ಮಾಲಾಡಿ ಗ್ರಾಮ ಪಂಚಾಯತ್ 2026-2027ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆ ಆಡಳಿತಾಧಿಕಾರಿ ತಾ. ಪಂ. ಇಓ ಭವಾನಿಶಂಕರ್ ಎನ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಹಕಾರಿ ಅಭಿವೃದ್ಧಿ ಅಧಿಕಾರಿ ಪ್ರತಿಮಾ ನೋಡೆಲ್ ಅಧಿಕಾರಿಯಾಗಿ ಸಭೆಯನ್ನು ಮುನ್ನಡೆಸಿದರು.

ವಿವಿಧ ಇಲಾಖೆಗಳ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು.
ಸರ್ವೇ ಇಲಾಖೆಗಳಲ್ಲಿ ಯಾವುದೇ ಕಡತಗಳ ವೀಲೆ ಆಗುತ್ತಿಲ್ಲ ಈ ಬಗ್ಗೆ ಅಧಿಕಾರಿಗಳು ಗಮನಹರಿಸಿ, ಪ್ಲಾಟಿಂಗ್ ಕೆಲಸವನ್ನು ಚುರುಕುಗೊಳಿಸಿದ ಗ್ರಾಮ ಆಡಳಿತಾಧಿಕಾರಿಗಳಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು. ಬೆಳೆ ಸಮೀಕ್ಷೆ ಸಮರ್ಪಕವಾಗಿ ನಡೆಯಲಿ, ಸರ್ವೇ ನಂಬರ್ 30/1 ರಲ್ಲಿ ಪ್ಲಾಟಿಂಗ್ ಪ್ರಕ್ರಿಯೆಗೆ ಅರ್ಜಿ ನೀಡಿ 15 ವರ್ಷ ಕಳೆದರೂ ಅರಣ್ಯ ಇಲಾಖೆಯ ತಕಾರರು ಮುಗಿಯುವುದಿಲ್ಲ ಇದರಿಂದ ಫಲಾನುಭವಿಗಳಿಗೆ ಸಂಕಷ್ಟ ಅನುಭವಿಸುತ್ತಿದ್ದಾರೆ, ಅರಣ್ಯ ಇಲಾಖೆ ಪ್ಲಾಟಿಂಗ್ ಪ್ರಕ್ರಿಯೆಗೆ ನ್ಯಾಯ ಓದಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಕಂದಾಯ ಮತ್ತು ಅರಣ್ಯ ಇಲಾಖೆಯ ಜಂಟಿ ಸರ್ವೇ ನಡೆಯಬೇಕು, ಅರಣ್ಯ ಇಲಾಖೆಯ ಮೇಲಾಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.
ಗ್ರಾಮಸ್ಥರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜಶೇಖರ್ ರೈ ಸ್ವಾಗತಿಸಿ ವರದಿ ವಾಚಿಸಿದರು. ಕಾರ್ಯದರ್ಶಿ ನಾರಾಯಣ, ಸಿಬ್ಬಂದಿಗಳು ಸಹಕರಿಸಿದರು.











