32.3 C
ಪುತ್ತೂರು, ಬೆಳ್ತಂಗಡಿ
October 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗುರುವಾಯನಕೆರೆ: ಅರಮಲೆಬೆಟ್ಟದಲ್ಲಿ ಶ್ರೀ ಕೊಡಮಣಿತ್ತಾಯ ದೈವದ ಸಂಭ್ರಮದ ಸೋಣದ ಕೋಲ

ಗುರುವಾಯನಕೆರೆ : ಇತಿಹಾಸ ಪ್ರಸಿದ್ಧ ಅರಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನದಲ್ಲಿ ಸಂಭ್ರಮದ ಸೋಣದಕೋಲ ಆ. 17 ರಂದು ವೈಭವದಿಂದ ಜರುಗಿತು.

ಬೆಳಗ್ಗೆ 9 ಗಂಟೆಗೆ ದೈವದ ಭಂಡಾರವನ್ನು ಮೆರವಣಿಗೆ ಮೂಲಕ ಕ್ಷೇತ್ರಕ್ಕೆ ತರಲಾಯಿತು. ನಂತರ ಸಂಕ್ರಮಣ ಪೂಜೆ ನಡೆಯಿತು.
12 ಗಂಟೆಯಿಂದ ದೈವಸ್ಥಾನದಲ್ಲಿ ಶ್ರೀ ಕೊಡಮಣಿತ್ತಾಯ ದೈವದ ಸೋಣಕೋಲ ವೈಭವದಿಂದ ಜರುಗಿತು.

ಕ್ಷೇತ್ರದ ಅನುವಂಶಿಕ ಆಡಳಿತ ಮೋಕ್ತೇಸರಾದ ಸುಖೇಶ್ ಕುಮಾರ್ ಕಡಂಬು, ಸುನೀಶ್ ಕುಮಾರ್ ಕಡಂಬು, ಎಕ್ಸೆಲ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಆನಂದ ಶೆಟ್ಟಿ ವಾತ್ಸಲ್ಯ, ವಿಠಲ ಶೆಟ್ಟಿ, ಚಿತ್ತರಂಜನ್ ಹೆಗ್ಡೆ, ಪ್ರದೀಪ್ ಶೆಟ್ಟಿ, ಪ್ರಕಾಶ್ ಜೈನ್ ಡೇವುಣಿ, ಸೀತಾರಾಮ ಶೆಟ್ಟಿ, ಪ್ರದೀಪ್ ಕುಮಾರ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಪ್ರೇಮ್ ಶೆಟ್ಟಿ, ಸಂತೋಷ್ ಕುಮಾರ್ ಜೈನ್, ವೃಷಭ ಆರಿಗಾ, ಧರಣೇಂದ್ರ ಕೆ.ಜೈನ್ ಹಾಗೂ ತಂತ್ರಿ ವಗ೯ದವರು ಉಪಸ್ಥಿತರಿದ್ದರು.


ಊರ ಹಾಗೂ ಪರವೂರ ಭಕ್ತಾಭಿಮಾನಿಗಳು ಆಗಮಿಸಿ ಶ್ರೀ ಕೊಡಮಣಿತ್ತಾಯ ದೈವದ ಗಂಧ ಪ್ರಸಾದ ಹಾಗೂ ಅನ್ನಪ್ರಸಾದ ಸ್ವೀಕರಿಸಿ ದೈವದ ಅನುಗ್ರಹಕ್ಕೆ ಪಾತ್ರರಾದರು.

Related posts

ಹುಣ್ಸೆಕಟ್ಟೆ : ಆಟೋ ಚಾಲಕ ಪಿ.ಹರೀಶ್ಚಂದ್ರ ನಿಧನ

Suddi Udaya

ಉಜಿರೆ ಅನುಗ್ರಹ ಶಿಕ್ಷಣ ಸಂಸ್ಥೆಯಲ್ಲಿ ಇಗ್ನೈಟ್ ವಿಜ್ಞಾನ ವಸ್ತು ಪ್ರದರ್ಶನ

Suddi Udaya

ಶಿಬಾಜೆ : ಹಾವುಗಳ ಗುರುತಿಸುವಿಕೆ ಮುನ್ನೆಚ್ಚರಿಕೆ ಮತ್ತು ಪ್ರಥಮ ಚಿಕಿತ್ಸೆ ಮಾಹಿತಿ ಕಾರ್ಯಕ್ರಮ

Suddi Udaya

ಬಜಿರೆ: ಸಾರ್ವಜನಿಕ ಶ್ರೀ ಶನೇಶ್ವರ ಪೂಜೆ-ಧಾರ್ಮಿಕ ಸಭೆ

Suddi Udaya

ಕುತ್ಲೂರು ಸರಕಾರಿ ಶಾಲಾ ಮಕ್ಕಳಿಗೆ ಬಿಎಎಸ್ಎಫ್ ಸಂಸ್ಥೆಯಿಂದ ಪುಸ್ತಕ ಸಾಮಾಗ್ರಿ ಕೊಡುಗೆ

Suddi Udaya

ಮುಂಡಾಜೆ‌: ಮಸ್ಲಕ್ ನವೀಕೃತ ಮದರಸ ಉದ್ಘಾಟನೆ: ಹಜ್ಜ್ ಯಾತ್ರಿ ಕಾಜೂರು ತಂಙಳ್ ರಿಗೆ ಬೀಳ್ಕೊಡುಗೆ

Suddi Udaya
error: Content is protected !!