28.1 C
ಪುತ್ತೂರು, ಬೆಳ್ತಂಗಡಿ
October 9, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕೊಕ್ಕಡ ಕಪಿಲಾ ಘಟಕದ ವ್ಯವಹಾರ ವಿಭಾಗದ ಉಪಾಧ್ಯಕ್ಷ ವಿಕ್ಟರ್ ಸುವಾರಿಸ್ ರಿಗೆ ವಲಯ ಪ್ರತಿಷ್ಠಿತ ಸಾಧನಾಶ್ರೀ ಪ್ರಶಸ್ತಿ

ಮಡಂತ್ಯಾರು : ಜೆಸಿಐ ಮಡಂತ್ಯಾರು ಆತಿಥ್ಯದಲ್ಲಿ ನಡೆದ ವ್ಯವಹಾರ ಹಾಗೂ ಅಭಿವೃದ್ಧಿ ಮತ್ತು ಬೆಳವಣಿಗೆ ಸಮ್ಮೇಳನ ‘ಮೃದಿನಿ’ ಕಾರ್ಯಕ್ರಮದಲ್ಲಿ ಜೆಸಿಐ ಕೊಕ್ಕಡ ಕಪಿಲಾ ಘಟಕದ ವ್ಯವಹಾರ ವಿಭಾಗದ ಉಪಾಧ್ಯಕ್ಷ ವಿಕ್ಟರ್ ಸುವಾರಿಸ್ ಅವರು ವಲಯ ಪ್ರತಿಷ್ಠಿತ ಸಾಧನಾಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮಡಂತ್ಯಾರಿನಲ್ಲಿ ನಡೆದ ವಲಯ 15ರ ಸಮ್ಮೇಳನದಲ್ಲಿ ವಲಯಾಧ್ಯಕ್ಷರಾದ ಸಂತೋಷ್ ಶೆಟ್ಟಿ ಅವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ದಿವಂಗತ ಫಿಲೀಪ್ ಸುವಾರಿಸ್ ಹಾಗೂ ಶ್ರೀಮತಿ ಬೆನೆಡಿಕ್ಟ ಮೆಂಡೊನ್ಸಾ ದಂಪತಿಯ ದ್ವಿತೀಯ ಪುತ್ರರಾದ ವಿಕ್ಟರ್ ಸುವಾರಿಸ್ ಅವರು ಜೆಸಿಐ ಕೊಕ್ಕಡ ಕಪಿಲಾ ಘಟಕದ ಸ್ಥಾಪಕ ಸದಸ್ಯರಾಗಿದ್ದು, ಘಟಕದ ಕಾರ್ಯದರ್ಶಿ ಹಾಗೂ ವಿವಿಧ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಇದಲ್ಲದೆ ಇತರ ಸಂಘಟನೆಗಳ ಮೂಲಕ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಅವರ ಪತ್ನಿ ದೀಪಾ ವಿ., ಘಟಕದ ನಿಕಟಪೂರ್ವ ಅಧ್ಯಕ್ಷರಾದ ಡಾ‌. ಶೋಭಾ ಪಿ., ಕಾರ್ಯದರ್ಶಿ ಜೋಯಲ್ ಪಿರೇರಾ, ನೇತ್ರಾವತಿ ಪ್ರಾಂತ್ಯದ ಉಪಾಧ್ಯಕ್ಷರಾದ ಜಿತೇಶ್ ಎಲ್ ಪಿರೇರಾ, ಜೋಸೆಫ್ ಪಿರೇರಾ, ಜೆಸಿಂತಾ ಡಿಸೋಜ, ಫಲ್ಗುಣಿ ಪ್ರಾಂತ್ಯದ ವಲಯ ಉಪಾಧ್ಯಕ್ಷ ಕಾಶೀನಾಥ್ ಗೋಗಟೆ ಉಪಸ್ಥಿತರಿದ್ದರು.

Related posts

ಯು.ಜಿ. ಸಿಇಟಿ ಪರೀಕ್ಷೆ: ರಾಜ್ಯಕ್ಕೆ 7ನೇ ಸ್ಥಾನ ಪಡೆದ ವಿದ್ವತ್ ಪಿಯು ಕಾಲೇಜಿನ ಚಿನ್ಮಯ್ ಜಿ.ಕೆ.

Suddi Udaya

ಉಜಿರೆ ಎಸ್.ಡಿ.ಎಂ ಸಿ.ಬಿ.ಎಸ್.ಇ ಶಾಲೆಗೆ ಧರ್ಮಸ್ಥಳದ ಹೇಮಾವತಿ ವಿ ಹೆಗ್ಗಡೆ ಭೇಟಿ

Suddi Udaya

ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಕದಿರು (ತೆನೆ) ಹಬ್ಬ 

Suddi Udaya

ಕಡಿರುದ್ಯಾವರ: 30 ಅಡಿ ಆಳದ ಬಾವಿಗೆ ಬಿದ್ದ ಗಬ್ಬದ ಹಸು

Suddi Udaya

ಬೆಳ್ತಂಗಡಿ ಮೂಲದ ಕನ್ನಡದ ಹಿರಿಯ ನಟಿ, ಲೀಲಾವತಿ ನಿಧನ

Suddi Udaya

ಹತ್ಯಡ್ಕ ಗ್ರಾಮದ ಪಲಸ್ತಡ್ಕ ನಿವಾಸಿ ಸಂಜೀವ ಗೌಡ ನಿಧನ

Suddi Udaya
error: Content is protected !!