25.5 C
ಪುತ್ತೂರು, ಬೆಳ್ತಂಗಡಿ
October 15, 2026
ಪ್ರಮುಖ ಸುದ್ದಿಬೆಳ್ತಂಗಡಿವರದಿ

ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ-2025–26ನೇ ಸಾಲಿನಲ್ಲಿ ರೂ.1.37 ಕೋಟಿಗೂ ಅಧಿಕ ಲಾಭ, ಸದಸ್ಯರಿಗೆ ಶೇ.15ರಷ್ಟು ಡಿವಿಡೆಂಡ್ ಘೋಷಣೆ

ಕೊಕ್ಕಡ: ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2025–26ನೇ ಸಾಲಿನ ವಾರ್ಷಿಕ ಮಹಾಸಭೆಯು ಆ.30ರಂದು ಸಂಘದ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಶ್ರೀ ಕುಶಾಲಪ್ಪ ಗೌಡ ಪೂವಾಜೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಮಾತನಾಡಿದ ಅಧ್ಯಕ್ಷರು, ಸಂಘವು ಪ್ರಸಕ್ತ ಸಾಲಿನಲ್ಲಿ ₹1.37 ಕೋಟಿಗೂ ಅಧಿಕ ಲಾಭ ಗಳಿಸಿರುವುದು ಸಂಘದ ಪ್ರಗತಿಗೆ ಸಾಕ್ಷಿಯಾಗಿದೆ. ಸಂಘದ ಸದಸ್ಯರಿಗೆ ಶೇ.15ರಷ್ಟು ಡಿವಿಡೆಂಡ್ ನೀಡಲಾಗುವುದು ಎಂದು ತಿಳಿಸಿದರು. ಸಂಘದ ಅಭಿವೃದ್ಧಿಗೆ ಸದಸ್ಯರು ಹಾಗೂ ಸಿಬ್ಬಂದಿ ನೀಡುತ್ತಿರುವ ಸಹಕಾರ ಮತ್ತು ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸಿದರು.

ಆಡಳಿತ ಮಂಡಳಿಯು ಮಂಡಿಸಿದ ವಾರ್ಷಿಕ ವರದಿ ಹಾಗೂ ಲೆಕ್ಕ ಪರಿಶೋಧನಾ ವರದಿಯನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಕೆ. ಹಾಗೂ ಲೆಕ್ಕಪತ್ರಗಳನ್ನು ಸಭೆಯಲ್ಲಿ ಮಂಡಿಸಿ ಸದಸ್ಯರಿಂದ ಅನುಮೋದನೆ ಪಡೆಯಲಾಯಿತು. ಸಂಘದ ಮುಂದಿನ ಸಾಲಿನ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಸದಸ್ಯರಿಗೆ ನೀಡಲಾಗುತ್ತಿರುವ ಸೌಲಭ್ಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.

ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ:
ಸಂಘದ ಕಾರ್ಯವ್ಯಾಪ್ತಿಯಲ್ಲಿರುವ ಸದಸ್ಯರ ಮಕ್ಕಳ ಪೈಕಿ ಪಿ.ಯು.ಸಿ.ಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ಅನಘ ಕೆ., ಸೌಜನ್ಯ, ಯಶ್ವಿತ್ ಕೆ., ರಚನಾ, ಮೌಲ್ಯ ಕೆ.ಎಸ್., ಸಂಧ್ಯಾ ಹಾಗೂ ಬಿ. ಸಾತ್ವಿಕ್, ಮೇಘ ಹೆಚ್.ಎನ್. ಅವರನ್ನು ಸನ್ಮಾನಿಸಲಾಯಿತು.
ಅದೇ ರೀತಿ ಎಸ್‌ಎಸ್‌ಎಲ್‌ಸಿ ವಿಭಾಗದಲ್ಲಿ ಸಾಕ್ಷಿ ಬಿ., ಮೇಘನ ಎಸ್.ಪಿ., ಆಶಿಕ ಕೆ.ಎನ್., ಜೆಸ್ಮಾ ಮಾರ್ಟಿನ್, ಮರಿಯಮ್ ನಿಧಾ, ಪೂರ್ವಿ, ಯಜ್ಞ ವೈ., ಸೀಮ, ಸುಧೀಕ್ಷ ಜೆ. ಗೌಡ ಹಾಗೂ ಸಮ್ಯಕ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸಂಘದ ಕಾರ್ಯ ವ್ಯಾಪ್ತಿಯಲ್ಲಿ ಕ್ಯಾಂಪ್ಕೋ ಸಂಸ್ಥೆಗೆ ಅತೀ ಹೆಚ್ಚು ಅಡಿಕೆ ನೀಡಿದ ಸಂಘದ ಸದಸ್ಯ ಧರ್ಣಪ್ಪ ಪೂಜಾರಿ ಕೆಂಪಕೊಡಿ ಅವರನ್ನು ಗುರುತಿಸಿ ಗೌರವಿಸಲಾಯಿತು.

ಹೈನುಗಾರಿಕೆಯಲ್ಲಿ ಸಾಧನೆ ಮಾಡಿದ ರೈತರಿಗೆ ಸನ್ಮಾನ:
2025–26ನೇ ಸಾಲಿನಲ್ಲಿ ಸಂಘದ ಕಾರ್ಯವ್ಯಾಪ್ತಿಯಲ್ಲಿ ಹೈನುಗಾರಿಕೆ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ರೈತರನ್ನು ಗುರುತಿಸಿ ಗೌರವಿಸಲಾಯಿತು. ಕೊಕ್ಕಡ ಗ್ರಾಮದಿಂದ ಪ್ರಸನ್ನ ಕುಮಾರ್ ಕಂರ್ಬಿಲ, ಶೋಭಾ ಪೊಯ್ಯೋಳೆ, ಡೆಲನ್ ಸಿವಿಲ್ ಡಿ., ಸೋಜಾ ಬಜ ಹಾಗೂ ವಿಜಯಲಕ್ಷ್ಮೀ ಮಲ್ಲಿಗೆಮಜಲು ಅವರನ್ನು ಗೌರವಿಸಲಾಯಿತು.
ಪಟ್ರಮೆ ಗ್ರಾಮದಿಂದ ಆನಂದ ದೇವಸ್ಯಕೋಡಿ, ವಾರಿಜ ಸೂರ್ಯತ್ತಾವು, ಸುಂದರ ಪೂಜಾರಿ ಅಂಕದ ಮಜಲು ಹಾಗೂ ಕುಸುಮಾವತಿ ಗುತ್ತುಮನೆ ಅವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಸಂಘದ ಕಾರ್ಯಕ್ಷೇತ್ರದ ಯುವ ವಿಜ್ಞಾನಿ ಹಾಗೂ ಸಂಶೋಧಕ ಶ್ರೀ ದೀಪಕ್ ಎ.ಎಸ್. ಅವರನ್ನು ಗೌರವಿಸಲಾಯಿತು.

ಸಾಲ ವಿಮಾ ಸೌಲಭ್ಯದ ಕುರಿತು ಮಾಹಿತಿ ಕಾರ್ಯಾಗಾರ
ಸಂಘದ ಸದಸ್ಯರು ಸಂಘದಲ್ಲಿ ಪಡೆದಿರುವ ಯಾವುದೇ ಸಾಲಗಳಿಗೆ ಸಂಬಂಧಿಸಿದ ವಿಮಾ ಸೌಲಭ್ಯದ ಕುರಿತು ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಗಿದ್ದು, ಶ್ರೀ ರಾಮ ಮೋಹನ್ ರೈ ಅವರು ಸದಸ್ಯರಿಗೆ ಅಗತ್ಯ ಮಾಹಿತಿಯನ್ನು ನೀಡಿದರು. ಸನ್ಮಾನಿತ ಯುವ ವಿಜ್ಞಾನಿ ಹಾಗೂ ಸಂಶೋಧಕ ದೀಪಕ್ ಎ. ಎಸ್. ಇವರ ಪರಿಚಯವನ್ನು ನಿರ್ದೇಶಕಿ ಪ್ರೇಮಾವತಿ ನೀಡಿದರು.

ಕುಮಾರಿ ಚೈತನ್ಯ ಪ್ರಾರ್ಥಿಸಿದರು. ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಮಹಾಬಲಶೆಟ್ಟಿ, ನಿರ್ದೇಶಕರಾದ ವಿಠಲ ಬಂಡಾರಿ, ಉದಯಕುಮಾರ್ ಎ., ಶ್ರೀನಾಥ್ ಬಿ., ಪದ್ಮನಾಭ ಗೌಡ ಕೆ., ಅಶ್ವಿನಿ ರವಿ ನಾಯ್ಕ್, ಪ್ರೇಮಾವತಿ, ಸುನೀಲ್ ಕೆ., ರವಿಚಂದ್ರ ಪಿ., ವಿಶ್ವನಾಥ ಕಕ್ಕುದೋಳಿ ಹಾಗೂ ಮುತ್ತಪ್ಪ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಕೆ. ಉಪಸ್ಥಿತರಿದ್ದರು.
ನಿರ್ದೇಶಕ ಉದಯಕುಮಾರ್ ಎ. ವಂದಿಸಿದರು.
ಗುಮಾಸ್ತ ಬಾಲಮುರಳಿ ಕೃಷ್ಣ ವಿ ಯನ್ ಕಾರ್ಯಕ್ರಮ ನಿರೂಪಿಸಿದರು.

Related posts

ಮಹಿಳೆಯರಿಗೆ ಉಳಿತಾಯ ಮತ್ತು ಸ್ವ – ಉದ್ಯೋಗ ಮಾಹಿತಿ ಕಾರ್ಯಾಗಾರ

Suddi Udaya

ನಾವೂರು ಗ್ರಾಮ ಪಂಚಾಯತ್ ಗ್ರಾಮಸಭೆ

Suddi Udaya

ಉಭಯ ಜಿಲ್ಲಾ ಮೊಬೈಲ್ ರೀಟೇಲರ್ ಅಸೋಸಿಯೇಷನ್ ಇದರ ವಾರ್ಷಿಕ ಕ್ರೀಡಾಕೂಟ

Suddi Udaya

ಯುವತಿಯರೊಂದಿಗೆ ಅನುಚಿತ ವರ್ತನೆ ಪ್ರಕರಣ: ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ

Suddi Udaya

ಬಂದಾರು ಗ್ರಾಮದ ಪೆರಲ್ದಪಳಿಕೆಯಲ್ಲಿ 9ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆ

Suddi Udaya

ಲಾಯಿಲದ ಗ್ಯಾಸ್ ಕಚೇರಿಯೊಂದರಲ್ಲಿ ಮ್ಯಾನೇಜರ್ – ಗ್ರಾಹಕರ ನಡುವೆ ಗಲಾಟೆ

Suddi Udaya
error: Content is protected !!