26.2 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ದಯಾ ವಿಶೇಷ ಶಾಲೆಯಲ್ಲಿ ಸಿಬ್ಬಂದಿ ಸಭೆ: ಮಕ್ಕಳ ಶಿಕ್ಷಣ, ಸುರಕ್ಷತೆ ಹಾಗೂ ಶಿಸ್ತಿಗೆ ಹೆಚ್ಚಿನ ಆದ್ಯತೆ

ಬೆಳ್ತಂಗಡಿ: ದಯಾ ವಿಶೇಷ ಶಾಲೆಯಲ್ಲಿ ಶಿಕ್ಷಕರು ಹಾಗೂ ಸಿಬ್ಬಂದಿಯ ಸಭೆ ನಡೆಯಿತು. ಸಭೆಯಲ್ಲಿ ಶಾಲೆಯ ಶೈಕ್ಷಣಿಕ ಚಟುವಟಿಕೆಗಳು, ಮಕ್ಕಳ ಆರೈಕೆ, ಸುರಕ್ಷತೆ, ಚಿಕಿತ್ಸಾ ಸೇವೆಗಳು ಹಾಗೂ ಶಾಲಾ ಆಡಳಿತಕ್ಕೆ ಸಂಬಂಧಿಸಿದ ಹಲವು ಮಹತ್ವದ ವಿಷಯಗಳ ಕುರಿತು ಚರ್ಚಿಸಲಾಯಿತು.

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಅಗತ್ಯ ಚಿಕಿತ್ಸಾ ಸೇವೆಗಳನ್ನು ಸಮರ್ಪಕವಾಗಿ ಒದಗಿಸುವುದು, ಶಿಕ್ಷಕರು ತಮ್ಮ ತರಗತಿಯ ಮಕ್ಕಳ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವುದು ಹಾಗೂ ರಜೆಯ ಸಂದರ್ಭದಲ್ಲಿ ಪರ್ಯಾಯ ಶಿಕ್ಷಕರಿಗೆ ಜವಾಬ್ದಾರಿ ಹಸ್ತಾಂತರಿಸುವ ಕುರಿತು ಸೂಚಿಸಲಾಯಿತು.

ಊಟದ ಸಮಯದಲ್ಲಿ ಮಕ್ಕಳ ಮೇಲೆ ಸೂಕ್ತ ನಿಗಾ ವಹಿಸುವುದು, ಮಕ್ಕಳ ಸ್ವಚ್ಛತೆ ಹಾಗೂ ವೈಯಕ್ತಿಕ ಆರೈಕೆಗೆ ಗಮನ ನೀಡುವುದು ಮತ್ತು ಶಾಲಾ ಬಸ್‌ನಲ್ಲಿ ಮಕ್ಕಳನ್ನು ಸುರಕ್ಷಿತವಾಗಿ ಕರೆತರುವುದು–ಕಳುಹಿಸುವುದರ ಬಗ್ಗೆ ಸಿಬ್ಬಂದಿಗೆ ಜವಾಬ್ದಾರಿಗಳನ್ನು ನೆನಪಿಸಲಾಯಿತು.

ಪ್ರತಿದಿನ ಸ್ಟಾಫ್ ಮೀಟಿಂಗ್/ಸ್ಟಾಫ್ ಚರ್ಚೆ ನಡೆಸಿ, ಮಕ್ಕಳ ಶೈಕ್ಷಣಿಕ ಪ್ರಗತಿ, ವರ್ತನೆ ಹಾಗೂ ಅಗತ್ಯತೆಗಳ ಕುರಿತು ಪರಸ್ಪರ ಚರ್ಚಿಸುವಂತೆ ತಿಳಿಸಲಾಯಿತು. ಮಕ್ಕಳಿಗೆ ನೀಡಲಾಗುವ ಫಿಸಿಯೋಥೆರಪಿ ಹಾಗೂ ಇತರ ಚಿಕಿತ್ಸಾ ಸೇವೆಗಳ ವೇಳಾಪಟ್ಟಿಯನ್ನು ಸರಿಯಾಗಿ ನಿರ್ವಹಿಸುವುದು ಮತ್ತು ಚಿಕಿತ್ಸಾ ಚಟುವಟಿಕೆಗಳ ಮೇಲ್ವಿಚಾರಣೆ ಮಾಡುವ ಬಗ್ಗೆಯೂ ಚರ್ಚೆ ನಡೆಯಿತು.

ಮಕ್ಕಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಅಥವಾ ವಿಶೇಷ ಗಮನ ಅಗತ್ಯವಿರುವ ವಿಚಾರಗಳನ್ನು ತಕ್ಷಣವೇ ಮುಖ್ಯಸ್ಥರ ಗಮನಕ್ಕೆ ತರುವಂತೆ ಸೂಚಿಸಲಾಯಿತು. ಪೋಷಕರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು, ಮಕ್ಕಳ ಪ್ರಗತಿ ಮತ್ತು ಅಗತ್ಯತೆಗಳ ಕುರಿತು ನಿರಂತರವಾಗಿ ಸಹಕರಿಸುವಂತೆ ಶಿಕ್ಷಕರಿಗೆ ತಿಳಿಸಲಾಯಿತು.

ಸಭೆಯಲ್ಲಿ ಪ್ರತಿಯೊಬ್ಬ ಸಿಬ್ಬಂದಿಯ ಜವಾಬ್ದಾರಿಯುತ ಸಹಕಾರವೇ ವಿಶೇಷ ಮಕ್ಕಳ ಸಮಗ್ರ ಅಭಿವೃದ್ಧಿಗೆ ಪ್ರಮುಖ ಆಧಾರ ಎಂಬ ಆಶಯದೊಂದಿಗೆ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ನಿರ್ಧಾರ ಕೈಗೊಂಡರು.

Related posts

ಮೈರೋಳ್ತಡ್ಕ ಶಾಲಾ ಅಮೃತಮಹೋತ್ಸವ ಪ್ರಯುಕ್ತ ಆಧಾರ್ ನೋಂದಣಿ-ತಿದ್ದುಪಡಿ ಕಾರ್ಯಕ್ರಮ

Suddi Udaya

ಯುವವಾಹಿನಿ ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ಆಟಿದ ಕಮ್ಮೆನ

Suddi Udaya

ಚೆಸ್ ಪಂದ್ಯಾಟ: ವೈಬ್ರೆಂಟ್ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಕ್ಕಳರೋಗ ತಪಾಸಣಾ ಶಿಬಿರ

Suddi Udaya

ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಪಬ್ಲೀಕ್ ಪರೀಕ್ಷೆ ಯಶಸ್ವಿ ಆರಂಭ: ಪರೀಕ್ಷೆ ಬರೆಯುತ್ತಿದ್ದಾರೆ 70 ಪ್ರೌಢಗಳ 4215 ವಿದ್ಯಾರ್ಥಿಗಳು

Suddi Udaya

ಐದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದ ಆರೋಪಿಯ ಬಂಧನ

Suddi Udaya
error: Content is protected !!