September 6, 2026
Uncategorized

ಶಿಬಾಜೆ; ವಲಯ ಶಿವಳ್ಳಿ ಬಾಂಧವರ ವತಿಯಿಂದ ಜಯರಾಮ ನೆಲ್ಲಿತ್ತಾಯ ದಂಪತಿಗಳಿಗೆ ಅಭಿನಂದನಾ ಕಾರ್ಯಕ್ರಮ ಜಯರಾಮ ನೆಲ್ಲಿತ್ತಾಯ ಸಮಾಜದ ಆಸ್ತಿ: ರಾಜಪ್ರಸಾದ್ ಪೊಲ್ನಾಯ

ಶಿಬಾಜೆ: ಜಯರಾಮ ನೆಲ್ಲಿತ್ತಾಯ ನಮ್ಮ ಸಮಾಜದ ಆಸ್ತಿ. ಕಳೆದ 41ವರ್ಷದಲ್ಲಿ ಶ್ರೀ ಧರ್ಮಸ್ಥಳ ಯೋಜನೆಯಲ್ಲಿ ಅವರ ನಿರಂತರ ಸೇವೆ ಅಭಿನಂದನೀಯ. ನಮ್ಮ ಸಮಾಜ ಅವರಿಗೆ ಅಭಿನಂದನೆ ತಿಳಿಸುತ್ತದೆ. ಅವರ ಯೋಜನೆ ಮತ್ತು ಯೋಚನೆ ಇನ್ನೂ ನಮ್ಮ ಸಮಾಜಕ್ಕೆ ದೊರಕುವಂತಾಗಲಿ. ದಣಿವರಿಯದ ಕಾಯಕ ಅವರಿದ್ದಾಗಿತ್ತು. ಇನ್ನೂ ಅವರ ನಿರಂತರ ಸೇವೆಗೆ ನಾವೆಲ್ಲರಿದ್ದೂ ಸಹಕಾರ ಸಹಾಯವಿದೆ ಎಂದು ಬೆಳ್ತಂಗಡಿ ತಾಲೂಕು ಶಿವಳ್ಳಿ ಸಮಾಜದ ಅಧ್ಯಕ್ಷ ರಾಜಪ್ರಸಾದ್ ಪೊಲ್ನಾಯ ತಿಳಿಸಿದರು.

ಅವರು ಶಿಬಾಜೆ ಊರ್ತಾಜೆ ಪುರಂದರ ರಾವ್ ಅವರ ಮನೆಯಲ್ಲಿ ವಲಯ ಶಿವಳ್ಳಿ ಬಾಂಧವರ ವತಿಯಿಂದ ಜಯರಾಮ ನೆಲ್ಲಿತ್ತಾಯ ಮತ್ತು ರೇಖಾ ನೆಲ್ಲಿತ್ತಾಯ ದಂಪತಿಗಳಿಗೆ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸಲ್ಲಿಸಿದರು.

ಶ್ರೀ ಧರ್ಮಸ್ಥಳ ಯೋಜನೆಯಲ್ಲಿ ನಿರಂತರ 41 ವರ್ಷದ ಸೇವೆಗಾಗಿ ಶಿಶಿಲ, ಶಿಬಾಜೆ, ಹತ್ಯಡ್ಕ, ರೆಖ್ಯಾ ಗ್ರಾಮದ ಸಮಾಜ ಬಾಂಧವರಿಂದ ಜಯರಾಮ ನೆಲ್ಲಿತ್ತಾಯ ದಂಪತಿಗಳಿಗೆ ಅಭಿನಂದನಾ ಕಾರ್ಯಕ್ರಮ ಜರಗಿತು.

ಸಭೆಯ ಅಧ್ಯಕ್ಷತೆಯನ್ನು ವಲಯ ಅಧ್ಯಕ್ಷ ಪುರಂದರ ರಾವ್ ವಹಿಸಿದ್ದರು. ತಾಲೂಕು ನಿಕಟ ಪೂರ್ವ ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ಮತ್ತು ಕಾರ್ಯದರ್ಶಿ ಮುರಳೀ ಕೃಷ್ಣ ಆಚಾರ್ಯ ಅಭಿನಂದನಾ ಮಾತು ನುಡಿದರು. ಶ್ರೀಕರ ರಾವ್ ಅಭಿನಂದನಾ ಪತ್ರ ವಾಚಿಸಿದರು. ಸುಧೀರ್ ರಾವ್ ಅಡ್ಕಾಡಿ ಸ್ವಾಗತಿಸಿದರು.

ವೇದಿಕೆಯಲ್ಲಿ ಭಾಸ್ಕರ ರಾವ್ ಮುಂಡ್ರುಪ್ಪಾಡಿ, ತಾಲೂಕು ಮಹಿಳಾ ಪದಾಧಿಕಾರಿಗಳಾದ ಜಯಾ, ಅಕ್ಷತಾ, ಜಯರಾಮ ನೆಲ್ಲಿತ್ತಾಯ, ರೇಖಾ ನೆಲ್ಲಿತ್ತಾಯ, ಗಿರೀಶ ಕುಂದ್ರೆತ್ತಾಯ ಧರ್ಮಸ್ಥಳ, ನಿಡ್ಲೆ ಲಕ್ಮೀನಾರಾಯಣ , ಜಿಲ್ಲಾಧ್ಯಕ್ಷ ಡಾ. ದಯಾಕರ್ ಮುಂತಾದವರು ಉಪಸ್ಥಿತರಿದ್ದರು. ಕು.ಆರಾದ್ಯ .ಪಿ.ರಾವ್ ಪ್ರಾರ್ಥಿಸಿದರು. ಕಾರ್ಯದರ್ಶಿ ಮೋಹನ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು. ಗಿರೀಶ ಭಟ್ ವಂದಿಸಿದರು.

ಬಳಿಕ ಭ್ರಾಮರಿ ಮಹಿಳಾ ಯಕ್ಷಗಾನ ವೃಂದ ಮಂಗಳೂರು ಅವರಿಂದ ಯಕ್ಷಗಾನ ತಾಳಮದ್ದಳೆ ಜರಗಿತು.

Related posts

ನಿಡ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ ಸಮಾರಂಭ ಹಾಗೂ ನೂತನ ಕಟ್ಟಡ ಉದ್ಘಾಟನೆ

Suddi Udaya

ನೆರಿಯ: ಕುವೆತ್ತಿಲ್ ನಲ್ಲಿ ಆಕಸ್ಮಿಕ ಬೆಂಕಿ ಅನಾಹುತ: ಅನಿಲ್ ಎಂಬವರ ಮನೆಗೆ ಸಂಪೂರ್ಣ ಹಾನಿ

Suddi Udaya

ತಾಲೂಕು ಮಟ್ಟದ ಕರಾಟೆ ಸ್ಪರ್ಧೆ: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಅರಸಿನಮಕ್ಕಿ: ಕುಲಾಲರ ಸಂಘದ ವಿಶೇಷ ಮಾಸಿಕ ಸಭೆ

Suddi Udaya

ಪೆರಾಡಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

Suddi Udaya

ಉಜಿರೆ: ಮಾಚಾರಿನಲ್ಲಿ ಶ್ರೀ.ಕ್ಷೇ.ಧ.ಗ್ರಾ. ಯೋಜನೆ ವತಿಯಿಂದ ವಾತ್ಸಲ್ಯ ಮನೆಗೆ ಕೆಸರು ಕಲ್ಲು ಹಾಕಿ ಮನೆ ನಿರ್ಮಾಣಕ್ಕೆ ಚಾಲನೆ

Suddi Udaya
error: Content is protected !!