27.1 C
ಪುತ್ತೂರು, ಬೆಳ್ತಂಗಡಿ
September 27, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಹೊಟೇಲ್ ಗೆ ಬಂದು ಕುಟುಂಬ ಸದಸ್ಯರಿಗೆ ಹಲ್ಲೆ: ಐದು ಮಂದಿಯ ವಿರುದ್ಧ ಪ್ರಕರಣ ದಾಖಲು

ಬೆಳ್ತಂಗಡಿ : ಹೊಟೇಲ್ ಗೆ ಐದು ಮಂದಿ ಬಂದು ಮಹಿಳೆ ಸೇರಿದಂತೆ ನಾಲ್ಕು ಮಂದಿ ಕುಟುಂಬ ಸದಸ್ಯರಿಗೆ ಅವ್ಯಾಚ ಶಬ್ದಗಳಿಂದ ಬೈದು ಬಳಿಕ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಮಹಿಳೆಯನ್ನು ಎಳೆದುಕೊಂಡು ಹೋಗಿ ಜೊತೆ ಅಸಭ್ಯವಾಗಿ ವರ್ತಿಸಿದ ಪ್ರಕರಣ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಐದು ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಕರಣದ ವಿವರ : ಬೆಳ್ತಂಗಡಿ ತಾಲೂಕು ಮಿತ್ತಬಾಗಿಲು ಗ್ರಾಮದ ಕುಕ್ಕಾವು ಎಂಬಲ್ಲಿ ಹೋಟೆಲ್ ನಡೆಸುತ್ತಿದ್ದ 45 ವರ್ಷದ ದೂರುದಾರೆಯ 28 ವರ್ಷದ ಮಗನ ಹೊಟೇಲ್ ಗೆ ಆ.6 ರಂದು ಬಂದ್ ಮಾಡುತ್ತಿರುವ ಸಮಯ 9 ಗಂಟೆಗೆ ಆರೋಪಿಗಳಾದ ನವೀನ್ ಕೊಟ್ಯಾನ್, ರಂಜಿತ್, ಹರೀಶ್, ಸುದೇಶ್ @ ಸುದ ಎಂಬವರು ಹೊಟೇಲ್ ನ ಹೊರಗೆ ಬಂದಿದ್ದು ನವೀನ್ ಕೊಟ್ಯಾನ್ ಎಂಬಾತನು ದೂರುದಾರೆಗೆ ಅವ್ಯಾಚ ಶಬ್ದಗಳಿಂದ ಬೈದಾಗ ಮಕ್ಕಳು ಮತ್ತು ಗಂಡ ಬಂದಾಗ ರಂಜಿತ್ ನು ಏಕಾಏಕಿಯಾಗಿ ಮತ್ತೊಬ್ಬ 25 ವರ್ಷದ ಮಗನಿಗೆ ಹಲ್ಲೆ ನಡೆಸಲು ಬಂದಾಗ ತಡೆಯಲು ಬಂದ ದೂರುದಾರೆಯ ಮತ್ತು ಗಂಡನಿಗೆ ನವೀನ್ ಕೊಟ್ಯಾನ್ ಎಂಬಾತ ಅಂಗಿಯ ಒಳಗೆ ಅಡಗಿಸಿಟ್ಟಿದ್ದ ಸ್ಟೀಲ್ ರಾಡನ್ನು ತೆಗೆದು ಹಲ್ಲೆ ನಡೆಸಲು ಬಂದಾಗ ಇದನ್ನು ಪ್ರತಿರೋಧಿಸಿದಾಗ ರಂಜಿತ್, ಹರೀಶ್, ಸುದೇಶ್ ರವರು ಮೊದಲೇ ತಂದಿದ್ದ ಕಬ್ಬಿಣದ ರಾಡ್ ನಿಂದ ನವೀನ್ ಕೋಟ್ಯಾನ್ ಸ್ಪೀಲ್ ರಾಡ್ ನಿಂದ ದೂರುದಾರೆ, ಮಕ್ಕಳು ಹಾಗೂ ಅವರ ಗಂಡನಿಗೆ ಹಲ್ಲೆ ಮಾಡಿದ್ದಲ್ಲದೇ ಕಾಲಿನಿಂದ ತುಳಿದು ಕೈಯಿಂದ ಹಲ್ಲೆ ಮಾಡಿ, ನವೀನ್ ಕೊಟ್ಯಾನ್ ಮತ್ತು ರಂಜಿತ್ ಎಂಬವರು ದೂರುದಾರೆಯನ್ನು ಎಳೆದುಕೊಂಡು ಹೋಗಿ ಅಸಭ್ಯವಾಗಿ ವರ್ತಿಸಿ ವೈಯಕ್ತಿಕ ಅಂಗಾಂಗಳಿಗೆ ಸ್ಪರ್ಶಿಸಿದ್ದಲ್ಲದೇ ಕೆಟ್ಟ ಸನ್ನೆಗಳನ್ನು ತೋರಿಸಿ ಲೈಂಗಿಕವಾಗಿ ಕಿರುಕುಳವನ್ನು ನೀಡಿ, ನಂತರ ವಿವಸ್ತ್ರಗೊಳಿಸುವ ಪ್ರಯತ್ನ ಹಾಗೂ ನಿರಂತರವಾಗಿ ಹಲ್ಲೆ ನಡೆಸಿದ್ದು ನಂತರ ಅಪಾದಿತರು ಹಾಗೂ ಮತ್ತೊಬ್ಬ ವಿಜೇಶ್ ಪೂಜಾರಿ ಎಂಬವರೆಲ್ಲರೂ ದೂರುದಾರರ ಮಕ್ಕಳನ್ನು ಅಪಹರಿಸಿ ಸುಟ್ಟು ಹಾಕುತ್ತೇವೆ ಎಂದು ಜೀವ ಬೆದರಿಕೆ ಹಾಕಿ ಹೊಟೇಲ್ ನ ಸ್ವತ್ತುಗಳನ್ನು ನಾಶಪಡಿಸಲು ಪ್ರಯತ್ನಿಸುತ್ತಿರುವಾಗ ದೂರುದಾರರ ಮಕ್ಕಳು ಅವರನ್ನೆ ಓಡಿಸಲು ಪ್ರಯತ್ನಿಸಿದಾಗ ಆಪಾದಿತರೆಲ್ಲರೂ ಸತ್ತುಗಳೊಂದಿಗೆ ಓಡಿ ಹೋಗಿರುತ್ತಾರೆ ಹಲ್ಲೆಯಿಂದ ಆದ ಗಾಯ ಹಾಗೂ ನೋವಿಗೆ ಆ್ಯಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.

ಬೆಳ್ತಂಗಡಿ ಪೊಲೀಸರು ಪ್ರಕರಣದ ಬಗ್ಗೆ ಕೂಲಂಕುಷವಾಗಿ ಪ್ರಾಥಮಿಕ ತನಿಖೆ ನಡೆಸಿದ ಬಳಿಕ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ನವೀನ್ ಕೋಟ್ಯಾನ್, ಮಲವಂತಿಗೆ ಗ್ರಾಮದ ರಂಜಿತ್, ಮಲವಂತಿಗೆ ಗ್ರಾಮದ ವಿಜೇಶ್ ಪೂಜಾರಿ, ಮಿತ್ತಬಾಗಿಲು ಗ್ರಾಮದ ಸುದೇಶ್@ಸುದ, ಮಿತ್ತಬಾಗಿಲು ಗ್ರಾಮದ ಕಿಲ್ಲೂರು ನಿವಾಸಿ ಹರೀಶ್ ವಿರುದ್ಧ ಆ.12 ರಂದು BNS-2023 (u/s-189(2),189(4),191(2),115(2),118(1),76,352,351(2),190) ಅಡಿಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಯುತ್ತಿದೆ.

Related posts

ಮಚ್ಚಿನ : ಬಳ್ಳಮಂಜ ನ್ಯೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ವಾರ್ಷಿಕ ಮಹಾಸಭೆ, ಪದಾಧಿಕಾರಿಗಳ ಆಯ್ಕೆ

Suddi Udaya

ಬಂದಾರು: ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಸುತ್ತಿದ್ದ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರ ದಾಳಿ: ಆರೋಪಿಗಳ ಸಹಿತ ನಗದು ಹಾಗೂ ಇತರ ಸೊತ್ತುಗಳ ವಶ

Suddi Udaya

ಕಲ್ಮಂಜ: ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಹಾಗೂ ವಾರ್ಷಿಕ ಜಾತ್ರೋತ್ಸವ ಸಮಿತಿಯ ಪೂರ್ವಭಾವಿ ಸಭೆ

Suddi Udaya

ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ಮುಂಗಾರು ಮಳೆಯ ಪೂರ್ವ ಸಿದ್ಧತೆ ಬಗ್ಗೆ ತಾಲೂಕು ಮಟ್ಟದ ವಿವಿಧ ಇಲಾಖಾಧಿಕಾರಿಗಳ-ಸಮಾಲೋಚನಾ ಸಭೆ

Suddi Udaya

ಬಂದಾರು : ಪೆರ್ಲ -ಬೈಪಾಡಿಯಲ್ಲಿ ನೂತನ ಶಾಖಾ ಅಂಚೆ ಕಚೇರಿ ಉದ್ಘಾಟನೆ

Suddi Udaya

ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ : ಶಾಸಕ ಹರೀಶ್ ಪೂಂಜರಿಂದ ರಾಜ್ಯ ಮಟ್ಟದ ವಸ್ತು ಪ್ರದರ್ಶನ ಉದ್ಘಾಟನೆ

Suddi Udaya
error: Content is protected !!