September 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಜೇಸಿ ಹೇಮಾವತಿ ಕೆ ಮುಂಡಾಜೆ ರವರಿಗೆ ಸಾಧನಾಶ್ರೀ ಪುರಸ್ಕಾರ

ಬೆಳ್ತಂಗಡಿ: ದ.ಕ ಮತ್ತು ಉಡುಪಿ ಜಿಲ್ಲೆಯನ್ನು ಒಳಗೊಂಡ ಜೆಸಿಐ ವಲಯ 15ರ ಸಾಧನಾ ಶ್ರೀ ಪುರಸ್ಕಾರವನ್ನು ಜೆಸಿಐ ಉಜಿರೆ ಘಟಕದಿಂದ ಆಯ್ಕೆಯಾದ ಮಹಿಳಾ ಜೆಸಿ ಸಂಯೋಜಕಿ ಹೇಮಾವತಿ ಕೆ ಇವರಿಗೆ ವಲಯಾಧ್ಯಕ್ಷ ಸಂತೋಷ್ ಶೆಟ್ಟಿ ಇವರು ನೀಡಿ ಗೌರವಿಸಿದರು. ಜೆಸಿಐ ಮಡಂತ್ಯಾರ್ ಆತಿಥ್ಯದಲ್ಲಿ ಕಲಾ ಸಭಾಂಗಣ ಮಡಂತ್ಯಾರ್ ನಲ್ಲಿ ನಡೆದ ಮೃದಿನಿ -2026 ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗ ಹಾಗೂ ವ್ಯವಹಾರ ಸಮ್ಮೇಳನದಲ್ಲಿ ಈ ಗೌರವವನ್ನು ನೀಡಲಾಯಿತು .

ಈ ಸಂದರ್ಭದಲ್ಲಿ ವ್ಯವಹಾರ ವಿಭಾಗದ ನಿರ್ದೇಶಕ ವಿಕೇಶ್ ಮಾನ್ಯ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ರಂಜಿತ್ ಎಚ್ ಡಿ. ವಲಯ ಉಪಾಧ್ಯಕ್ಷ ಅರುಣ್ ಮಾಂಜ,ಜೆಸಿಐ ಮಡಂತ್ಯಾರನ ಅಧ್ಯಕ್ಷೆ ಸಾಯಿಸುಮ ಸೇರಿದಂತೆ ವಲಯದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಹೇಮಾವತಿ ಕೆ ಇವರು 2015ರಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀಗೆ ಸೇರ್ಪಡೆಗೊಂಡು 2020ರಲ್ಲಿ ಜೇಸಿರೆಟ್ ಅಧ್ಯಕ್ಷೆಯಾಗಿ ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿ ವಲಯದ ಅತ್ಯುತ್ತಮ ಮಹಿಳಾ ಜೇಸಿರೆಟ್ ಅಧ್ಯಕ್ಷೆ, ಅತ್ಯುತ್ತಮ ಮಹಿಳಾ ಜೇಸಿ ವಿನ್ನರ್ ಪ್ರಶಸ್ತಿ ಯೊಂದಿಗೆ ಮಹಿಳಾ ಜೇಸಿ ವಿಭಾಗದ ಸಪ್ತಾಹ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಮನ್ನಣೆಯನ್ನು ಪಡೆದುಕೊಂಡಿರುತ್ತಾರೆ. ಜನಪದ ಕಲಾವಿದೆಯಾಗಿರುವ ಇವರು ನೃತ್ಯರೂಪಕ ಜಾಗೃತಿ ಪ್ರಹಸನಗಳನ್ನು ನಿರ್ದೇಶಿಸಿದ್ದಾರೆ.
ಯುವಜನ ಮೇಳಗಳಲ್ಲಿ ಏಕಪಾತ್ರಾಭಿನಯಗಳಲ್ಲಿ ಸತತ ಎರಡು ಬಾರಿ ರಾಜ್ಯಮಟ್ಟದ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ. ಇವರ ನೇತೃತ್ವ ಮತ್ತು ನಿರ್ದೇಶನದಲ್ಲಿ ಕಲಾತಂಡಗಳು ತಾಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದ ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತವೆ.
ವೃತ್ತಿಯಲ್ಲಿ ವಾಣಿಜ್ಯ ಶಾಸ್ತ್ರ ಉಪನ್ಯಾಸಕಿಯಾಗಿರುವ ಇವರು ವಿವಿಧ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ತೀರ್ಪುಗಾರರಾಗಿ ನಿರಂತರವಾಗಿ ಭಾಗವಹಿಸುತ್ತಿದ್ದಾರೆ. ಅಲ್ಲದೆ ಇವರು ಜೆಸಿಐ ಇಂಡಿಯಾದ ವಲಯ ತರಬೇತುದಾರರಾಗಿ ನಿರಂತರವಾಗಿ ವ್ಯಕ್ತಿತ್ವ ವಿಕಸನ ತರಬೇತಿಗಳನ್ನು ನಡೆಸುತ್ತಿದ್ದು ಕಳೆದ ಆರು ವರ್ಷಗಳಿಂದ ತಾಲೂಕು ಮಟ್ಟದ ಝೇಂಕಾರ ಬೇಸಿಗೆ ಶಿಬಿರವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಇವರ ಸಂಘಟನಾ ಚಾತುರ್ಯ, ಸಾಂಸ್ಕೃತಿಕ, ಸಾಮಾಜಿಕ ಶೈಕ್ಷಣಿಕ ಕ್ಷೇತ್ರದ ಸಾಧನೆಯನ್ನು ಗುರುತಿಸಿ ವಲಯದ ಪ್ರತಿಷ್ಠಿತ ಸಾಧನಾ ಶ್ರೀ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ಜೆಸಿಐ ಪೂರ್ವ ವಲಯ ಉಪಾಧ್ಯಕ್ಷ ಪ್ರಶಾಂತ ಲಾಯಿಲ, ಜೆಸಿಐ ಉಜಿರೆ ಸಿಟಿ ಘಟಕದ ಅಧ್ಯಕ್ಷ ಮಹಮ್ಮದ್ ಮಿರ್ಷಾದ್, ನಿಕಟ ಪೂರ್ವಾಧ್ಯಕ್ಷೆ ಆಶಾಲತಾ ಪ್ರಶಾಂತ್, ಕಾರ್ಯದರ್ಶಿ ಭವ್ಯಶ್ರೀ ಕೀರ್ತಿರಾಜ್, ಜೇಸಿಐ ಬೆಳ್ತಂಗಡಿ ಘಟಕದ ಕಾರ್ಯದರ್ಶಿ ರಕ್ಷಿತ್ ಅಂಡಿಂಜೆ.ಭಾಗವಹಿಸಿದ್ದರು.

Related posts

ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದ ವತಿಯಿಂದ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಮತ್ತು ಅರ್ಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣಾ

Suddi Udaya

ಕೊಕ್ರಾಡಿ ಸರಕಾರಿ ಪ.ಪೂ. ಕಾಲೇಜಿಗೆ ಶೇ. 98.50 ಫಲಿತಾಂಶ

Suddi Udaya

ಪತ್ರಕರ್ತರ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟ ಡಾ.ಹೆಗ್ಗಡೆಯವರಿಂದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಪವರ್ ಲಿಫ್ಟಿಂಗ್ ಸ್ಪರ್ಧೆ: ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹೇಮಚಂದ್ರರಿಗೆ ಚಿನ್ನದ ಪದಕ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ದೇವದಾಸ್ ಶೆಟ್ಟಿ, ಕಾರ್ಯದರ್ಶಿ ಕಿರಣ್‌ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಅಮಿತಾನಂದ ಹೆಗ್ಡೆ

Suddi Udaya

ನ್ಯಾಯತರ್ಪು: ಕೊರೆಜಂಡ ಮನೆಗೆ ಸಿಡಿಲು ಬಡಿದು ಬಿರುಕು ಬಿಟ್ಟ ಗೋಡೆ,ಕಿತ್ತು ಹೋದ ವಿದ್ಯುತ್ ವಯರಿಂಗ್

Suddi Udaya
error: Content is protected !!