25.5 C
ಪುತ್ತೂರು, ಬೆಳ್ತಂಗಡಿ
October 15, 2026
ಪ್ರಮುಖ ಸುದ್ದಿಬೆಳ್ತಂಗಡಿ

ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ-ಸನ್ಮಾನ- ರೂ.577.80 ಕೋಟಿ ವ್ಯವಹಾರ ನಡೆಸಿ,ರೂ.2.03 ಕೋಟಿ ಲಾಭ ಗಳಿಸಿದೆ,ಸದಸ್ಯರಿಗೆ ಶೇ 15 ನೀಡಲಾಗುವುದು: ಜೋಯೆಲ್ ಮೆಂಡೋನ್ಸ

ಬೆಳ್ತಂಗಡಿ: ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 56ನೇ ವಾರ್ಷಿಕ ಮಹಾಸಭೆಯು ಆ.30ರಂದು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಜೋಯೆಲ್ ಮೆಂಡೋನ್ಸಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಬಳಿಕ ಮಾತನಾಡಿದ ಸೊಸೈಟಿ ಅಧ್ಯಕ್ಷರಾದ ಜೋಯೇಲ್ ಮೆಂಡೋನ್ಸಾ ಅವರು ಮಾತನಾಡಿ ಸಂಘವು 2025-26ನೇ ಆರ್ಥಿಕ ವರ್ಷದಲ್ಲಿ ರೂ.577.80 ಕೋಟಿ ವ್ಯವಹಾರ ನಡೆಸಿ ರೂ.2.03 ಕೋಟಿ ನಿವ್ವಳ ಲಾಭ ಗಳಿಸಿದೆ.ಸದಸ್ಯರಿಗೆ ಶೇ 15 ನೀಡಲಾಗುವುದು. ಸದಸ್ಯರು ಹಾಗೂ ಗ್ರಾಹಕರ ಆರ್ಥಿಕ ವ್ಯವಹಾರಗಳಿಗೆ ಮತ್ತಷ್ಟು ಅನುಕೂಲವಾಗುವ ನಿಟ್ಟಿನಲ್ಲಿ ಈಗಾಗಲೇ NEFT ಮತ್ತು RTGS ಸೇವೆಗಳನ್ನು ಒದಗಿಸಲಾಗಿದೆ ಎಂದು ಅವರು ಹೇಳಿದರು.

ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಯಶಸ್ಸು ಖಂಡಿತ ನಮ್ಮದಾಗುತ್ತದೆ ಎಂಬುದಕ್ಕೆ ಮಡಂತ್ಯಾರು ಸೊಸೈಟಿಯೇ ಉದಾಹರಣೆ. ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಾ, ಸದಸ್ಯರ ಸಹಕಾರದೊಂದಿಗೆ ಅವರ ವಿಶ್ವಾಸವನ್ನು ಗಳಿಸಿರುವ ಸಂಘವು ಇಂದು ಪ್ರಗತಿಯತ್ತ ಸಾಗುತ್ತಿದೆ. ಗ್ರಾಹಕರ ಸಹಕಾರವೇ ಸಂಘದ ಅಭಿವೃದ್ಧಿಗೆ ಪ್ರಮುಖ ಬಲ ಎಂದರು.

ಸಂಘವು ಸುಮಾರು 5,800 ಸದಸ್ಯರನ್ನು ಹೊಂದಿದ್ದು, ಮಹಾಸಭೆಯ ನೋಟಿಸ್‌ಗಳನ್ನು ಮನೆ-ಮನೆಗೆ ತೆರಳಿ ವಿತರಿಸಲಾಗಿದೆ. ರೈತ ಸದಸ್ಯರ ಆರೋಗ್ಯದ ಕಾಳಜಿಯಿಂದ ಪ್ರತಿವರ್ಷ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗುತ್ತಿದೆ. ಮಹಾಸಭೆಯ ಸಂದರ್ಭದಲ್ಲಿ ಶಾಸಕರು ಹಾಗೂ ಸಂಸದರ ಉಪಸ್ಥಿತಿಯಲ್ಲಿ ಸುಮಾರು 60 ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಇಬ್ಬರು ಕೃಷಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.ಸಂಘದ ವ್ಯಾಪ್ತಿಯ ಮಾಲಾಡಿ, ಪಾರೆಂಕಿ, ಸೋಣಂದೂರು ಹಾಗೂ ಕುಕ್ಕಳ ಗ್ರಾಮಗಳ ಕಚ್ಚಾ ರಸ್ತೆಗಳಿಗೆ ಜಲ್ಲಿ ಹಾಕಿ ರಸ್ತೆ ದುರಸ್ತಿ ಕಾರ್ಯವನ್ನು ಕೈಗೊಳ್ಳಲಾಗಿದೆ. ಸಂಘದ ಸದಸ್ಯರಿಗೆ ರಿಯಾಯಿತಿ ದರದಲ್ಲಿ ಸಭಾಭವನವನ್ನು ಬಾಡಿಗೆಗೆ ನೀಡುವ ವ್ಯವಸ್ಥೆಯೂ ಇದೆ
ಎಂದು ಜೋಯೆಲ್ ಮೆಂಡೋನ್ಸಾ ತಿಳಿಸಿದರು.

ಆಡಳಿತ ಮಂಡಳಿಯ ಉಪಾಧ್ಯಕ್ಷ ಕಾಂತಪ್ಪ ಗೌಡ, ನಿರ್ದೇಶಕರಾದ ಧನಲಕ್ಷ್ಮೀ, ಅಮಿತಾ ಪ್ರಿಯಾ ಲೋಬೋ, ಸುರೇಶ್ ಎಸ್., ಶಶಿಪ್ರಭಾ, ಮಹಾಬಲ ಕೆ., ಗಣೇಶ್ ಮೂಲ್ಯ, ಗೋಪಾಲಕೃಷ್ಣ ಕೆ., ಕಿಶೋರ್ ಕುಮಾರ್ ಶೆಟ್ಟಿ, ಬಿ. ಪದ್ಮನಾಭ ಸಾಲಿಯಾನ್, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರತಿನಿಧಿ ಸಿರಾಜುದ್ದೀನ್, ಸಿಇಒ ಜೋಕಿಂ ಡಿಸೋಜಾ ಹಾಗೂ ಸಿಬ್ಬಂದಿಗಳು,ಸದಸ್ಯರು ಉಪಸ್ಥಿತರಿದ್ದರು.

ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ:

ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ ಮಂಗಳೂರು, ಫಾ. ಎಲ್.ಎಂ. ಪಿಂಟೋ ಆಸ್ಪತ್ರೆ ಬದ್ಯಾರು, ರೋಟರಿ ಕ್ಲಬ್ ಮಡಂತ್ಯಾರು ಹಾಗೂ ಸೇಕ್ರೆಡ್ ಹಾರ್ಟ್ ಕಾಲೇಜಿನ ಎನ್‌ಎಸ್‌ಎಸ್ ಮತ್ತು ಯೂತ್ ರೆಡ್‌ಕ್ರಾಸ್ ಸಹಯೋಗದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಹಾಗೂ ಕ್ಯಾನ್ಸರ್ ಮಾಹಿತಿ ಮತ್ತು ತಪಾಸಣಾ ಶಿಬಿರ ನಡೆಯಿತು.

ಶಸ್ತ್ರಚಿಕಿತ್ಸೆ ಹಾಗೂ ಕ್ಯಾನ್ಸರ್ ಚಿಕಿತ್ಸಾ ವಿಭಾಗದಲ್ಲಿ ಡಾ. ಎಲ್ರೊಯ್, ಮೆಡಿಸಿನ್ ವಿಭಾಗದಲ್ಲಿ ಡಾ. ಆರನ್ ಮಥಾಯಸ್, ಮೂಳೆ ಚಿಕಿತ್ಸಾ ವಿಭಾಗದಲ್ಲಿ ಡಾ. ವಿಲ್ಬರ್, ಸ್ತ್ರೀರೋಗ ಚಿಕಿತ್ಸಾ ವಿಭಾಗದಲ್ಲಿ ಡಾ. ಜೆಸ್ಸಿ ಮರಿಯಾ, ಮಕ್ಕಳ ಚಿಕಿತ್ಸಾ ವಿಭಾಗದಲ್ಲಿ ಡಾ. ಬಾಲಕೃಷ್ಣ, ಫಿಸಿಯೋಥೆರಪಿ ವಿಭಾಗದಲ್ಲಿ ಡಾ. ಸ್ಟೀವ್ ಹಾಗೂ ಚರ್ಮರೋಗ ಚಿಕಿತ್ಸಾ ವಿಭಾಗದಲ್ಲಿ ಡಾ. ನಾಗಭೂಷಣ ಅವರು ಮಾಹಿತಿ ನೀಡಿದರು.ಜೊತೆಗೆ ಉಚಿತ ಕಣ್ಣು ತಪಾಸಣೆಯೂ ನಡೆಯಿತು.

ಶಿಬಿರದಲ್ಲಿ ಉಚಿತ ವೈದ್ಯರ ಸೇವೆ, ಉಚಿತ ಫಾ. ಎಲ್.ಎಂ. ಪಿಂಟೋ ಹೆಲ್ತ್ ಕಾರ್ಡ್, ಉಚಿತ ಕ್ಯಾನ್ಸರ್ ತಪಾಸಣೆ, ಮಧುಮೇಹ ತಪಾಸಣೆ ಹಾಗೂ ಔಷಧಿ ಲಭ್ಯವಿತ್ತು. ಜೊತೆಗೆ ಹಾರ್ಮೋನ್ ರಕ್ತ ಪರೀಕ್ಷೆ, ವಿಟಮಿನ್ ಡಿ2 ಮತ್ತು ವಿಟಮಿನ್ ಬಿ12 ಹಾಗೂ ಹಿಮೋಗ್ಲೋಬಿನ್ ಪರೀಕ್ಷೆಗಳಲ್ಲಿ ಶೇ.50ರಷ್ಟು ರಿಯಾಯಿತಿ ನೀಡಲಾಯಿತು.

Related posts

ಬಂದಾರು ಶಾಲೆಗೆ ರಾಷ್ಟ್ರ ಮಟ್ಟದಲ್ಲಿ ಹೆಸರು ತಂದುಕೊಟ್ಟ ದೈಹಿಕ ಶಿಕ್ಷಕ ಪ್ರಶಾಂತ್ ಮರೋಡಿ ಕೂಕ್ರಬೆಟ್ಟು ಶಾಲೆಗೆ ವರ್ಗಾವಣೆ

Suddi Udaya

ಅಯೋಧ್ಯೆಯಲ್ಲಿನ ಶ್ರೀ ರಾಮನ ಮಂದಿರವು ಸುಂದರವಾಗಿ ಮೂಡಿಬಂದಿದೆ: ಡಾ| ಡಿ ವೀರೇಂದ್ರ ಹೆಗ್ಗಡೆ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ರಘುರಾಮ ಶೆಟ್ಟಿ, ಸಾಧನಾ ಕಾರ್ಯದರ್ಶಿಯಾಗಿ ಅಮಿತಾನಂದ ಹೆಗ್ಡೆ ಆಯ್ಕೆ

Suddi Udaya

ಧರ್ಮಸ್ಥಳ: ಶ್ರೀ ಮಂ.ಸ್ವಾ.ಅ.ಹಿ.ಪ್ರಾ. ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ಪಟು ಕು. ತನುಶ್ರೀ ರವರಿಂದ ಯೋಗ ಪ್ರದರ್ಶನ

Suddi Udaya

ನಡ ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya

ಬಸದಿಗಳನ್ನು ಪುರಾತತ್ವ ಇಲಾಖೆಗೆ ಸೇರಿಸಲು ಪ್ರಯತ್ನಿಸುತ್ತಿರುವುದನ್ನು ವಿರೋಧಿಸಿ ಜೈನ ಸಮಾಜದಿಂದ ತಹಶೀಲ್ದಾರರಿಗೆ ಮನವಿ

Suddi Udaya
error: Content is protected !!