25.2 C
ಪುತ್ತೂರು, ಬೆಳ್ತಂಗಡಿ
October 10, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗೆಜ್ಜೆಗಿರಿ ಕ್ಷೇತ್ರ ಅಭಿವೃದ್ಧಿಗೆ ಜೆ.ಪಿ. ಸುಧಾಕರ್ ಅವರಿಂದ ಸಕಾರಾತ್ಮಕ ಸ್ಪಂದನೆ

ಬೆಳ್ತಂಗಡಿ: ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದೆತಿ ಆಯುರ್ವೇದಿಕ್ ಕೇಂದ್ರದ ಕಾಮಗಾರಿಗೆ ಸಹಕಾರ ಕೋರಿ ಬೆಂಗಳೂರಿನ ಉದ್ಯಮಿ ಶ್ರೀ ಜೆ.ಪಿ. ಸುಧಾಕರ್ ಅವರನ್ನು ಕ್ಷೇತ್ರದ ಕಾನೂನು ಸಲಹೆಗಾರ ಯುವ ನಾಯಕರಾದ ರಕ್ಷಿತ್ ಶಿವರಾಮ್ ಅವರ ನೇತೃತ್ವದ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿತು.

ಈ ಸಂದರ್ಭದಲ್ಲಿ ಕ್ಷೇತ್ರದ ಗೌರವಾಧ್ಯಕ್ಷ ಪೀತಾಂಬರ ಹೆರಾಜೆ, ಅಧ್ಯಕ್ಷರಾದ ರವಿ ಪೂಜಾರಿ ಚಿಲಿಂಬಿ, ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸಂಜೀವ ಪೂಜಾರಿ, ಪ್ರಧಾನ ಕಾರ್ಯದರ್ಶಿ ಡಾ. ರಾಜಾರಾಮ್, ಶ್ರೀ ನಾರಾಯಣ ಮಚ್ಚಿನ, ಕೆ. ಹರೀಶ್ ಕೆ. ಪೂಜಾರಿ ಬೈಲಬರಿ, ಸತೀಶ್ ಕಾಶಿಪಟ್ಣ ಸೇರಿದಂತೆ ಕ್ಷೇತ್ರದ ಪ್ರಮುಖರು ಉಪಸ್ಥಿತರಿದ್ದರು.

ನಿಯೋಗವು ಗೆಜ್ಜೆಗಿರಿ ಕ್ಷೇತ್ರದಲ್ಲಿ ನಡೆಯುತ್ತಿರುವ ದೇಯಿ ಬೈದೆತಿ ಆಯುರ್ವೇದಿಕ್ ಕೇಂದ್ರದ ಕಾಮಗಾರಿಯ ಪ್ರಗತಿ ಹಾಗೂ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ಜೆ.ಪಿ. ಸುಧಾಕರ್ ಅವರಿಗೆ ವಿವರಿಸಿ, ಕಾಮಗಾರಿಗೆ ಅಗತ್ಯ ಸಹಕಾರ ನೀಡುವಂತೆ ಮನವಿ ಮಾಡಿತು.

ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಜೆ.ಪಿ. ಸುಧಾಕರ್ ಅವರು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡುವ ಭರವಸೆ ನೀಡಿದರು. ಅಲ್ಲದೆ, ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಯಕ್ಷಗಾನ ಮೇಳವನ್ನು ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಆಯೋಜಿಸಲು ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.

ಗೆಜ್ಜೆಗಿರಿ ಕ್ಷೇತ್ರದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ಬೆಂಗಳೂರಿನಲ್ಲಿ ಹೆಚ್ಚಿನ ಪ್ರೋತ್ಸಾಹ ದೊರೆಯುವ ನಿಟ್ಟಿನಲ್ಲಿ ಜೆ.ಪಿ. ಸುಧಾಕರ್ ಅವರ ಭರವಸೆ ಮಹತ್ವದ್ದಾಗಿದೆ ಎಂದು ನಿಯೋಗದ ಸದಸ್ಯರು ತಿಳಿಸಿದ್ದಾರೆ.

Related posts

ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ| ಡಿ. ಹೆಗ್ಗಡೆಯವರ ವಿರುದ್ಧ ಮಾನಹಾನಿ ಹೇಳಿಕೆಗಳನ್ನು ನೀಡದಂತೆ ಹೈಕೋರ್ಟ್ ಮಹತ್ವದ ತೀರ್ಪು

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ  ಬೆಂಗಳೂರಿನ ನೃತ್ಯಕುಟೀರ ತಂಡದವರಿಂದ ವಿದುಷಿ ಶ್ರೀಮತಿ ದೀಪಾ ಭಟ್ ನಿರ್ದೇಶನದಲ್ಲಿ ನೃತ್ಯರೂಪಕ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್‌ಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ

Suddi Udaya

ಬಂಗ್ವಾಡಿ ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ವಾರ್ಷಿಕ ಮಹಾರಥೋತ್ಸವ

Suddi Udaya

`ಬೆಸ್ಟ್ ಎಂಎಲ್ಎ‌’ ಪ್ರಶಸ್ತಿ ಪುರಸ್ಕೃತ ಶಾಸಕ ಹರೀಶ್ ಪೂಂಜರಿಗೆ ಪುದುವೆಟ್ಟು ಬಿಜೆಪಿ ಶಕ್ತಿ ಕೇಂದ್ರದಿಂದ ಗೌರವಾರ್ಪಣೆ

Suddi Udaya

ಮೇ 31: ಭಾರತದ ಉಪ ರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್‌ರವರಿಂದ ಸಿರಿ ಸಂಸ್ಥೆಯ`ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್’ ಲೋಕಾರ್ಪಣೆ

Suddi Udaya
error: Content is protected !!