23.7 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಕ್ಯಪದವು ಎಲ್.ಸಿ.ಆರ್ ವಿದ್ಯಾಸಂಸ್ಥೆಯಲ್ಲಿ ಪದವಿ ವಿಭಾಗದ ವಿದ್ಯಾರ್ಥಿ‌‌ಸಂಘದ ಉದ್ಘಾಟನೆ ಹಾಗೂ ಸ್ವಾಗತ ಕಾರ್ಯಕ್ರಮ

ಕಕ್ಯಪದವು: ಪಾದೆಗುತ್ತು ಲಿಂಗಪ್ಪ ಮಾಸ್ತರ್ ಎಜುಕೇಷನಲ್ ಟ್ರಸ್ಟ್(ರಿ). ನಿಂದ ನಡೆಸಲ್ಪಡುವ ಎಲ್.ಸಿ.ಆರ್ ವಿದ್ಯಾಸಂಸ್ಥೆ ಕಕ್ಯಪದವು ಇಲ್ಲಿನ ಪದವಿ ವಿಭಾಗದಲ್ಲಿ 2026-27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆಯೊಂದಿಗೆ ಶೈಕ್ಷಣಿಕ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡುವುದರೊಂದಿಗೆ ಪ್ರಥಮ ಪದವಿ ವಿಭಾಗದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ “ಆಗಾಝ್” ಹಮ್ಮಿಕೊಳ್ಳಲಾಯಿತು.

ಸಂಸ್ಥೆಯ ಸಂಯೋಜಕರಾದ ಯಶವಂತ ಜಿ.ನಾಯಕ್ ದೀಪ ಬೆಳಗಿಸಿ ವಿದ್ಯುಕ್ತವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪದವಿ ವಿಭಾಗದ ಮುಖ್ಯಸ್ಥರಾದ ದೀಕ್ಷಿತಾ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಸಂಸ್ಥೆಯ ಪ್ರಾಂಶುಪಾಲರಾದ ಜೋಸ್ಟನ್ ಲೋಬೊ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿ ಶಕ್ತಿಯು ಅನಾವರಣಗೊಳ್ಳಬೇಕಾದರೆ ಸಾಂಘಿಕ ಪ್ರಯತ್ನಗಳು ಸಂಘದ ಮೂಲಕ ನಢಯಬೇಕು, ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು, ಜ್ಞಾನವನ್ನು ಸಂಪಾದಿಸಿಕೊಂಡು ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಶುಭಹಾರೈಸಿದರು.

ವಿದ್ಯಾರ್ಥಿ ಸಂಘದ ನಾಯಕ ದೀಕ್ಷಿತ್ ಸ್ವಾಗತಿಸಿ, ಫಾತಿಮಾ ಶೀಮಾ ಸಹದಿಯಾ ವಂದಿಸಿ, ದೀಕ್ಷಾ ಹಾಗೂ ರೇಷ್ಮಾ ಕಾರ್ಯಕ್ರಮ ನಿರೂಪಿಸಿದರು.

Related posts

ಬೆಳಾಲು: ಮಂಗಿಲ ನಿವಾಸಿ, ಕಬಡ್ಡಿ ಆಟಗಾರ ಸುನಿತ್‌ ಮಂಗಿಲ ನಿಧನ

Suddi Udaya

ದರ್ಭೆತಡ್ಕ ಸುದೆಗಂಡಿಯಲ್ಲಿ ಕಿರು ಸೇತುವೆಯ ದುರಸ್ತಿ ಕಾರ್ಯದ ಬಗ್ಗೆ ಗ್ರಾಮಸ್ಥರ ಸಭೆ: ಸಮಿತಿ ರಚನೆ

Suddi Udaya

ದೆಹಲಿಯಲ್ಲಿ ಕೇಂದ್ರ ಸರಕಾರದ ವಿರುದ್ದ ಯುವ ಕಾಂಗ್ರೇಸ್ ನಿಂದ ಸಂಸತ್ ಘೇರಾವ್ ಪ್ರತಿಭಟನೆ: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ರಾಜ್ಯ ಕಾರ್ಯದರ್ಶಿ ಅಭಿನಂದನ್ ಹರೀಶ್ ಕುಮಾರ್ ಭಾಗಿ

Suddi Udaya

ಓಡಿಲ್ನಾಳ ಸ. ಉ. ಪ್ರಾ. ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ

Suddi Udaya

ನಾಲ್ಕೂರು: ಗಾಳಿ ಮಳೆಗೆ ಬಾಕ್ಯರಡ್ಡದಲ್ಲಿ ಹಟ್ಟಿ ಕುಸಿತ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜ. 19 ರಿಂದ ಸಂಜೆ ಕ್ಲಿನಿಕ್ ಪ್ರಾರಂಭ

Suddi Udaya
error: Content is protected !!