28.4 C
ಪುತ್ತೂರು, ಬೆಳ್ತಂಗಡಿ
October 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕಲಾಯ ಗುತ್ತು ಧರ್ಮಚಾವಡಿಯಲ್ಲಿ ಸಂಪತ್ ಬಿ. ಸುವರ್ಣರಿಗೆ ಅಭಿನಂದನೆ

ಬೆಳ್ತಂಗಡಿ: ತುಳುನಾಡಿನ ಹೆಮ್ಮೆಯ ಸಾಂಪ್ರದಾಯಿಕ ಕೌಟುಂಬಿಕ ಪರಂಪರೆ ಹಾಗೂ ಧಾರ್ಮಿಕ ಕೇಂದ್ರವಾದ ಶ್ರೀ ಕಲಾಯ ಗುತ್ತು ಧರ್ಮಚಾವಡಿಯಲ್ಲಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಸಂಪತ್ ಬಿ. ಸುವರ್ಣ ಅವರಿಗೆ ಕಲಾಯಗುತ್ತಿನ ಕುಟುಂಬಸ್ಥರಿಂದ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಯಿತು.

ಕರಾವಳಿ ಭಾಗದ ಗುತ್ತಿನ ಮನೆಗಳ ಸಾಂಸ್ಕೃತಿಕ ಹಿನ್ನೆಲೆ, ದೈವಾರಾಧನೆ ಹಾಗೂ ಸಾಮಾಜಿಕ ಒಗ್ಗಟ್ಟನ್ನು ಉಳಿಸಿ ಬೆಳೆಸುವಲ್ಲಿ ಕಲಾಯಿ ಗುತ್ತು ಧರ್ಮಚಾವಡಿಯು 200 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ್ದು ತನ್ನದೇ ಆದ ವಿಶಿಷ್ಟ ಕೊಡುಗೆಯನ್ನು ನೀಡುತ್ತಾ ಬಂದಿದೆ.

ಈ ಧರ್ಮಚಾವಡಿಯ ನೇತೃತ್ವವನ್ನು ವಹಿಸಿಕೊಂಡು, ಕೌಟುಂಬಿಕ ಧಾರ್ಮಿಕ ಆಚರಣೆಗಳನ್ನು ಶ್ರದ್ಧಾಭಕ್ತಿಯಿಂದ ಮುನ್ನಡೆಸುತ್ತಿರುವ ಯಜಮಾನ ಚಿದಾನಂದ ಪೂಜಾರಿ ಅವರ ನೇತೃತ್ವದಲ್ಲಿ, ಸಂಪತ್ ಬಿ.ಸುವರ್ಣ ಅವರ ಸೇವೆಯನ್ನು ಶ್ಲಾಘಿಸಿ ಈ ಗೌರವ ಸಮರ್ಪಿಸಲಾಯಿತು.

ಈ ಸಂದರ್ಭದಲ್ಲಿ ಕಲಾಯ ಗುತ್ತು ಕುಟುಂಬಸ್ಥರಾದ ಉಮೇಶ್ ಪೂಜಾರಿ ಕಲಾಯ ಪ್ರಭಾಕರ ಪೂಜಾರಿ ಕಲಾಯ, ಆನಂದ ಪೂಜಾರಿ ಕಲಾಯ ,ಸುರೇಶ್ ಪೂಜಾರಿ ಕಲಾಯ, ಸುಂದರ ಪೂಜಾರಿ ಕಲಾಯ ,ಪದ್ಮ ಪೂಜಾರಿ ವೇಣೂರು, ಜನಾರ್ಧನ ಪೂಜಾರಿ ವೇಣೂರು ಹಾಗೂ ಸುಮಾರು 400 ಕುಟುಂಬಿಕರ ಸಮ್ಮುಖದಲ್ಲಿ ಈ ಗೌರವ ಅಭಿನಂದನೆ ಜರುಗಿತು.

Related posts

ಉಜಿರೆ ಬ್ರಹ್ಮಕಲಶೋತ್ಸವದ “ಸುಪ್ರಸಾದ” ಭೋಜನ ಶಾಲೆಯಲ್ಲಿ” “ಮುಷ್ಠಿ ಅಕ್ಕಿ” ವಿಶೇಷ ಸೇವೆ

Suddi Udaya

ಅಂಡಿಂಜೆ : ನೆಲ್ಲಿಂಗೇರಿ ಸ.ಕಿ.ಪ್ರಾ. ಶಾಲೆ ಮತ್ತು ಅಂಗನವಾಡಿ ಕೇಂದ್ರದಲ್ಲಿ ಶ್ರೀಮತಿ ಇಂದಿರಾ ಗಾಂಧಿಯವರ ಜನ್ಮದಿನಾಚರಣೆ

Suddi Udaya

ಬಳಂಜ ಶ್ರೀ ಪಂಚಲಿಂಗೇಶ್ವರ- ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವ

Suddi Udaya

ಉಜಿರೆ: ರುಡ್‌ಸೆಟ್ ಸಂಸ್ಥೆಯಲ್ಲಿ ಮೊಬೈಲ್ ರಿಪೇರಿ ತರಬೇತಿ ಕಾರ್ಯಕ್ರಮದ ಸಮಾರೋಪ

Suddi Udaya

ಬೆಳ್ತಂಗಡಿ ಟೈಲರ್ ಅಸೋಸಿಯೇಶನ್ ವತಿಯಿಂದ ಗುರುವಾಯನಕೆರೆ ಡಾ| ವೇಣುಗೋಪಾಲ ಶರ್ಮರವರಿಗೆ ಸನ್ಮಾನ

Suddi Udaya

ಮಾಜಿ‌ ಸಚಿವ ಯು.ಟಿ ಖಾದರ್ ಕಾಜೂರು ದರ್ಗಾಶರೀಫ್ ಗೆ ಭೇಟಿ

Suddi Udaya
error: Content is protected !!