32.3 C
ಪುತ್ತೂರು, ಬೆಳ್ತಂಗಡಿ
October 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಆನೆಗಳ ಹಾವಳಿ ನಿಯಂತ್ರಣಕ್ಕೆ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಅರಣ್ಯ ಇಲಾಖೆಯಿಂದ ರಂಗಪೂಜೆ

ಕೊಕ್ಕಡ: ಆನೆಗಳಿಂದ ಸಾರ್ವಜನಿಕ ಜೀವ, ಕೃಷಿ ಹಾಗೂ ಆಸ್ತಿಪಾಸ್ತಿಗಳಿಗೆ ಹಾನಿಯಾಗದಂತೆ ಹಾಗೂ ಆನೆ ಹಾವಳಿ ನಿಯಂತ್ರಣಕ್ಕೆ ಬರಲಿ ಎಂದು ಪ್ರಾರ್ಥಿಸಿ ಅರಣ್ಯ ಇಲಾಖೆಯ ವತಿಯಿಂದ ಕೊಕ್ಕಡ ಸೌತಡ್ಕ ಶ್ರೀ ಮಹಾಗಣಪತಿ ದೇವರಿಗೆ ರಂಗಪೂಜೆ ಸಲ್ಲಿಸಲಾಯಿತು.

ಸಾರ್ವಜನಿಕರು ಹಾಗೂ ಕೃಷಿಕರಿಗೆ ಆನೆಗಳಿಂದ ಯಾವುದೇ ರೀತಿಯ ಜೀವಹಾನಿ, ಬೆಳೆ ಹಾಗೂ ಸೊತ್ತು ಹಾನಿ ಸಂಭವಿಸದಂತೆ ಪ್ರಾರ್ಥಿಸಿ ಅರಣ್ಯ ಇಲಾಖೆಯ ಸಿಬ್ಬಂದಿ ವತಿಯಿಂದ ರಂಗಪೂಜೆ ನೆರವೇರಿಸಲಾಯಿತು.


ಈ ಸಂದರ್ಭದಲ್ಲಿ ಆರ್‌ಎಫ್‌ಒ ರಾಘವೇಂದ್ರ, ಡಿಆರ್‌ಎಫ್‌ಒಗಳಾದ ಶಿವಾನಂದ ಆಚಾರ್ಯ, ಯತೀಂದ್ರ, ಸುನೀಲ್, ವಿನಯ್, ಪ್ರವೀಣ್, ಭವಾನಿ ಶಂಕರ ಹಾಗೂ ಹರಿಪ್ರಸಾದ್, ಗಸ್ತು ಅರಣ್ಯಪಾಲಕರಾದ ಸುನೀಲ್ ನಾಯ್ಕ, ನಾಗಲಿಂಗ, ದಿವಾಕರ ರೈ, ದೀಕ್ಷಾ, ಸವಿತಾ, ಶಿವಾನಂದ ಕುದುರಿ ಹಾಗೂ ಸಚಿನ್, ವಾಚರ್ ಸೇಸಪ್ಪ, ಚಾಲಕ ಕಿಶೋರ್ ಹಾಗೂ ಮುಂಡೂರುಪಳಿಕೆ ಶ್ರೀಕೃಷ್ಣ ಕುಮಾರ್ ಭಟ್ ಉಪಸ್ಥಿತರಿದ್ದರು.

Related posts

ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ವತಿಯಿಂದ ಸ್ವಚ್ಛಾಲಯ ಅಭಿಯಾನ

Suddi Udaya

ಉಜಿರೆ ಎಸ್.ಡಿ.ಎಂ ಸಿಬಿಎಸ್ಇ ಶಾಲೆಯಲ್ಲಿ ‘ಕಲಾಬ್ದಿ – 2025’ ಗೆ ಚಾಲನೆ

Suddi Udaya

ಮೇಲಂತಬೆಟ್ಟು: ದರ್ಶನ್ ಯು ಸಾಲ್ಯಾನ್ ಅಸೌಖ್ಯದಿಂದ ನಿಧನ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ಲೇಡಿ ಜೇಸಿ ಮತ್ತು ಜೆಜೆಸಿ ಸಮ್ಮೇಳನದ ಪ್ರಯುಕ್ತ ಅಭಿನಂದನಾ ಕಾರ್ಯಕ್ರಮ

Suddi Udaya

ಡಿ.21-22: ಬದನಾಜೆ ಶಾಲೆಯ ಅಮೃತ ಮಹೋತ್ಸವ ಸಂಭ್ರಮ: ಸುಜ್ಞಾನ ಸಭಾಂಗಣ ಲೋಕಾರ್ಪಣೆ

Suddi Udaya

ಬೆಳಾಲು: ಅಕ್ರಮವಾಗಿ ಮದ್ಯ ಶೇಖರಣೆ: ಧರ್ಮಸ್ಥಳ ಪೊಲೀಸರಿಂದ ದಾಳಿ: ಆರೋಪಿ‌ ಪರಾರಿ

Suddi Udaya
error: Content is protected !!