26.3 C
ಪುತ್ತೂರು, ಬೆಳ್ತಂಗಡಿ
October 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ

ಮುಂಡಾಜೆ: ಸಂಘದ ವತಿಯಿಂದ ಕೃಷಿಕರಿಗೆ ಸದುಪಯೋಗವಾಗುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಕಳೆದ ಆರ್ಥಿಕ ವರ್ಷದಲ್ಲಿ ಸಂಘವು 1,757 ಕೋಟಿ ರೂ.ವಾರ್ಷಿಕ ವಹಿವಾಟು ನಡೆಸಿದ್ದು 2.53 ಕೋಟಿ ರೂ.ಗಿಂತ ಅಧಿಕ ಲಾಭಗಳಿಸಿದೆ. ಈ ಬಾರಿ ಸದಸ್ಯರಿಗೆ ಶೇ.15 ಡಿವಿಡೆಂಟ್ ನೀಡಲಾಗುವುದು ಎಂದು ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ ನಾರಾಯಣ ಕೆ. ತಿಳಿಸಿದರು.

ಅವರು ಆ.29ರಂದು ಮುಂಡಾಜೆಯ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ವಠಾರದಲ್ಲಿ ಜರಗಿದ ಸಂಘದ 106ನೇ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

6,413 ಮಂದಿ ಎ ತರಗತಿ ಸದಸ್ಯರನ್ನು, 8,505 ಸಿ ಹಾಗೂ 673 ಡಿ ಸದಸ್ಯರನ್ನು ಹೊಂದಿರುವ ಸಂಘದಲ್ಲಿ 8.70 ಕೋಟಿ ರೂ.ಗಿಂತ ಅಧಿಕ ಪಾಲು ಬಂಡವಾಳ 86.67 ಕೋಟಿ ರೂ.ಠೇವಣಿ ಹೊಂದಿದೆ. ಕಳೆದ 14 ವರ್ಷದಿಂದ ಸಂಘವು ನಿರಂತರ 100 ಶೇ. ವಸೂಲಾತಿಯನ್ನು ದಾಖಲಿಸಿದೆ. ಕಾಡಾನೆಗಳ ಹಾವಳಿಯಿಂದ ಕೃಷಿ ಹಾನಿಯಾದ ಸದಸ್ಯರಿಗೆ ಪರಿಹಾರವನ್ನು ನೀಡಲಾಗುತ್ತಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಉಪಾಧ್ಯಕ್ಷ ರಾಘವ ಗೌಡ ಕುಡುಮಡ್ಕ,ನಿರ್ದೇಶಕರಾದ ವೆಂಕಟೇಶ್ವರ ಭಟ್ ಕಜೆ,ಎಂ.ಶಶಿಧರ ಕಲ್ಮಂಜ,ರಾಘವ ಕಲ್ಮಂಜ, ಶಿವಪ್ರಸಾದ್ ಗೌಡ ದೇವಸ್ಯ, ರವಿ ಪೂಜಾರಿ, ಚೆನ್ನಕೇಶವ ನಾಯ್ಕ, ಅಜಯ್ ಕೆ.ಎ., ಅಶ್ವಿನಿ ಎ.ಹೆಬ್ಬಾರ್, ಸುಮಾ ಗೋಖಲೆ, ಮೋಹಿನಿ, ವೃತ್ತಿಪರ ನಿರ್ದೇಶಕರಾದ ನಾರಾಯಣ ಫಡಕೆ, ಬಾಬು ಗೌಡ ಉಪಸ್ಥಿತರಿದ್ದರು.

ಸಂಘದ ಉಪಾಧ್ಯಕ್ಷ ರಾಘವ ಗೌಡ ಕುಡುಮಡ್ಕ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಪರಾಂಜಪೆ ಕಾರ್ಯಕ್ರಮ ನಿರ್ವಹಿಸಿದರು.

Related posts

ಸ್ವಾತಂತ್ರ್ಯ ಸೇನಾನಿ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಮುಂಭಾಗದಲ್ಲಿ ಧ್ವಜಾರೋಹಣ

Suddi Udaya

ಬೆಳ್ತಂಗಡಿ ಶ್ರೀ ದುರ್ಗಾ ಟೆಕ್ಸ್ಟ್ ಟೈಲ್ಸ್ ನ ರಾಜುರಾಮ್ ರಾಜಸ್ಥಾನದಲ್ಲಿ ನಡೆದ ಬೈಕ್ ಅಪಘಾತದಲ್ಲಿ ಸಾವು

Suddi Udaya

ಯಕ್ಷಭಾರತಿ ಸಂಸ್ಥೆಗೆ ನೂತನ ಟ್ರಸ್ಟಿಗಳ ಆಯ್ಕೆ

Suddi Udaya

ಹೋಲಿ ರೆಡಿಮರ್ ಚರ್ಚ್ ನಲ್ಲಿ ಪವಿತ್ರ ಗುರುವಾರ, ಶುಭ ಶುಕ್ರವಾರ ಹಾಗೂ ಈಸ್ಟರ್ ಹಬ್ಬದ ಆಚರಣೆ

Suddi Udaya

ಅಯೋಧ್ಯೆಯಲ್ಲಿ ಶ್ರೀ ರಾಮಚಂದ್ರನ ಪ್ರತಿಷ್ಠಾಪನೆಗೆ ಮೂಹೂರ್ತ ನಿಗದಿ: ಜ.21ರಿಂದ 3 ದಿನ ಕಾರ್ಯಕ್ರಮ: ಪ್ರಧಾನಿ ನರೇಂದ್ರ ಮೋದಿ ಸಹಿತ ಅನೇಕ ನಾಯಕರು ಭಾಗಿ

Suddi Udaya

ಪಿಲಿಗೂಡು: ಯಾಂತ್ರಡ್ಕದಲ್ಲಿ ಕಳ್ಳತನ: ನಗ‌- ನಗದು ದೋಚಿ ಪರಾರಿಯಾದ ಖದೀಮ

Suddi Udaya
error: Content is protected !!