25.5 C
ಪುತ್ತೂರು, ಬೆಳ್ತಂಗಡಿ
October 15, 2026
ಗ್ರಾಮಾಂತರ ಸುದ್ದಿಧಾರ್ಮಿಕವರದಿ

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ರಕ್ಷಾಬಂಧನ – ವರಮಹಾಲಕ್ಷ್ಮೀ ಪೂಜೆ

ಬೆಳ್ತಂಗಡಿ: ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ.), ತುಮಕೂರು, ನೇತ್ರಾವತಿ ವಲಯ, ಬೆಳ್ತಂಗಡಿ ಶಾಖೆಯ ಆತಿಥ್ಯದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆ ಹಾಗೂ ರಕ್ಷಾಬಂಧನ ಕಾರ್ಯಕ್ರಮವು ಭಕ್ತಿಭಾವ, ಆತ್ಮೀಯತೆ ಹಾಗೂ ಸಂಭ್ರಮದಿಂದ ನಡೆಯಿತು.

ಕಾರ್ಯಕ್ರಮದಲ್ಲಿ ಶ್ರೀ ವರಮಹಾಲಕ್ಷ್ಮಿ ದೇವಿಯ ಪೂಜೆ, ರಕ್ಷಾಬಂಧನ ಆಚರಣೆ, ಬೌದ್ಧಿಕ ಹಾಗೂ ಪ್ರಸಾದ ವಿತರಣೆ ನಡೆಯಿತು. ಅಳದಂಗಡಿ ಹಾಗೂ ಬೆಳ್ತಂಗಡಿ ಶಾಖೆಯ ಯೋಗ ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಸಹೋದರತ್ವದ ಭಾವವನ್ನು ಹಂಚಿಕೊಂಡರು.

ರಕ್ಷಾಬಂಧನದ ಮಹತ್ವ ಹಾಗೂ ಭಾರತೀಯ ಸಂಸ್ಕೃತಿಯ ಮೌಲ್ಯಗಳ ಕುರಿತು ಅಳದಂಗಡಿ ಶಾಖೆಯ ಯೋಗ ಬಂಧು ಎಂ.ಕೆ ಪ್ರಸಾದ್ ಇವರು ಅರ್ಥಪೂರ್ಣ ಬೌದ್ಧಿಕ ನೀಡಿದರು. ಅವರ ವಿಚಾರಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಪ್ರೇರಣಾದಾಯಕವಾಗಿದ್ದವು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಹಿಳಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಉಮಾ ರಾವ್ ಅವರು ಉಪಸ್ಥಿತರಿದ್ದರು.

ಸಮಿತಿಯ ಮುಖ್ಯ ಶಿಕ್ಷಕರಾದ ಶ್ರೀಮತಿ ಪ್ರೇಮಲತಾ, ಸಹ ಶಿಕ್ಷಕರಾದ ಸಂತೋಷ್ ಕಾಪಿನಾಡ್ಕ, ಶ್ರೀಮತಿ ಕೋಮಲ ಹಾಗೂ ಶ್ರೀಮತಿ ಶಶಿಕಲಾ, ಶಾಖೆಯ ಸಂಚಾಲಕರಾದ ಶ್ರೀ ವಸಂತ ಕೆಂಬರ್ಜೆ ಸೇರಿದಂತೆ ಹಲವು ಯೋಗ ಬಂಧುಗಳು ಉಪಸ್ಥಿತರಿದ್ದರು. ಯೋಗ ಬಂಧು ಅಶ್ವತ್ಥ್ ಕುಮಾರ್ ಅವರು ಸ್ವಾಗತಿಸಿದರು. ಗೀತಾಪ್ರಕಾಶ್ ಅವರು ವಂದಿಸಿದರು.

Related posts

ಬಿಜೆಪಿಯ ಕೇಂದ್ರ ಸರಕಾರ ಗೃಹಬಳಕೆಯ ಎಲ್.ಪಿ.ಜಿ. ಸಿಲಿಂಡರ್ ದರವನ್ನು ರೂ. 200 ಮತ್ತು ಉಜ್ವಲ ಯೋಜನೆಯ ಫಲಾನುಭವಿಗಳಿಗೆ ರೂ. 400 ಇಳಿಸುವ ನಿರ್ಧಾರ ತೆಗೆದುಕೊಂಡಿರುವುದು ಸ್ವಾಗತರ್ಹ: ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌

Suddi Udaya

ಅಂಡಿಂಜೆ: ಯುವಕ ಮಂಡಲದಿಂದ ಮೊಸರು ಕುಡಿಕೆ ಉತ್ಸವ, ವಿವಿಧ ಆಟೋಟ ಸ್ಪರ್ಧೆಗಳು

Suddi Udaya

ಕಕ್ಕಿಂಜೆ “ಅರ್ಶ್ ಎಜ್ಯುಕೇಶನ್ ಅಕಾಡೆಮಿ”ಯ ಪ್ರವೇಶಾತಿ ಆರಂಭ

Suddi Udaya

ಮಿತ್ತಬಾಗಿಲು – ಮಲವಂತಿಗೆ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಗುರುಪೂಜೆ ಉತ್ಸವ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಡಿ ತಾಲೂಕಿನ 5‌ ಸಾವಿರ ಗಿಡಗಳ ವಿತರಣಾ ಕಾರ್ಯಕ್ರಮ

Suddi Udaya

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಹುಟ್ಟು ಹಬ್ಬದ ಸಂಭ್ರಮ: ಭಾರತೀಯ ಜೀವ ವಿಮಾ ನಿಗಮ ದಿಂದ ಡಾ.ಹೆಗ್ಗಡೆಯವರಿಗೆ ಗೌರವಾರ್ಪಣೆ; ಡಾ. ಹೆಗ್ಗಡೆಯವರ ಭಾವಚಿತ್ರವಿರುವ ಅಂಚೆ ಚೀಟಿ ಬಿಡುಗಡೆ

Suddi Udaya
error: Content is protected !!