24.8 C
ಪುತ್ತೂರು, ಬೆಳ್ತಂಗಡಿ
August 23, 2026
ಶಾಲಾ ಕಾಲೇಜು

ದೇಶಪ್ರೇಮದ ನಾದಮಿಡಿತ: ಉಜಿರೆಯಲ್ಲಿ ಭಾರತ್ ಸ್ಕೌಟ್ಸ್–ಗೈಡ್ಸ್ ವಿದ್ಯಾರ್ಥಿಗಳ ಭವ್ಯ ಗೀತಗಾಯನ ಸ್ಪರ್ಧೆ

ಉಜಿರೆ: “ಸೋಲು–ಗೆಲುವಿನ ಲೆಕ್ಕಾಚಾರವನ್ನು ಬದಿಗೊತ್ತಿ, ಸ್ಪರ್ಧಾತ್ಮಕ ಮನೋಭಾವದಿಂದ ಮುನ್ನಡೆದಾಗ ಮಾತ್ರ ಯಶಸ್ಸು ಸಾಧ್ಯ. ಸಂಗೀತ ಹಾಗೂ ಯುವ ಸಂಘಟನೆಗಳು ದೇಶಭಕ್ತಿಯ ಉತ್ತುಂಗ ಭಾವನೆಯನ್ನು ಜಾಗೃತಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ,” ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಂಯೋಜಕ ಪ್ರೊ. ಎಸ್. ಎನ್. ಕಾಕತ್ಕರ್ ಅಭಿಪ್ರಾಯಪಟ್ಟರು.

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ಸಹಯೋಗದೊಂದಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಬೆಳ್ತಂಗಡಿ ಹಾಗೂ ರೋಟರಿ ಕ್ಲಬ್ ಬೆಳ್ತಂಗಡಿ ಜಂಟಿಯಾಗಿ ಆಯೋಜಿಸಿದ್ದ ತಾಲೂಕು ಮಟ್ಟದ ಸ್ಕೌಟ್ಸ್–ಗೈಡ್ಸ್ ಗೀತಗಾಯನ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ಕೌಟಿಂಗ್–ಗೈಡಿಂಗ್ ಅವಕಾಶಗಳ ಆಗರ

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್ ರಾಜ್ ಕೆ. ಅವರು, “ಸ್ಕೌಟಿಂಗ್ ಮತ್ತು ಗೈಡಿಂಗ್ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯವನ್ನು ಅನಾವರಣಗೊಳಿಸಲು ಇರುವ ಹೆಬ್ಬಾಗಿಲಾಗಿದೆ. ದೊರೆಯುವ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು,” ಎಂದರು.

ಜಿಲ್ಲಾ ಸಹಾಯಕ ಆಯುಕ್ತ ಬಿ. ಸೋಮಶೇಖರ ಶೆಟ್ಟಿ ಶುಭ ಹಾರೈಸಿ, ವಿದ್ಯಾರ್ಥಿ ದೆಸೆಯಲ್ಲಿಯೇ ದೇಶಪ್ರೇಮದ ಬೀಜ ಬಿತ್ತುವಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದರು.

ರೋಟರಿ ಕ್ಲಬ್ ಬೆಳ್ತಂಗಡಿ ಅಧ್ಯಕ್ಷ ಶ್ರೀಧರ್ ಕೆ.ವಿ. ಮಾತನಾಡಿ, “ಸಮಾಜದ ಏಳಿಗೆಯೇ ನಮ್ಮ ಮೂಲ ಉದ್ದೇಶ. ಸಮಾಜಮುಖಿ ಹಾಗೂ ಸತ್ಕಾರ್ಯಗಳಿಗೆ ರೋಟರಿ ಸಂಸ್ಥೆಯ ಬೆಂಬಲ ಸದಾ ಇರಲಿದೆ,” ಎಂದು ಭರವಸೆ ನೀಡಿದರು.

ಸಮಾಜಕ್ಕೆ ವಿದ್ಯಾರ್ಥಿಗಳೇ ದಾರಿದೀಪ

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಮಾತನಾಡಿ, “ರಚನಾತ್ಮಕ ಚಟುವಟಿಕೆಗಳು ಸಮಾಜವನ್ನು ಸುಸ್ಥಿತಿಯಲ್ಲಿಡಲು ಸಹಕಾರಿಯಾಗುತ್ತವೆ. ವಿದ್ಯಾರ್ಥಿಗಳು ಇಂತಹ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಮಾಜಕ್ಕೆ ದಾರಿದೀಪವಾಗಬೇಕು,” ಎಂದು ಕರೆ ನೀಡಿದರು.

248ಕ್ಕೂ ಅಧಿಕ ವಿದ್ಯಾರ್ಥಿಗಳಿಂದ ನಾದಸಿರಿ

ಬೆಳ್ತಂಗಡಿ ತಾಲೂಕಿನ 12 ವಿವಿಧ ಶಿಕ್ಷಣ ಸಂಸ್ಥೆಗಳಿಂದ ಆಗಮಿಸಿದ್ದ 248ಕ್ಕೂ ಅಧಿಕ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ದೇಶಭಕ್ತಿ ಹಾಗೂ ಸ್ಪೂರ್ತಿದಾಯಕ ಗೀತೆಗಳನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತಂದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಡಾ. ರಾಘವೇಂದ್ರ ಪಿದಾಮಲೆ, ಕಾಲೇಜಿನ ಉಪ ಪ್ರಾಚಾರ್ಯ ಡಾ. ರಾಜೇಶ್ ಬಿ. ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಬೆಳ್ತಂಗಡಿ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಪ್ರಮೀಳಾ ಉಪಸ್ಥಿತರಿದ್ದರು.

ರೋವರ್ ಸ್ಕೌಟ್ ಲೀಡರ್ ಲಕ್ಷ್ಮೀಶ್ ಭಟ್ ಸ್ವಾಗತಿಸಿದರು. ರೇಂಜರ್ ಲೀಡರ್ ಅಂಕಿತಾ ಎಂ.ಕೆ. ಕಾರ್ಯಕ್ರಮ ನಿರೂಪಿಸಿದರು. ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಪ್ರಮೀಳಾ ಧನ್ಯವಾದ ಸಮರ್ಪಿಸಿದರು.

ವಿವಿಧ ವಿಭಾಗಗಳ ಫಲಿತಾಂಶ

ಕಬ್ ವಿಭಾಗ

  1. ಪ್ರಥಮ: ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳ
  2. ದ್ವಿತೀಯ: ಎಸ್.ಡಿ.ಎಂ. ಸಿಬಿಎಸ್‌ಇ, ಉಜಿರೆ
  3. ತೃತೀಯ: ವಾಣಿ ಆಂಗ್ಲ ಮಾಧ್ಯಮ ಶಾಲೆ, ಹಳೆಕೋಟೆ

ಬುಲ್‌ಬುಲ್ ವಿಭಾಗ

  1. ಪ್ರಥಮ: ವಾಣಿ ಆಂಗ್ಲ ಮಾಧ್ಯಮ ಶಾಲೆ
  2. ದ್ವಿತೀಯ: ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳ
  3. ತೃತೀಯ: ಎಸ್.ಡಿ.ಎಂ. ಸಿಬಿಎಸ್‌ಇ, ಉಜಿರೆ

ಸ್ಕೌಟ್ ವಿಭಾಗ

  1. ಪ್ರಥಮ: ಅನುಗ್ರಹ ಇಂಗ್ಲಿಷ್ ಮೀಡಿಯಂ ಸ್ಕೂಲ್, ಉಜಿರೆ
  2. ದ್ವಿತೀಯ: ವಾಣಿ ಆಂಗ್ಲ ಮಾಧ್ಯಮ ಶಾಲೆ, ಹಳೆಕೋಟೆ
  3. ತೃತೀಯ: ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳ

ಗೈಡ್ ವಿಭಾಗ

  1. ಪ್ರಥಮ: ಎಸ್.ಡಿ.ಎಂ. ಸಿಬಿಎಸ್‌ಇ ಉಜಿರೆ
  2. ದ್ವಿತೀಯ: ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿ
  3. ತೃತೀಯ: ವಾಣಿ ಆಂಗ್ಲ ಮಾಧ್ಯಮ ಶಾಲೆ

ರೋವರ್ ವಿಭಾಗ

  1. ಪ್ರಥಮ: ವಾಣಿ ಪದವಿ ಪೂರ್ವ ಕಾಲೇಜು, ಬೆಳ್ತಂಗಡಿ
  2. ದ್ವಿತೀಯ: ಎಸ್.ಡಿ.ಎಂ. ಪದವಿ ಪೂರ್ವ ಕಾಲೇಜು, ಉಜಿರೆ

ರೇಂಜರ್ ವಿಭಾಗ

  1. ಪ್ರಥಮ: ವಾಣಿ ಪದವಿ ಪೂರ್ವ ಕಾಲೇಜು, ಬೆಳ್ತಂಗಡಿ
  2. ದ್ವಿತೀಯ: ಸರ್ಕಾರಿ ಪದವಿ ಪೂರ್ವ ಕಾಲೇಜು, ನಡ
  3. ತೃತೀಯ: ಸರ್ಕಾರಿ ಪದವಿ ಪೂರ್ವ ಕಾಲೇಜು, ಬೆಳ್ತಂಗಡಿ

ರೋವರ್ ಹಾಗೂ ರೇಂಜರ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಗಳು ಜಿಲ್ಲಾ ಮಟ್ಟದ ಗೀತಗಾಯನ ಸ್ಪರ್ಧೆಗೆ ಆಯ್ಕೆಯಾಗಿವೆ.

ದೇಶಭಕ್ತಿ, ಸಂಗೀತ, ಶಿಸ್ತು ಮತ್ತು ಸೌಹಾರ್ದತೆಯ ಸೊಗಡನ್ನು ಒಂದೇ ವೇದಿಕೆಯಲ್ಲಿ ಮೂಡಿಸಿದ ಈ ಗೀತಗಾಯನ ಸ್ಪರ್ಧೆ ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮ ಹಾಗೂ ಆತ್ಮವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸುವ ಮೂಲಕ ಅರ್ಥಪೂರ್ಣವಾಗಿ ಮೂಡಿಬಂತು.

Related posts

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಬೆಳ್ತಂಗಡಿ ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಶಾಲಾ ವಿದ್ಯಾರ್ಥಿಗಳಿಗೆ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಸಂಸ್ಥೆಯಿಂದ ಉಚಿತ ಕಲಿಕಾ ಸಾಮಗ್ರಿಗಳ ವಿತರಣೆ

Suddi Udaya

ಎಸ್‌ಡಿಎಂ ಕಾಲೇಜು: ‘ಬರೋಡಾ ಅಚೀವರ್ಸ್ ಅವಾರ್ಡ್-2026’

Suddi Udaya

ಅತ್ತಾಜೆ ಮುಹಿಯುದ್ದೀನ್ ಅರಬಿಕ್ ಮದರಸಕ್ಕೆ ಪಬ್ಲಿಕ್ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ

Suddi Udaya

ಪಿಯುಸಿ ಫಲಿತಾಂಶ: ರಾಜ್ಯಮಟ್ಟದಲ್ಲಿ ಅತ್ಯುತ್ತಮ ಸಾಧನೆಗೈದ ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿಗಳು, ಶೇ.100 ಫಲಿತಾಂಶ

Suddi Udaya

ನಾರಾವಿ ಸರಕಾರಿ ಪ್ರೌಢಶಾಲೆಗೆ ಶೇ.100 ಫಲಿತಾಂಶ

Suddi Udaya
error: Content is protected !!