34.2 C
ಪುತ್ತೂರು, ಬೆಳ್ತಂಗಡಿ
October 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕರ್ನಾಟಕ ಮುಸ್ಲಿಂ ಜಮಾಅತ್ ಬೆಳ್ತಂಗಡಿ ಸರ್ಕಲ್ ಸಮಿತಿ ವತಿಯಿಂದ ವಿಚಾರ ವಿನಿಮಯ

ಬೆಳ್ತಂಗಡಿ:ಕರ್ನಾಟಕ ಮುಸ್ಲಿಂ ಜಮಾಅತ್ ಬೆಳ್ತಂಗಡಿ ಸರ್ಕಲ್ ಸಮಿತಿ ವತಿಯಿಂದ ಸ್ವತಂತ್ರ ಭಾರತದ 80 ವರ್ಷಗಳ ವಿಚಾರವಾಗಿ ಭಾರತದ ಬಹುತ್ವ ‌ ಮತ್ತು ಬಂಧುತ್ವ ಎಂಬ ಶೀರ್ಷಿಕೆಯಲ್ಲಿ ವಿಚಾರ ವಿನಿಮಯ ಕೂಟವು ಬೆಳ್ತಂಗಡಿ ಜಂಇಯತ್ತುಲ್ ಫಲಾಹ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಸಂದೇಶ ಭಾಷಣವನ್ನು ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯಾಧ್ಯಕ್ಷ ಹಝ್ರತ್ ಡಾ. ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ನಿರ್ವಹಿಸಿದರು. ವೈವಿಧ್ಯತೆಯಲ್ಲಿ ಏಕತೆಯೇ ಭಾರತದ ಸೌಂದರ್ಯ ಎಂದು ಅವರು ಬಣ್ಣಿಸಿದರು.

ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಶಿಬಿ ಧರ್ಮಸ್ಥಳ, ದಲಿತ ಸಂಘರ್ಷ ಸಮಿತಿಯ ವೆಂಕಣ್ಣ ಕೊಯ್ಯೂರು, ಬಿಕೆ ವಸಂತ, ಬಂಧುತ್ವ ಕರ್ನಾಟಕದ ಚೆನ್ನಕೇಶವ, ಎಸ್ ವೈ ಎಸ್ ಅಧ್ಯಕ್ಷ ಝಮೀರ್ ಸಅದಿ ಮೊದಲಾದವರು ಅನಿಸಿಕೆಗಳನ್ನು ಹಂಚಿಕೊಂಡರು. ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ ಎಂ ಬಿ ಮುಹಮ್ಮದ್ ಸಾಧಿಕ್ ಮಲೆಬೆಟ್ಟು ಮುನ್ನುಡಿ ಮಾತನ್ನು ಮಂಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಅಬೂಬಕ್ಕರ್ ಸಮಡೈನ್ ವಹಿಸಿದ್ದರು. ಬೆಳ್ತಂಗಡಿ ಝೋನ್ ಅಧ್ಯಕ್ಷರಾದ ಎಸ್ ಎಂ ಕೋಯ ತಂಙಳ್ ಉಜಿರೆ ಉದ್ಘಾಟಿಸಿದರು. ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಅಬ್ಬೋನು ಮದ್ದಡ್ಕ, ಝೋನ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಕಕ್ಕಿಂಜೆ, ಉಸ್ತುವಾರಿ ಅಬ್ದುಲ್ ಹಮೀದ್ ಪುರ್ಖಾನಿ ಗುರುವಾಯನಕೆರೆ,ಆಲಿಕುಂಞಿ ಸಖಾಫಿ, ಮುಹಮ್ಮದ್ ಮುಸ್ಲಿಯಾರ್, ಎನ್ ಎಸ್ ಅಬ್ದುರ್ರಹ್ಮಾನ್ ಸಂಜಯನಗರ,ಹಮೀದ್ ಇಂದಬೆಟ್ಟು, ಆದಂ ಮಂಜೊಟ್ಟಿ, ಹಮೀದ್ ಕೇಳ್ತಾಜೆ, ರಝಾಕ್ ಮಂಜೊಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾ ಕಾರ್ಯದರ್ಶಿ ಮುಹಮ್ಮದ್ ರಫಿ ಬೆಳ್ತಂಗಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು, ಸಮಿತಿಯ ಕೋಶಾಧಿಕಾರಿ ಪಿ ಯು ಅಬ್ದುರ್ರಹ್ಮಾನ್ ಮುಸ್ಲಿಯಾರ್ ನಾವೂರು ಧನ್ಯವಾದಗೈದರು.

Related posts

ಮದ್ದಡ್ಕ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅಭ್ಯರ್ಥಿಗಳ ಅವಿರೋಧ ಆಯ್ಕೆ

Suddi Udaya

ಶ್ರೀ ಕಾರಿಂಜೇಶ್ವರ ದೇವಸ್ಥಾನ ಕ್ಕೆ ಸಿಡಿಲು ಬಡಿದು ಹಾನಿ

Suddi Udaya

ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯ ಪ್ರಯುಕ್ತ ‘ಸೇಪ್ಟಿ ರೈಡ್’ ಜಾಗೃತಿ ಅಭಿಯಾನ

Suddi Udaya

ಎಸ್ ಎ ಫ್ರೆಂಡ್ಸ್ ವತಿಯಿಂದ ಶಬ್ಬೀರ್ ಮಾಲಾಡಿ ಮತ್ತು ಅಕ್ಷಯ್ ಕಲ್ಲೆಗ ಟೈಗರ್ಸ್ ಪುತ್ತೂರು ಇವರ ಸ್ಮಾರನಾರ್ಥಕ ಕಬಡ್ಡಿ ಪಂದ್ಯಾಟ

Suddi Udaya

ತಿರುಮಲೇಶ್ವರ ಭಟ್ಟರಿಗೆ ರಾಷ್ಟ್ರಮಟ್ಟದ ಕ್ರೀಡಾಕೂಟ ಪ್ರಶಸ್ತಿ

Suddi Udaya

ಮುಂಡಾಜೆ ಕ್ರೈಸ್ಟ್ ಅಕಾಡೆಮಿ ಶಾಲೆಯಲ್ಲಿ ಪೋಷಕರ ಸಭೆ

Suddi Udaya
error: Content is protected !!