23.2 C
ಪುತ್ತೂರು, ಬೆಳ್ತಂಗಡಿ
August 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿನಿಧನರಾಜಕೀಯರಾಜ್ಯ ಸುದ್ದಿ

ಅಲ್ಪಾವಧಿಯಲ್ಲಿ ದೊರೆತ ಅವಕಾಶ ಸದ್ಭಳಕೆ ಮಾಡಿ ಶಿಕ್ಷಣ ಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸಿದವರು ಬಿ.ಸಿ ನಾಗೇಶ್ :ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ಕರ್ನಾಟಕ ಸರಕಾರದ ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ರವರ ಅಗಲುವಿಕೆಗೆ ಬೆಳ್ತಂಗಡಿ ಶಾಸಕರ ಹರೀಶ್ ಪೂಂಜ ಸಂತಾಪ‌ ಸೂಚಿಸಿದ್ದಾರೆ.

ದಿವಂಗತರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಮುಖಂಡರಾಗಿ ಸಾಮಾಜಿಕ ಶೈಕ್ಷಣಿಕ ಕ್ಷೇತ್ರದಲ್ಲಿ ನೀಡಿದ ಕೊಡುಗೆ ಅನನ್ಯವಾಗಿದ್ದು, ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ಕರ್ನಾಟಕ ಸರಕಾರದಲ್ಲಿ ಶಿಕ್ಷಣ ಸಚಿವರಾಗಿ ಅವಕಾಶ ದೊರೆತ ಅಲ್ಪಾವಧಿಯಲ್ಲಿ ಅನುಪಮ ಸೇವೆ ಸಲ್ಲಿಸಿದ ಧೀಮಂತ ನಾಯಕ‌ ಬಿಸಿ ನಾಗೇಶ್ ರಾಗಿದ್ದರು.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದೇಶದಲ್ಲಿ‌ ಮೊಟ್ಟ ಮೊದಲು ಕರ್ನಾಟಕದಲ್ಲಿ ಅನುಷ್ಟಾನಗೊಳಿಸಿದ್ದರು. ಶಾಲಾ ಪಠ್ಯ ಪುಸ್ತಕಗಳ ಪರಿಷ್ಕರಣೆ ಸರ್ಕಾರಿ ಶಾಲೆಗಳ ಪುನಶ್ಚೇತನಕ್ಕೆ ವಿವೇಕ ಯೋಜನೆ ದೂರದೃಷ್ಟಿಯ ಯೋಜನೆಯಾಗಿತ್ತು. ಬೆಳ್ತಂಗಡಿ ತಾಲೂಕಿನ 55 ಶಾಲೆಗಳಲ್ಲಿ ಎಂ.ಆರ್.ಪಿ.ಎಲ್ ಸಿಎಸ್ ಆರ್ ನಿಧಿ ಮಂಜೂರುಗೊಳಿಸುವಲ್ಲಿ ದಿವಂಗತರ ಪಾತ್ರ ಮಹತ್ವವಾಗಿತ್ತು. ಸರಳ ಸಜ್ಜನಿಕೆಯ ವ್ಯಕ್ತಿತ್ವದ ನಾಗೇಶ್ ರ ನಿಧನ ಸಮಾಜಕ್ಕೆ ತುಂಬಲಾಗದ ನಷ್ಟ ದಿವಂಗತರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಶಾಸಕ ಹರೀಶ್ ಪೂಂಜ ಪತ್ರಿಕಾ ಪ್ರಕಟಣೆ ಮೂಲಕ ಶ್ರದ್ಧಾಂಜಲಿ ವ್ಯಕ್ತ ಪಡಿಸಿದ್ದಾರೆ.

Related posts

ಉಜಿರೆ: ನಾಪತ್ತೆಯಾಗಿದ್ದ ಕ್ರೀಡಾ ವಸತಿ ನಿಲಯದ ಪಿಯುಸಿ ವಿದ್ಯಾರ್ಥಿನಿ ಹೈದರಾಬಾದ್ ನಲ್ಲಿ ಪತ್ತೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಪೋಷಕರ ಸಭೆ

Suddi Udaya

ಆರೋಗ್ಯ ಸೇವೆಯ ಬೆನ್ನೆಲುಬಾದ ಆಶಾ ಕಾರ್ಯಕರ್ತೆಯರಿಗೆ ನ್ಯಾಯ ನೀಡಿ: ಭಾರತೀಯ ಮಜ್ದೂರು ಸಂಘ ಆಗ್ರಹ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಲೋಕಸಭಾ ಚುನಾವಣೆಯ ಪ್ರಯುಕ್ತ ಸಭೆ

Suddi Udaya

ನಾವರ ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮಕಲಶೋತ್ಸವ ಪೂರ್ವಾಭಾವಿ ಸಭೆ

Suddi Udaya

ಜೂನಿಯರ್ ಅಥ್ಲೆಟಿಕ್ಸ್ ರಿಲೇ ರೇಸ್: ಕಲ್ಲೇರಿಯ ಯತಿನ್ ನಾಯ್ಕ್ ರಿಗೆ ಚಿನ್ನದ ಪದಕ

Suddi Udaya
error: Content is protected !!