32.3 C
ಪುತ್ತೂರು, ಬೆಳ್ತಂಗಡಿ
October 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಸೆ.6: ಎಕ್ಸೆಲ್‌ನಲ್ಲಿ ಗೋಕುಲದ ಗೋಪಾಲ–ಬೃಂದಾವನದ ರಾಧೆ ಸ್ಪರ್ಧೆ: ಎಲ್ಲರಿಗೂ ಮುಕ್ತ ಅವಕಾಶ

ಗುರುವಾಯನಕೆರೆ: ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಎಕ್ಸೆಲ್ ಟೆಕ್ನೋ ಸ್ಕೂಲ್, ಗುರುವಾಯನಕೆರೆ ವತಿಯಿಂದ ಮಕ್ಕಳಿಗಾಗಿ ‘ಗೋಕುಲದ ಗೋಪಾಲ–ಬೃಂದಾವನದ ರಾಧೆ’ ವೇಷಭೂಷಣ ಸ್ಪರ್ಧೆಯನ್ನು ಸೆ.6ರಂದು ಬೆಳಗ್ಗೆ 9.30ಕ್ಕೆ ಭಾನುವಾರ ಆಯೋಜಿಸಲಾಗಿದೆ.

ಸ್ಪರ್ಧೆಯಲ್ಲಿ ಎಲ್ಲ ಮಕ್ಕಳಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಜೂನಿಯರ್ ವಿಭಾಗದಲ್ಲಿ 1ರಿಂದ 3 ವರ್ಷದೊಳಗಿನ ಮಕ್ಕಳಿಗೆ ಹಾಗೂ ಸೀನಿಯರ್ ವಿಭಾಗದಲ್ಲಿ 3ರಿಂದ 6 ವರ್ಷದೊಳಗಿನ ಮಕ್ಕಳಿಗೆ ಸ್ಪರ್ಧೆ ನಡೆಯಲಿದೆ. ಎರಡೂ ವಿಭಾಗಗಳಲ್ಲಿಯೂ ಪ್ರಥಮ ಬಹುಮಾನ ರೂ.3,999 ಹಾಗೂ ಟ್ರೋಫಿ, ದ್ವಿತೀಯ ರೂ.2,999 ಹಾಗೂ ಟ್ರೋಫಿ, ತೃತೀಯ ರೂ.1,599 ಹಾಗೂ ಟ್ರೋಫಿ ನೀಡಲಾಗುತ್ತದೆ. 4ರಿಂದ 7ನೇ ಸ್ಥಾನದವರೆಗೆ ತಲಾ ರೂ.500 ಹಾಗೂ ಟ್ರೋಫಿ ಬಹುಮಾನವಿದೆ.

ಪ್ರತಿ ವಿಭಾಗದಲ್ಲೂ ಗೋಪಾಲ ಮತ್ತು ರಾಧೆ ಪಾತ್ರಗಳಿಗೆ ಪ್ರತ್ಯೇಕ ಬಹುಮಾನ ನೀಡಲಾಗುತ್ತದೆ. ಜೂನಿಯರ್ ವಿಭಾಗದಲ್ಲಿ ಅಮ್ಮನಿಗೆ ಕೃಷ್ಣ/ರಾಧೆಯಾಗಿ ಭಾಗವಹಿಸಲು ಅವಕಾಶವಿದೆ.

ಮಗುವಿನ ಜನನ ಪ್ರಮಾಣಪತ್ರದ ಪ್ರತಿಯನ್ನು ಕಡ್ಡಾಯವಾಗಿ ತರಬೇಕು. ನೋಂದಣಿಯನ್ನು ಸೆ.5ರಂದು ಸಂಜೆ 5 ಗಂಟೆಯೊಳಗೆ ಮಾಡಿಕೊಳ್ಳಬೇಕು. ಸ್ಪರ್ಧೆಯ ದಿನ ನೋಂದಣಿಗೆ ಅವಕಾಶವಿರುವುದಿಲ್ಲ. ಹಿನ್ನೆಲೆ ಸಂಗೀತಕ್ಕೆ ಅವಕಾಶವಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತರು ಹೆಚ್ಚಿನ ಮಾಹಿತಿಗಾಗಿ 6364156449, 9606455769 ಸಂಖ್ಯೆಯನ್ನು ಸಂಪರ್ಕಿಸಬಹುದು.

Related posts

ನೆರಿಯ ಸುಂದರ ಮಲೆಕುಡಿಯ ಅವರ ಕೊಲೆ ಯತ್ನ ಪ್ರಕರಣ: ನ್ಯಾಯಾಲಯದ ತೀರ್ಪು ಸ್ವಾಗತಾರ್ಹ; ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಬೆಳ್ತಂಗಡಿ ತಾಲೂಕು ಘಟಕ

Suddi Udaya

ಮೇಲಂತಬೆಟ್ಟು: ಮನೆಯ ಮೇಲೆ ಕುಸಿದು ಬಿದ್ದ ಧರೆ: ಮನೆ ಸಂಪೂರ್ಣ ಹಾನಿ

Suddi Udaya

ನಿಡ್ಲೆ ಸರ್ಕಾರಿ ಪ್ರೌಢಶಾಲೆಯಲ್ಲಿ ಪೋಷಕರಿಗೆ ಪುನಶ್ಚೇತನ ಕಾರ್ಯಾಗಾರ

Suddi Udaya

ನ್ಯಾಯತರ್ಪು: ಪಲ್ಲಾದೆ ಕೃಷಿಕ ನಾರಾಯಣ ಗೌಡ ನಿಧನ

Suddi Udaya

ವಿ.ಹಿಂ.ಪ. ಬಜರಂಗದಳ‌ ಮಾತೃಶಕ್ತಿ ದುರ್ಗಾವಾಹಿನಿ ಬೆಳ್ತಂಗಡಿ ಪ್ರಖಂಡದ ಆಶ್ರಯದಲ್ಲಿ ನಡೆಯುವ ಅಖಂಡ ಭಾರತ ಸಂಕಲ್ಪ ದಿನದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಗರ್ಡಾಡಿ ಯುವಕ ಮಂಡಲದ ಅಧ್ಯಕ್ಷರಾಗಿ ದಿನೇಶ್ ಬಂಗೇರ ಆಯ್ಕೆ

Suddi Udaya
error: Content is protected !!