31.9 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎಸ್‌ಡಿಪಿಐ ಬೆಳ್ತಂಗಡಿ ಕ್ಷೇತ್ರ ವ್ಯಾಪ್ತಿಯ ವಿವಿಧೆಡೆ 80ನೇ ಸ್ವಾತಂತ್ರ್ಯ ದಿನಾಚರಣೆ

ಬೆಳ್ತಂಗಡಿ: 80ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಬೆಳ್ತಂಗಡಿ ಕ್ಷೇತ್ರ ವ್ಯಾಪ್ತಿಯ ವಿವಿಧೆಡೆಗಳಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

ಬೆಳ್ತಂಗಡಿ, ಲಾಯಿಲ, ನಾವೂರು, ಚಾರ್ಮಾಡಿ, ಕುಂಟಿನಿ, ಕಕ್ಕೇಜಾಲ್, ಸುನ್ನತ್‌ಕೆರೆ, ಮದ್ದಡ್ಕ, ಕನ್ನಡಿಕಟ್ಟೆ, ಕಲ್ಲೇರಿ ಹಾಗೂ ಪುಂಜಾಲಕಟ್ಟೆ ಸೇರಿದಂತೆ ಕ್ಷೇತ್ರದ ವಿವಿಧ ಭಾಗಗಳಲ್ಲಿ ಪಕ್ಷದ ವತಿಯಿಂದ ಧ್ವಜಾರೋಹಣ ನೆರವೇರಿಸಲಾಯಿತು.
“ಸ್ವಾತಂತ್ರ್ಯ ಎಲ್ಲರ ಹಕ್ಕು; ವಿಚಾರಣಾಧೀನರಿಗೂ ಅದೇ ಹಕ್ಕು” ಎಂಬ ಸಂದೇಶದೊಂದಿಗೆ ನಡೆದ ಕಾರ್ಯಕ್ರಮಗಳಲ್ಲಿ ದೇಶದ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಂವಿಧಾನಬದ್ಧ ಹಕ್ಕುಗಳು ಹಾಗೂ ಸಮಾನತೆಯ ಮಹತ್ವವನ್ನು ಸಾರಲಾಯಿತು.

ಕಾರ್ಯಕ್ರಮಗಳಲ್ಲಿ ಎಸ್‌ಡಿಪಿಐ ಬೆಳ್ತಂಗಡಿ ಕ್ಷೇತ್ರ ಉಪಾಧ್ಯಕ್ಷ ನಿಸಾರ್ ಕುದ್ರಡ್ಕ, ಕಾರ್ಯದರ್ಶಿ ಅಶ್ಫಾಕ್ ಪುಂಜಾಲಕಟ್ಟೆ, ತ್ವಾಹಿರ್ ಬಂಗೇರಕಟ್ಟೆ, ರಶೀದ್ ಬೆಳ್ತಂಗಡಿ, ಕೋಶಾಧಿಕಾರಿ ಸಾಲಿಹ್ ಮದ್ದಡ್ಕ, ಸದಸ್ಯರಾದ ಮುಸ್ತಫಾ ಜಿ.ಕೆ., ಖಾದರ್ ನಾವೂರು, ಅಶ್ರಫ್ ಕಟ್ಟೆ ಸೇರಿದಂತೆ ಬ್ಲಾಕ್ ಹಾಗೂ ಬ್ರಾಂಚ್ ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

Related posts

ಮುಂಡಾಜೆ ಕೆ.ಎನ್. ಭಟ್ ಶಿರಾಡಿಪಾಲ್ ಅವರ ಶತಮಾನೋತ್ಸವದ ಪ್ರಯುಕ್ತ ಶತನಮನ ಶತಸನ್ಮಾನ ಸರಣಿ ಕಾರ್ಯಕ್ರಮ

Suddi Udaya

ಕೊಯ್ಯೂರು: ಪ್ರಗತಿಪರ ಕೃಷಿಕ ಲಿಂಗಪ್ಪ ಗೌಡ ಬಜಿಲ ನಿಧನ

Suddi Udaya

ಗ್ರಾ.ಪಂ. ನೌಕರರ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಬಗ್ಗೆ ಮಾರ್ಚ್ 1ರಿಂದ ರಾಜ್ಯಾದ್ಯಂತ ಪ್ರತಿಭಟನೆ: ಸಾರ್ವಜನಿಕ ಮಹತ್ವದ ವಿಚಾರದ ಬಗ್ಗೆ ವಿಧಾನಸಭೆ ಸಭಾಪತಿಯವರಿಗೆ ಪತ್ರ

Suddi Udaya

ಪ್ರಸಾರ ಭಾರತಿ ದೂರದರ್ಶನದಲ್ಲಿ ಇಳಂತಿಲದ ಭರತನಾಟ್ಯ ಕಲಾವಿದೆ ಕೃತಿ ಕೈಲಾರ್‌ಗೆ ಮಾನ್ಯತೆ

Suddi Udaya

ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ದೀಪಾರಾಧನೆ ರಂಗಪೂಜೆ

Suddi Udaya

ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ಮಡಿಕೇರಿ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರಾಗಿ ರಂಜಿತ್ ಪಾಲ್ತಾಡು ದೇವಸ್ಯ

Suddi Udaya
error: Content is protected !!