಾರ್ಯದರ್ಶಿಯಾಗಿ ರೌಶನ್ ಸಬರಬೈಲು. ಶಾಹಿದ್ ಕಿನ್ನಿಗೋಳಿ ಇವರನ್ನು ಆಯ್ಕೆ ಮಾಡಲಾಯಿತು. ಕ್ಯಾಂಪಸ್ ವಿಂಗ್ ಉಸ್ತುವಾರಿಯಾಗಿ ಸಫ್ವಾನ್ ಕಿನ್ನಿಗೋಳಿ, ಇಬಾದ್ ಉಸ್ತುವಾರಿಯಾಗಿ ರಿಫಾಅತ್ ಚಿಲಿಂಬಿ, ಝಿಯಾ ನೇರಳಕಟ್ಟೆ, ಟ್ರೆಂಡ್ ಉಸ್ತುವಾರಿಯಾಗಿ ಮುಶಾಬ್ ಮದ್ದಡ್ಕ, ಸರ್ಗಾಲಯ ಉಸ್ತುವಾರಿಯಾಗಿ ರಾಫಿ ಚಿಲಿಂಬಿ, ಹಫೀಝ್ ಚಿಲಿಂಬಿ. ಮತ್ತು ಕೌನ್ಸಿಲರ್ ಗಳಾಗಿ ಶಾಕಿರ್ ಚಿಲಿಂಬಿ, ಹೈದರ್ ಮದ್ದಡ್ಕ, ಶರೀಫ್ ಪಾದೆ ಇವರನ್ನು ನೇಮಕ ಮಾಡಲಾಯಿತು. ನೌಶಾದ್ ಮದ್ದಡ್ಕ ಕಾರ್ಯಕ್ರಮ ನಿರೂಪಿಸಿದರು. ರಝೀನ್ ಸ್ವಾಗತಿಸಿ, ರೌಶನ್ ಸಬರಬೈಲು ಧನ್ಯವಾದ ಮಾಡಿದರು.

Related posts

ಮಿತ್ತಬಾಗಿಲುನಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ವಾರ್ಷಿಕ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬೆಳ್ತಂಗಡಿ ವಕೀಲರ ಸಂಘ ದಿಂದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರ ಭೇಟಿ

Suddi Udaya

ಅಭಿವೃದ್ಧಿ ಶೂನ್ಯ ಬಜೆಟ್: ಕಿರಣ್ ಚಂದ್ರ ಡಿ. ಪುಷ್ಪಗಿರಿ

Suddi Udaya

ವೇಣೂರು ಐಟಿಐಯಲ್ಲಿ ಬೃಹತ್ ರಕ್ತದಾನ ಶಿಬಿರ: 119 ಯುನಿಟ್ ರಕ್ತ ಸಂಗ್ರಹ

Suddi Udaya

72ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಅಂಗವಾಗಿ ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನಡೆಯುವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಗುರುದೇವ ಮಠದಲ್ಲಿ ವರಮಹಾಲಕ್ಷ್ಮಿ ಪೂಜೆ

Suddi Udaya
error: Content is protected !!