26.9 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕುದ್ರಡ್ಕ ಶ್ರೀ ಮಹಾಗಣಪತಿ ಭಜನಾ ಮಂಡಳಿಯಿಂದ ರಕ್ಷಾ ಬಂಧನ ಆಚರಣೆ

ಕುದ್ರಡ್ಕ ಶ್ರೀ ಮಹಾಗಣಪತಿ ಭಜನಾ ಮಂಡಳಿಯ ವತಿಯಿಂದ ಆ. 29ರಂದು ಶ್ರೀ ಮಹಾಗಣಪತಿ ಭಜನಾ ಮಂದಿರದಲ್ಲಿ ರಕ್ಷಾ ಬಂಧನ ಆಚರಣಾ ಕಾರ್ಯಕ್ರಮವು ನಡೆಯಿತು. ಮುಖ್ಯ ಅಥಿತಿಗಳಾಗಿ ಕೇಶವ ಎಂ.ಕೆ. ನೇರೋಳುಪಲ್ಕೆ ಭಾಗವಹಿಸಿದ್ದರು.

ಮಂಡಳಿಯ ಗೌರವಾಧ್ಯಕ್ಷ ಸದಾನಂದ ಶೆಟ್ಟಿ ಮಡಪ್ಪಾಡಿ ರಕ್ಷಾಬಂಧನದ ಧಾರ್ಮಿಕ ಹಿನ್ನಲೆ ಮತ್ತು ಮಹತ್ವದ ಬಗ್ಗೆ ತಿಳಿಸಿದರು. ಬೆಳ್ತಂಗಡಿ ಕುಣಿತಾ ತರಬೇತುದಾರರ ತಂಡದ ಅಧ್ಯಕ್ಷ ಸಂದೇಶ್ ಮದ್ದಡ್ಕ ಇವರು ರಕ್ಷಾಬಂಧನದ ಆಚರಣೆ ಮತ್ತು ಪ್ರಸಕ್ತ ಕಾಲಘಟ್ಟದಲ್ಲಿ ಭ್ರಾತುತ್ವದ ಆಗತ್ಯತೆಯ ಬಗ್ಗೆ ವಿದ್ಯಾರ್ಥಿಗಳಿಗೆ ಅಮೂಲ್ಯ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಮಂಡಳಿಯ ಅಧ್ಯಕ್ಷ ವಸಂತ ಮಡಕ್ಕಿಲ, ಮಹಿಳಾ ಕುಣಿತ ಭಜನಾ ಮಂಡಳಿಯ ಅಧ್ಯಕ್ಷ ಶ್ರೀಮತಿ ಪ್ರಮೀಳಾ ಕುದ್ರಡ್ಕ, ಪುರುಷೋತ್ತಮ ಶೆಟ್ಟಿ ಮಡಪ್ಪಾಡಿ, ಶಿವರಾಮ ಆಚಾರ್ಯ ಕುದ್ರಡ್ಕ, ಮೋಹನಂದ ಮಾನ್ಯ, ಕುಣಿತ ಭಜನಾ ತರಭೇತುದಾರರಾದ ಆಕಾಶ್, ಮಂಡಳಿಯ ಸದಸ್ಯರು, ಪೋಷಕರು, ಭಗವಧ್ಭಕ್ತರು ಮತ್ತು ಭಜನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮಂಡಳಿಯ ಕಾರ್ಯದರ್ಶಿ ಸಂಪತ್ ಪಿಜಕೂಡಂಗೆ ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿ, ಧನ್ಯವಾದ ನೆರವೇರಿಸಿದರು.

Related posts

ಗೇರು ಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಶಿಲನ್ಯಾಸ

Suddi Udaya

ಉಜಿರೆ :ಎಸ್. ಡಿ. ಎಂ. ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ‘ಪೋಷಕರ ಸಭೆ ‘

Suddi Udaya

ಬೆಳ್ತಂಗಡಿ: ವಾಣಿ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟ

Suddi Udaya

ಬೆಳ್ತಂಗಡಿ : ವಾಣಿ ಶಿಕ್ಷಣ ಸಂಸ್ಥೆಯಲ್ಲಿ ‘ವಾಣಿ ವಿದ್ಯಾ ಸಮ್ಮಾನ್’ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ

Suddi Udaya

ಅಳದಂಗಡಿ : ಬಡಗಕಾರಂದೂರು ಒಕ್ಕೂಟದ ಮಾಸಿಕ ಸಭೆ: ಮಾಸಾಶನ ಪತ್ರ ವಿತರಣೆ

Suddi Udaya

ಉಜಿರೆ ಮಹಿಳಾ ಜ್ಞಾನವಿಕಾಸ ಕೇಂದ್ರದಲ್ಲಿ ಬೀದಿ ನಾಟಕ

Suddi Udaya
error: Content is protected !!