31.2 C
ಪುತ್ತೂರು, ಬೆಳ್ತಂಗಡಿ
September 30, 2026
Uncategorized

ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದಿಂದ ಆಟಿಡೊಂಜಿ ದಿನ : ಬೆಸ್ಟ್ ಎಂ.ಎಲ್.ಎ ಪ್ರಶಸ್ತಿ ಪುರಸ್ಕೃತ ಶಾಸಕ ಹರೀಶ್ ಪೂಂಜರಿಗೆ ಗೌರವಾಪ೯ಣೆ

ಗುರುವಾಯನಕೆರೆ: ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಗುರುವಾಯನಕೆರೆ,ಕುಲಾಲ,ಕುಂಬಾರರ ಯುವ ವೇದಿಕೆ ಹಾಗೂ ಮಹಿಳಾ ವೇದಿಕೆ ಮತ್ತು ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಕಟ್ಟಡ ಸಮಿತಿ ಇದರ ಸಹಯೋಗದಲ್ಲಿ ನಡೆದ
ಆಟಿಡೊಂಜಿ ಹಾಗೂ ಬೆಸ್ಟ್ ಎಂ.ಎಲ್.ಎ ಪ್ರಶಸ್ತಿ ಪುರಸ್ಕೃತ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜಾರವರಿಗೆ
ಅಭಿನಂದನಾ ಕಾರ್ಯಕ್ರಮ ಆ.16ರಂದು ಕುಲಾಲ ಮಂದಿರದಲ್ಲಿ ಜರುಗಿತು

ಸಮಾರಂಭದಲ್ಲಿ ಬೆಸ್ಟ್ ಎಂ.ಎಲ್.ಎ ಪ್ರಶಸ್ತಿ ಪುರಸ್ಕೃತ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜರನ್ನು ಶಾಲು ಹೊದಿಸಿ, ಪೇಟಾ ತೊಡಿಸಿ ಕುಲಾಲ ಸಮಾಜದ ವತಿಯಿಂದ ಗೌರವಿಸಲಾಯಿತು.
ನಂತರ ಮಾತನಾಡಿದ ಶಾಸಕರು ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಲಾಲ ಸಂಘದ ಸಭಾ ಭವನ ನಿರ್ಮಾಣಕ್ಕೆ ರೂ.1.50 ಕೋಟಿ ಅನುದಾನ ಮಂಜೂರುಗೊಳಿಸಿದ್ದೇನೆ. ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ ಎಂದು ತಿಳಿಸಿ, ಕುಲಾಲ ಸಮಾಜದ ಸವ೯ತೋಮುಖ ಪ್ರಗತಿಗೆ ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಪ್ರಗತಿಪರ ಕೃಷಿಕರಾದ ವಿಶ್ವನಾಥ ಮೂಲ್ಯ ವರಕಬೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.ಸಭಾಧ್ಯಕ್ಷತೆಯನ್ನು ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ
ಪ್ರಭಾರ ಅಧ್ಯಕ್ಷರಾದ ಯಾದವ ಮೂಲ್ಯ ಮುಂಡೂರು ವಹಿಸಿ, ಆಟಿ ಆಚರಣೆಯ ವಿಶೇಷತೆ ಬಗ್ಗೆ ಮಾತನಾಡಿ, ಸಮಾಜದ ಸಂಘಟನೆಗೆ ಎಲ್ಲರ ಸಹಕಾರ ಕೋರಿದರು.

ಸಂಪನ್ಮೂಲ ವ್ಯಕ್ತಿ ಪ್ರಮೋದ್ ಕುಲಾಲ್, ಅಧ್ಯಕ್ಷರು, ಕುಲಾಲ ಸಮಾಜ ಕಲ್ಯಾಣ ಸಂಘ ಹೊಸ್ಕಾರು ಆಟಿ ಆಚರಣೆಯ ವಿಶೇಷತೆ ಬಗ್ಗೆ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಶ್ರೀಮತಿ ಸುಜಾತಾ ಪಿ. ಸಾಲ್ಯಾನ್, ದಿನೇಶ್ ಮೂಲ್ಯ ಕೊಂಡೆಮಾರ್ ಅಧ್ಯಕ್ಷರು, ಶ್ರೀ ಓಡೀಲು ಮಹಾಲಿಂಗೇಶ್ವರ ದೇವಸ್ಥಾನ ಪಡಂಗಡಿ, ಶ್ರೀಮತಿ ಜಯಶ್ರೀ ನಾರಾಯಣ ಭಾಗವಹಿಸಿದ್ದರು.
ಗೌರವಾಧ್ಯಕ್ಷ ಹರೀಶ್ ಕಾರಿಂಜ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಮೂಲ್ಯರ ಯಾನೆ ಕುಂಬಾರರ ಯುವ ವೇದಿಕೆ ಅಧ್ಯಕ್ಷ ಅವಿನಾಶ್ ಕುಲಾಲ್ ಮಾಣೂರು, ಕುಲಾಲ ಕುಂಬಾರರ ಮಹಿಳಾ ವೇದಿಕೆ ಅಧ್ಯಕ್ಷೆ ಶ್ರೀಮತಿ ಆಶಾಲತಾ ತಿಲಕ್‌ರಾಜ್,.
ನಿಕಟಪೂರ್ವ ಅಧ್ಯಕ್ಷ ಸೋಮಯ್ಯ ಮೂಲ್ಯ ಹನೈನಡೆ, ಕಾಯ೯ದಶಿ೯ ಕೆ.ಎನ್ ಸುಧೀರ್ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮಕ್ಕಳಿಗೆ ಆಟಿಯ ವಿವಿಧ ಆಟೋಟ ಕಾರ್ಯಕ್ರಮವನ್ನು ನಡೆಸಿ
ಬಹುಮಾನ ವಿತರಣೆ ಮಾಡಲಾಯಿತು. ಆಟಿಯ ವಿಶೇಷ ಭೋಜನ ಕೂಟ ನಡೆಯಿತು. ಪ್ರತ್ಯೂಷ್ ಮಾಲಾಡಿ ಪ್ರಾಥ೯ನೆ ಹಾಡಿದರು. ಉಪನ್ಯಾಸಕಿ ಕಾವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಜಗನ್ನಾಥ ವಂದಿಸಿದರು. ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ ಭೇಟಿ ನೀಡಿ ಶುಭ ಹಾರೈಸಿದರು

Related posts

ಧರ್ಮಸ್ಥಳ: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ: ವಾರೀಸುದಾರರು ಧರ್ಮಸ್ಥಳ ಠಾಣೆಯನ್ನು ಸಂಪರ್ಕಿಸುವಂತೆ ಮನವಿ

Suddi Udaya

ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ಮದುವೆ ಆಮಂತ್ರಣ ಕಳುಹಿಸಿದ ವರ: ವೈವಾಹಿಕ ಬದುಕಿಗೆ ಕಾಲಿಟ್ಟ ಸುಬ್ರಹ್ಮಣ್ಯ ಆಚಾರ್ಯ – ಸವಿತಾ ದಂಪತಿಗೆ ಪ್ರಧಾನಿ ಕಾರ್ಯಲಯದಿಂದ ತಲುಪಿತು ಶುಭಾಶಯ ಪತ್ರ

Suddi Udaya

ಓಡಿಲ್ನಾಳ: ಅಪಾಯಕಾರಿ ತಿರುವಿಗೆ ತುರ್ತಾಗಿ ತಡಬೇಲಿ ಹಾಕುವಂತೆ ಗ್ರಾಮಸ್ಥರ ಒತ್ತಾಯ

Suddi Udaya

ನಡ: ಭಾರೀ ಗಾಳಿಗೆ ಮನೆಗೆ ಮರ ಬಿದ್ದು ಹಾನಿ

Suddi Udaya

ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಾಧನೆಗೆ ಸಾಧನಾ ಪ್ರಶಸ್ತಿ

Suddi Udaya

ತಣ್ಣೀರುಪಂತ ಗ್ರಾ.ಪಂ. ಅಧ್ಯಕ್ಷರಾಗಿ ಹೇಮಾವತಿ, ಉಪಾಧ್ಯಕ್ಷರಾಗಿ ಪ್ರಿಯಾ ಆಯ್ಕೆ

Suddi Udaya
error: Content is protected !!