26.2 C
ಪುತ್ತೂರು, ಬೆಳ್ತಂಗಡಿ
October 17, 2026
Uncategorized

ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಪ್ರಥಮ್ ವಿ. ಶೆಟ್ಟಿಗೆ ಬೆಳ್ಳಿ ಪದಕ

ಉಜಿರೆ:ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ.), ಉಜಿರೆಯ ಪ್ರತಿಭಾವಂತ ಎಂಟನೇ ವಿದ್ಯಾರ್ಥಿ ಪ್ರಥಮ್ ವಿ. ಶೆಟ್ಟಿ ಅವರು ರಾಯಚೂರಿನ ಫೆಡರಲ್ ಪಬ್ಲಿಕ್ ಸಿ.ಬಿ.ಎಸ್.ಇ. ಶಾಲೆಯಲ್ಲಿ ನಡೆದ ಕ್ಲಸ್ಟರ್-VIII ಅಥ್ಲೆಟಿಕ್ಸ್-2026ರ ಅಂಡರ್-14 ಬಾಲಕರ ಶಾಟ್‌ಪುಟ್ ವಿಭಾಗದಲ್ಲಿ ಅತ್ಯುತ್ತಮ ಸಾಧನೆಗೈದು ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ. ಈ ಸಾಧನೆಯ ಮೂಲಕ ಅವರು ಪಂಜಾಬ್ ನ ಪಟಿಯಾಲಾದಲ್ಲಿ ಅ. 15 ರಿಂದ 20ರ ವರೆಗೆ ನಡೆಯಲಿರುವ ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್ ಕೂಟಕ್ಕೆ ಅರ್ಹತೆ ಪಡೆದಿದ್ದಾರೆ.

ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ರಾಜಮ್ಮ ಅವರು ತರಬೇತಿ ನೀಡಿರುವ ಪ್ರಥಮ್ ಅವರ ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕರು ಹಾಗೂ ಸಹಪಾಠಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಅವರ ಶ್ರಮ, ಶಿಸ್ತು, ನಿರಂತರ ಅಭ್ಯಾಸ ಮತ್ತು ಕ್ರೀಡಾ ಪ್ರತಿಭೆಗೆ ಈ ಯಶಸ್ಸು ಸಾಕ್ಷಿಯಾಗಿದೆ.

Related posts

ಅಳದಂಗಡಿ: ಕಾಂಗ್ರೆಸ್ ಪಕ್ಷದ ಕಾರ್ಯಾಲಯ ಹಾಗೂ ಸೇವಾ ಸಿಂಧು ಕೇಂದ್ರದ ಉದ್ಘಾಟನೆ

Suddi Udaya

ಸಂತ ಅಂತೋನಿ ಪದವಿ ಕಾಲೇಜು ಹಾಗೂ ಪದವಿಪೂರ್ವ ಕಾಲೇಜು ಇದರ ಜಂಟಿ ಆಶ್ರಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕಲಾ ಸಂಭ್ರಮ

Suddi Udaya

ನಿಡ್ಲೆಯ ಅಗ್ರಿಲೀಫ್ ಎಕ್ಸ್ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪೆನಿ ಇನ್ವೆಸ್ಟ್ ಕರ್ನಾಟಕ -2025 ನಲ್ಲಿ ಭಾಗಿ

Suddi Udaya

ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಾಧನೆಗೆ ಸಾಧನಾ ಪ್ರಶಸ್ತಿ

Suddi Udaya

ಉಜಿರೆ: ವಿಲ್ಸನ್ ಸಂತೋಷ್ ರೊಡ್ರಿಗಸ್ ಹೃದಯಾಘಾತದಿಂದ ನಿಧನ

Suddi Udaya

ಸೆ.14-21: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮೇಲೈಸಲಿದೆ 27ನೇ ವರ್ಷದ ಭಜನಾ ಕಮ್ಮಟ

Suddi Udaya
error: Content is protected !!