September 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಗ್ನಿವೀರ್ ಕುರಿತು ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

ಬೆಳ್ತಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ ಇದರ ಎನ್.ಸಿ.ಸಿ ನೌಕಾ ವಿಭಾಗ, ಯುವ ರೆಡ್ ಕ್ರಾಸ್ ಘಟಕ, ರೋವರ್ಸ್ ಮತ್ತು ರೇಂಜರ್ಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ “ಅಗ್ನಿವೀರ್ – ರಕ್ಷಣಾ ಸೇವೆಗಳತ್ತ ಒಂದು ದಾರಿ” ಎಂಬ ವಿಷಯದ ಕುರಿತು ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವು ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಪದ್ಮನಾಭ ಕೆ. ವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಪೊರಲ್ ಜಯಪ್ರಕಾಶ್ ಗೌಡ, ತುರ್ತು ವೈದ್ಯಕೀಯ ತಂತ್ರಜ್ಞರು, 104 ಹೆಲಿಕಾಪ್ಟರ್ ಸ್ಕ್ವಾಡ್ರನ್, ಭಾರತೀಯ ವಾಯುಪಡೆ, ಶ್ರೀ ಗಂಗಾನಗರ, ರಾಜಸ್ಥಾನ ಇವರು ಭಾಗವಹಿಸಿ, ಅಗ್ನಿವೀರ್ ಯೋಜನೆ, ವಾಯುಪಡೆ, ಭೂಸೇನೆ ಮತ್ತು ನೌಕಾಪಡೆಗೆ ಸೇರುವ ಅವಕಾಶಗಳು, ನೇಮಕಾತಿ ಪ್ರಕ್ರಿಯೆ, ದೈಹಿಕ ಮತ್ತು ಲಿಖಿತ ಪರೀಕ್ಷೆಗಳ ಸಿದ್ಧತೆ ಹಾಗೂ ದೇಶ ಸೇವೆಯ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ವಿವರವಾಗಿ ಮಾರ್ಗದರ್ಶನ ನೀಡಿದರು.

ವೇದಿಕೆಯಲ್ಲಿ ಎನ್.ಸಿ.ಸಿ ಅಧಿಕಾರಿಗಳಾದ ಡಾ. ದಿವ್ಯ ಪ್ರಭು ಮತ್ತು ಯುವ ರೆಡ್ ಕ್ರಾಸ್ ಘಟಕದ ಸಂಯೋಜನಾಧಿಕಾರಿ ಡಾ. ರವಿ ಎಂ.ಎನ್. ಉಪಸ್ಥಿತರಿದ್ದರು.

ಡಾ. ದಿವ್ಯ ಪ್ರಭು ಸ್ವಾಗತಿಸಿದರೆ, ಡಾ. ರವಿ ಎಂ.ಎನ್. ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಎನ್.ಸಿ.ಸಿ ಕೆಡೆಟ್ ಗಳು, ರೋವರ್ಸ್-ರೇಂಜರ್ಸ್ ಮತ್ತು ಯುವ ರೆಡ್ ಕ್ರಾಸ್ ಸ್ವಯಂಸೇವಕರು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Related posts

ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫೋನಿಕ್ ಸೌಂಡ್ ಗಳ ಉಚ್ಚಾರಣೆ ಮತ್ತು ಬಳಕೆ ಬಗ್ಗೆ ಕಾರ್ಯಾಗಾರ

Suddi Udaya

ಕೊಕ್ರಾಡಿ ಪ್ರೌಢಶಾಲೆಯ ಶಿಕ್ಷಕಿ ಶ್ರೀಮತಿ ಅಕ್ಕಮ್ಮ ರವರಿಗೆ ಶಿಕ್ಷಣ ರತ್ನ ಪ್ರಶಸ್ತಿ ಗೌರವ

Suddi Udaya

ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿಯ ಭಜನಾ ಕಾರ್ಯಕ್ರಮ ಉದ್ಘಾಟನೆ

Suddi Udaya

ಮಾಚಾರು: ಕೋರ್ಯಾರು ನಿವಾಸಿ ಜಯಗೌಡ ನಿಧನ

Suddi Udaya

ತೋಟತ್ತಾಡಿ : 9ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಪೂಜೋತ್ಸವ

Suddi Udaya

ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಪ್ರಚಾರದ ಅಂಗವಾಗಿ ನಡೆದ ಮತದಾರರ ಬೃಹತ್ ಸಮಾವೇಶದಲ್ಲಿ ವಿ.ಪ. ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಭಾಗಿ

Suddi Udaya
error: Content is protected !!