26.2 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬಳಂಜ ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ರೂ.9.02 ಲಕ್ಷ ನಿವ್ವಳ ಲಾಭ: ಸದಸ್ಯರಿಗೆ ಶೇ.65 ಬೋನಸ್‌, ಶೇ.24 ಡಿವಿಡೆಂಟ್‌ ಘೋಷಣೆ

ಬಳಂಜ: ಬಳಂಜ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘವು 1,500 ಲೀಟರ್ ಹಾಲು ಸಂಗ್ರಹಿಸಿ ಒಕ್ಕೂಟಕ್ಕೆ ಮಾರಾಟ ಮಾಡುವ ಮೂಲಕ ರೂ.19,43,629.39 ಒಟ್ಟು ವ್ಯವಹಾರ ನಡೆಸಿದ್ದು, ರೂ.9,02,358.70 ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷೆ ಪುಷ್ಪಾ ತಿಳಿಸಿದರು.

ಬಳಂಜ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ಆ.24ರಂದು ನಡೆದ ಸಂಘದ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು.

ಸದಸ್ಯರು ಗುಣಮಟ್ಟದ ಹಾಲು ಪೂರೈಕೆ ಮಾಡುವುದರ ಜೊತೆಗೆ ಸಂಘದ ಪಶು ಆಹಾರವನ್ನು ಖರೀದಿಸುವ ಮೂಲಕ ಸಂಘದ ಲಾಭದಾಯಕ ಬೆಳವಣಿಗೆಗೆ ಸಹಕರಿಸುತ್ತಿದ್ದಾರೆ. ಸಿಬ್ಬಂದಿಗಳ ಪೂರ್ಣ ಸಹಕಾರದಿಂದ ಸಂಘ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಈ ಸಂದರ್ಭದಲ್ಲಿ ಸದಸ್ಯರಿಗೆ ಶೇ.65 ಬೋನಸ್‌ ಹಾಗೂ ಶೇ.24 ಡಿವಿಡೆಂಟ್‌ ಘೋಷಿಸಲಾಯಿತು.

ದ.ಕ. ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ರಾಜೇಶ್ ಪಿ. ಕಾಮತ್ ಮಾತನಾಡಿ, ಸರಕಾರ ಹಾಗೂ ಹಾಲು ಒಕ್ಕೂಟದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಗುಣಮಟ್ಟದ ಹಾಲು ಉತ್ಪಾದಿಸಿ ಹೆಚ್ಚಿನ ಲಾಭ ಪಡೆಯುವಂತೆ ಹಾಗೂ ನಂದಿನಿ ಸಮತೋಲನ ಪಶು ಆಹಾರ, ಲವಣ ಮಿಶ್ರಣ ಮತ್ತು ಸಂವೃದ್ಧಿ ಬಳಕೆಯಿಂದ ಹೈನುಗಾರಿಕೆಯಲ್ಲಿ ಹೆಚ್ಚಿನ ಆದಾಯ ಗಳಿಸುವ ಕುರಿತು ತಿಳಿಸಿದರು.

ಸಂಘದ ಉಪಾಧ್ಯಕ್ಷೆ ಪ್ರಮೀಳಾ, ನಿರ್ದೇಶಕರಾದ ಮಾಲಿನಿ, ಮುಕ್ತಾ, ಉಷಾ, ಅರುಣ ಹೆಗ್ಡೆ, ಜಯಶ್ರೀ, ಚಂದ್ರಾವತಿ, ನಂದಿನಿ, ಬೇಬಿ ಹಾಗೂ ಹಾಲು ಪರೀಕ್ಷಕಿ ರೇಶ್ಮಾ ಉಪಸ್ಥಿತರಿದ್ದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾರತಿ ವರದಿ ವಾಚಿಸಿದರು. ಕೀರ್ತಿ ಪ್ರಾರ್ಥಿಸಿ ಸ್ವಾಗತಿಸಿದರು. ನಿರ್ದೇಶಕಿ ಜಯಶ್ರೀ ವಂದಿಸಿದರು. ಚಂದ್ರಾವತಿ ಕೆ. ಮತ್ತು ನಂದಿನಿ ಸುರೇಶ್ ನಿರೂಪಿಸಿದರು.


ಸನ್ಮಾನ:
2008ರಿಂದ ನಿರಂತರವಾಗಿ ಸಂಘದ ಅಭಿವೃದ್ಧಿಗೆ ಸೇವೆ ಸಲ್ಲಿಸುತ್ತಿರುವ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾರತಿ ಹಾಗೂ ಸಂಘದ ಅಭಿವೃದ್ಧಿಗೆ ಸಹಕರಿಸುತ್ತಿರುವ ಹಾಲು ಪರೀಕ್ಷಕಿ ರೇಷ್ಮಾ ಅವರನ್ನು ಸನ್ಮಾನಿಸಲಾಯಿತು. ಅತೀ ಹೆಚ್ಚು ಹಾಲು ಪೂರೈಸಿದ ನಾಲ್ವರು ಹೈನುಗಾರರನ್ನು ಗೌರವಿಸಲಾಯಿತು. ಅಲ್ಲದೆ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಯಿತು.

Related posts

ಮೊಗ್ರು : ಕೃಷಿಕ ವಿಶ್ವನಾಥ ಗೌಡ ನಿಧನ

Suddi Udaya

ದಿ. ಕೆ.ವಸಂತ ಬಂಗೇರ ಮತ್ತು ಎಚ್ ಶೇಖರ ಬಂಗೇರರವರಿಗೆ ಗೆಜ್ಜೆ ಗಿರಿಯಲ್ಲಿ ಶ್ರದ್ಧಾಂಜಲಿ

Suddi Udaya

ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆಂದು ಹೇಳಿರುವ ಸಾಕ್ಷಿ ದೂರು ದಾರ: ಇಂದು ಮಂಗಳೂರಿನಲ್ಲಿ ಡಿಐಜಿ ಅನುಚೇತ್ ಮುಂದೆ ಹೇಳಿಕೆ ನೀಡಲು ಹಾಜರು

Suddi Udaya

ಬೆಳ್ತಂಗಡಿ ಮಕ್ಕಳ ಹಕ್ಕುಗಳ ಮಾಸೋತ್ಸವ ಸಮಿತಿಯ ಸಂಚಾಲಕರಾಗಿ ಅಬ್ದುಲ್ ಖಾದರ್ ನಾವೂರು ಆಯ್ಕೆ

Suddi Udaya

ಕುಕ್ಕೇಡಿ ಬುಲೆಕ್ಕಾರ ಫ್ರೆಂಡ್ಸ್ವಾ ನ ವಾರ್ಷಿಕ ಸಭೆ ಹಾಗೂ ಪದಾಧಿಕಾರಿಗಳ ಆಯ್ಕೆ

Suddi Udaya

ಧರ್ಮಸ್ಥಳ: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ ವಾರೀಸುದಾರರ ಪತ್ತೆಗೆ ಮನವಿ

Suddi Udaya
error: Content is protected !!