29.4 C
ಪುತ್ತೂರು, ಬೆಳ್ತಂಗಡಿ
August 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ತಕ್ವ ಜುಮ್ಮಾ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

ಬೆಳ್ತಂಗಡಿ ತಾಲ್ಲೂಕಿನ ಬಳಂಜ ಗ್ರಾಮದ ತಕ್ವ ಜುಮ್ಮಾ ಮಸೀದಿ ಬಳಂಜ ಇದರ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯ ಕ್ರಮ ಮಸೀದಿ ವಠಾರದಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು.

ದೇಶದ 80ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಮಸೀದಿಯ ಅಧ್ಯಕ್ಷರಾದ ಜನಾಬ್ ಉಸ್ಮಾನ್ ರವರು ನೆರವೇರಿಸಿದರು. ಜಮಾಅತಿನ ಹಿರಿಯರು ಯುವಕರು, ಮದರಸ ವಿದ್ಯಾರ್ಥಿಗಳು, ಆಡಳಿತ ಕಮಿಟಿಯ ಸದಸ್ಯರು ಪರಿಸರದ ನೂರಾರು ಜನರು ಈ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.

ಸ್ವಾತಂತ್ರ್ಯೋತ್ಸವ ಸಂಭ್ರಮದ ಬಗೆಯಾಗಿ ವಿದ್ಯಾರ್ಥಿಗಳಿಗೆ ನಡೆದ ಸ್ಪರ್ಧೆಯಲ್ಲಿ ವಿಜಯಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.ಇದರ ಪ್ರಾಯೋಜಕತ್ವವನ್ನು ರಿಯಾಝ್ ಕಾಪಿನಡ್ಕ ವಹಿಸಿದ್ದರು. ಮಸೀದಿಯ ಖತೀಬರಾದ ಝಮೀರ್ ಸಅದಿ ವಲ್ ಫಾಝಿಲ್ ದುಆ, ಸ್ವಾತಂತ್ರ್ಯೋತ್ಸವದ ಆಶಂಸ ಭಾಷಣ ನೆರವೇರಿಸಿದರು. ನೆರೆದ ಸಭಿಕರಿಗೆ , ವಿದ್ಯಾರ್ಥಿಗಳಿಗೆ,ಸಾರ್ವಜನಿಕರಿಗೆ , ಸಿಹಿತಿಂಡಿ ಹಂಚಲಾಯಿತು. ಪ್ರಯೋಜಕತ್ವವನ್ನು ಸ್ವಾದೀಕ್ ಬಳಂಜ ವಹಿಸಿದ್ದರು.

Related posts

ಎಕ್ಸೆಲ್ ಪದವಿ ಪೂರ್ವ ಕಾಲೇಜು: ಸಿ ಇ ಟಿ ಯಲ್ಲಿ ಅತ್ಯುತ್ತಮ ಫಲಿತಾಂಶ

Suddi Udaya

ಫೆ.7-8: ನಾಲ್ಕೂರು ಹುಂಬೆಜೆ ಪಲ್ಕೆಯಲ್ಲಿ ದೊಂಪದ ಬಲಿ ಮತ್ತು ಶ್ರೀ ಕೊಡಮಣಿತ್ತಾಯ ನೇಮ ಹಾಗೂ ಕಲ್ಲುರ್ಟಿ, ಕಲ್ಕುಡ ದೈವಗಳ ನೇಮೋತ್ಸವ

Suddi Udaya

ಬೆಳ್ತಂಗಡಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಮಹಿಳಾ ಪ್ರಕಾರ ಘಟಕದ ನೇತೃತ್ವದಲ್ಲಿ ಮಾತೃ ದೇವೋ ಭವ ಗೂಗಲ್ ಮೀಟ್ ಉಪನ್ಯಾಸ ಕಾರ್ಯಕ್ರಮ

Suddi Udaya

ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರ ರತ್ನಗಿರಿ ಜೀರ್ಣೋದ್ಧಾರ ಹಾಗೂ ಪ್ರತಿಷ್ಠಾ ಮಹೋತ್ಸವದ ಪೂರ್ವಭಾವಿಯಾಗಿ ಅನುಜ್ಞ ಕಲಶ ಮತ್ತು ಸಂಕೋಚ ವಿಧಿ

Suddi Udaya

ಗುರುವಾಯನಕೆರೆ: ಎನ್.ಇ.ಟಿ ನರ್ಸಿಂಗ್ ಕಾಲೇಜಿನ ಬಿಎಸ್‌ಸಿ ನರ್ಸಿಂಗ್ ವಿದ್ಯಾರ್ಥಿಗಳ ಲ್ಯಾಂಪ್ ಲೈಟಿಂಗ್ ಮತ್ತು ಪ್ರಮಾಣ ವಚನ ಸ್ವೀಕಾರ ಸಮಾರಂಭ

Suddi Udaya

ನಿಡ್ಲೆ ಗ್ರಾ.ಪಂ. ಅಧ್ಯಕ್ಷರಾಗಿ ಶ್ಯಾಮಲ, ಉಪಾಧ್ಯಕ್ಷರಾಗಿ ರುಕ್ಮಯ್ಯ ಪೂಜಾರಿ ಆಯ್ಕೆ

Suddi Udaya
error: Content is protected !!