25.6 C
ಪುತ್ತೂರು, ಬೆಳ್ತಂಗಡಿ
October 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬಾಲಕಿಯ ಮೇಲೆ ಅತ್ಯಾಚಾರ : ವೇಣೂರಿನ ರಿಕ್ಷಾ ಚಾಲಕ ಜಮಾಲುದ್ದೀನ್ ಬಂಧನ

ಬೆಳ್ತಂಗಡಿ: ಪೋಕ್ಸೋ ಕಾಯ್ದೆಯಡಿ ರಿಕ್ಷಾ ಚಾಲಕನನ್ನು ವೇಣೂರು ಠಾಣಾ ಪೊಲೀಸರು ಬಂಧಿಸಿದ್ದಾರೆ. ಅಪ್ರಾಪ್ತ ಪ್ರಾಯದ ಸಂತ್ರಸ್ಥ ಬಾಲಕಿ (14) ಕೆಲವು ತಿಂಗಳುಗಳಿಂದ ವೇಣೂರು ನಿವಾಸಿ ಜಮಾಲುದ್ದೀನ್ ಎಂಬಾತನ ರಿಕ್ಷಾದಲ್ಲಿ ಶಾಲೆಗೆ ಹೋಗಿ ಬರುತ್ತಿದ್ದಳು. ಈ ವೇಳೆ ಜಮಾಲುದ್ದೀನ್ ಅನುಚಿತವಾಗಿ ವರ್ತಿಸುತ್ತಿದ್ದ. ಈ ಬಗ್ಗೆ ಬಾಲಕಿ ಪ್ರತಿರೋಧಿಸಿದಾಗ ಜಮಾಲುದ್ದೀನ್ ಜೀವಬೆದರಿಕೆ ಒಡ್ಡಿದ್ದಾನೆ. ಇದರಿಂದಾಗಿ ಹೆದರಿದ್ದ ಬಾಲಕಿ ಆತನ ವರ್ತನೆಯ ಬಗ್ಗೆ ಯಾರಿಗೂ ತಿಳಿಸಿಲ್ಲ.

ಆ.13ರಂದು ಸಂಜೆ ಬಾಲಕಿ ಆಕೆಯ ಮನೆಯಲ್ಲಿ ಒಬ್ಬಳೇ ಇದ್ದಾಗ ಮನೆಗೆ ಬಂದ ಜಮಾಲುದ್ದೀನ್ ಆಕೆಯನ್ನು ಬೆದರಿಸಿ ಅತ್ಯಾಚಾರವೆಸಗಿದ್ದಾನೆ ಎಂದು ಆ. 15ರಂದು ನೀಡಿದ ದೂರಿನ ಮೇರೆಗೆ ವೇಣೂರು ಪೊಲೀಸ್ ಠಾಣಾ .: 56/2026 ໖໐: 75(2), 64(1), 65(1), 351(3) BNS 2023 : 4(2), 8, 12 ಪೋಕ್ಸ್‌ ಕಾಯಿದೆ- 2012 ರಂತೆ ಪ್ರಕರಣ ದಾಖಲಾಗಿದೆ. ಆರೋಪಿ ಜಮಾಲುದ್ದೀನನ್ನು ಆ.15ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

Related posts

ನೀಟ್ ಪರೀಕ್ಷೆಯಲ್ಲಿ ಎಕ್ಸೆಲ್ ನ ವಿದ್ಯಾರ್ಥಿಗೆ 692 ಅಂಕ

Suddi Udaya

ಉದ್ಯೋಗದ ಪ್ರಥಮ ವೇತನ ಬಾರ್ಯ ಶ್ರೀ ಮಹಾವಿಷ್ಣು ಕ್ಷೇತ್ರಕ್ಕೆ ಸಮರ್ಪಣೆ

Suddi Udaya

ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ತಿಂಗಳ ಸಭೆ ಹಾಗೂ ಆಟಿಡ್ ಒಂಜಿ ವಿಶೇಷ ತಿನಸ್

Suddi Udaya

ಮೇ. 5-9: ದೇವನಾರಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬೆಳ್ತಂಗಡಿ: ತಾಲೂಕಿನ ಕ್ರೀಡಾಪಟುಗಳಿಗೆ ಶಾಸಕ ಹರೀಶ್ ಪೂಂಜರಿಂದ ಕ್ರೀಡಾ ಸಮವಸ್ತ್ರ ಕೊಡುಗೆ

Suddi Udaya

ಲಾಯಿಲ ಸೇತುವೆ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

Suddi Udaya
error: Content is protected !!