29.3 C
ಪುತ್ತೂರು, ಬೆಳ್ತಂಗಡಿ
October 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಲೈಫ್‌ಸ್ಟೈಲ್‌ವರದಿ

ಬೆಳ್ತಂಗಡಿ ಸೋಜಾ ಎಲೆಕ್ಟ್ರಾನಿಕ್ಸ್- ಫರ್ನಿಚರ್ಸ್‌ನಲ್ಲಿ ಹಬ್ಬದ ಪ್ರಯುಕ್ತ ವಿಶೇಷ ದರಕಡಿತ ಮಾರಾಟ: ಸೆ.3 ರಿಂದ 30ರವರೆಗೆ ಗೃಹೋಪಯೋಗಿ ವಸ್ತುಗಳ ಖರೀದಿಗೆ ಗ್ರಾಹಕರಿಗೆ ಭರ್ಜರಿ ಅವಕಾಶ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಗ್ರಾಹಕರ ವಿಶ್ವಾಸವನ್ನು ಗಳಿಸಿಕೊಂಡು ಕಳೆದ 31 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಬೆಳ್ತಂಗಡಿಯ ಸೋಜಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ಸಂಸ್ಥೆ ಇದೀಗ ಹಬ್ಬಗಳ ಪ್ರಯುಕ್ತ ಗ್ರಾಹಕರಿಗಾಗಿ ವಿಶೇಷ ದರ ಕಡಿತ ಮಾರಾಟವನ್ನು ಆಯೋಜಿಸಿದೆ ಎಂದು ಸಂಸ್ಥೆಯ ಮಾಲಕ ಅಲ್ಫೋನ್ಸ್ ಫ್ರಾಂಕೋ ತಿಳಿಸಿದ್ದಾರೆ.

ಸೆ.3ರಿಂದ ಸೆ.30ರವರೆಗೆ ನಡೆಯಲಿರುವ ವಿಶೇಷ ಮಾರಾಟದಲ್ಲಿ ವಿವಿಧ ಕಂಪನಿಗಳ ಎಲೆಕ್ಟ್ರಾನಿಕ್ಸ್, ಗೃಹೋಪಯೋಗಿ ವಸ್ತುಗಳು ಹಾಗೂ ಫರ್ನಿಚರ್‌ಗಳಿಗೆ ವಿಶೇಷ ದರದಲ್ಲಿ ಖರೀದಿ ಅವಕಾಶ ಕಲ್ಪಿಸಲಾಗಿದೆ. ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಗುಣಮಟ್ಟದ ಉತ್ಪನ್ನಗಳನ್ನು ಸ್ಪರ್ಧಾತ್ಮಕ ದರದಲ್ಲಿ ಒದಗಿಸುವುದರ ಜೊತೆಗೆ, ಉತ್ತಮ ಸೇವೆಗೆ ಸಂಸ್ಥೆ ಆದ್ಯತೆ ನೀಡುತ್ತಿದೆ ಎಂದವರು ತಿಳಿಸಿದರು‌.

ಟಿವಿ, ಫ್ರಿಜ್, ವಾಷಿಂಗ್ ಮೆಷಿನ್, ಏರ್ ಕಂಡೀಷನರ್, ಫ್ಯಾನ್, ಮಿಕ್ಸರ್ ಗ್ರೈಂಡರ್, ಕುಕ್ಕರ್, ಅಡುಗೆ ಪಾತ್ರೆಗಳು, ಬೆಡ್, ಕಚೇರಿ ಕುರ್ಚಿ, ಆಲ್ಮೇರಾ, ಸೇಫ್ ಸೇರಿದಂತೆ ಹಲವು ಉತ್ಪನ್ನಗಳು ನಮ್ಮ ಮಳಿಗೆಯಲ್ಲಿ ಲಭ್ಯವಿದೆ ಎಂದರು.

ಹಲವು ಪ್ರಮುಖ ಬ್ರ್ಯಾಂಡ್‌ಗಳ ಉತ್ಪನ್ನಗಳನ್ನು ಗ್ರಾಹಕರು ಆಯ್ಕೆ ಮಾಡಿಕೊಳ್ಳಬಹುದಾಗಿದೆ.ವಿಶೇಷ ಮಾರಾಟದ ಸಂದರ್ಭದಲ್ಲಿ ಬಜಾಜ್ ಫಿನ್‌ಸರ್ವ್ ಮೂಲಕ ಶೇ.0 ಡೌನ್ ಪೇಮೆಂಟ್ ಸೌಲಭ್ಯವೂ ಲಭ್ಯವಿದ್ದು, ಸುಲಭ ಕಂತುಗಳಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಲು ಗ್ರಾಹಕರಿಗೆ ಅವಕಾಶವಿದೆ. ಜೊತೆಗೆ ಉಚಿತ ಗೃಹೋಪಯೋಗಿ ವಸ್ತುಗಳ ಡೆಲಿವರಿ, 24×7 ಕಸ್ಟಮರ್ ಸರ್ವಿಸ್ ಹಾಗೂ ಎಕ್ಸ್‌ಚೇಂಜ್ ಆಫರ್‌ಗಳ ಸೌಲಭ್ಯವೂ ಗ್ರಾಹಕರಿಗೆ ಲಭ್ಯವಿದೆ ಎಂದರು.

31 ವರ್ಷಗಳ ವಿಶ್ವಾಸದ ಹೆಜ್ಜೆ ಗುರುತು:
ಮೂರು ದಶಕಗಳಿಗೂ ಹೆಚ್ಚು ಕಾಲ ಬೆಳ್ತಂಗಡಿ ಪರಿಸರದ ಗ್ರಾಹಕರ ಅಗತ್ಯಗಳಿಗೆ ಸ್ಪಂದಿಸುತ್ತಾ ಬಂದಿರುವ ಸೋಜಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ಗುಣಮಟ್ಟ–ವಿಶ್ವಾಸ–ಉತ್ತಮ ಸೇವೆ ಎಂಬ ಧ್ಯೇಯದೊಂದಿಗೆ ತನ್ನ ಸೇವೆಯನ್ನು ಮುಂದುವರಿಸುತ್ತಿದೆ. 31ನೇ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಆಯೋಜಿಸಿರುವ ಈ ವಿಶೇಷ ಮಾರಾಟವು ಗ್ರಾಹಕರಿಗೆ ಹಬ್ಬದ ಖರೀದಿಯನ್ನು ಮತ್ತಷ್ಟು ಸಂತಸದಾಯಕವಾಗಿಸುವ ನಿರೀಕ್ಷೆಯಿದೆ.

ಗ್ರಾಹಕರು ವಿಶೇಷ ದರ ಕಡಿತ ಮಾರಾಟದ ಪ್ರಯೋಜನ ಪಡೆದುಕೊಳ್ಳಿ:
ಕಳೆದ 31 ವರ್ಷಗಳಿಂದ ನಮ್ಮ ಸಂಸ್ಥೆಯ ಮೇಲೆ ಬೆಳ್ತಂಗಡಿ ಹಾಗೂ ಸುತ್ತಮುತ್ತಲಿನ ಗ್ರಾಹಕರು ಇಟ್ಟಿರುವ ವಿಶ್ವಾಸವೇ ನಮ್ಮ ದೊಡ್ಡ ಶಕ್ತಿ. ಗ್ರಾಹಕರಿಗೆ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ನ್ಯಾಯಯುತ ದರದಲ್ಲಿ ನೀಡುವುದರ ಜೊತೆಗೆ, ಖರೀದಿಯ ನಂತರವೂ ಉತ್ತಮ ಸೇವೆ ನೀಡುವುದು ನಮ್ಮ ಬದ್ಧತೆ.
ಹಬ್ಬಗಳ ಪ್ರಯುಕ್ತ ವಿಶೇಷ ದರ ಕಡಿತ ಮಾರಾಟವನ್ನು ಆಯೋಜಿಸಿದ್ದು, ವಿವಿಧ ಅಗತ್ಯ ವಸ್ತುಗಳನ್ನು ಒಂದೇ ಸೂರಿನಡಿ ಖರೀದಿಸುವ ಅವಕಾಶ ಗ್ರಾಹಕರಿಗೆ ಸಿಗಲಿದೆ. ಕಳೆದ 31 ವರ್ಷಗಳ ಪ್ರೀತಿ, ವಿಶ್ವಾಸ ಮುಂದೆಯೂ ಹೀಗೆಯೇ ಇರಲಿ ಎಂಬುದು ನಮ್ಮ ಆಶಯವಾಗಿದೆ ಎಂದು ಸಂಸ್ಥೆಯ ಮಾಲಕರಾದ ಅಲ್ಪೋನ್ಸ್ ಫ್ರಾಂಕೋ ತಿಳಿಸಿದರು.

Related posts

ಉಜಿರೆ: ಹೊಳೆಯಂತಾದ ರಾಷ್ಟ್ರೀಯ ಹೆದ್ದಾರಿ

Suddi Udaya

ಸುಲ್ಕೇರಿ ಮೊಗ್ರು ಮಲೆಕುಡಿಯ ಆದಿವಾಸಿ ಕುಟುಂಬಗಳಿಗೆ ಅರಣ್ಯ ಇಲಾಖೆಯಿಂದ ವಿದ್ಯುತ್ ಭಾಗ್ಯಕ್ಕೆ ಅನುಮತಿ: ರಕ್ಷಿತ್ ಶಿವರಾಂ ರವರಿಗೆ ಅಭಿನಂದನೆ ಸಲ್ಲಿಕೆ

Suddi Udaya

ಸೌಜನ್ಯ ಪ್ರಕರಣ: ರಾಜ್ಯ ಸರಕಾರ ರಚಿಸಿದ ಎಸ್.ಐ.ಟಿ. ಬಗ್ಗೆ ಕುಸುಮಾವತಿ ಅಸಮಾಧಾನ

Suddi Udaya

ಜ.30: ಬೆಳ್ತಂಗಡಿ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya

ಕನ್ಯಾಡಿII ಸ.ಉ.ಹಿ.ಪ್ರಾ. ಶಾಲೆಗೆ ಪೆಟ್ರೋನೆಟ್ ಎಂ.ಹೆಚ್.ಬಿ ಲಿಮಿಟೆಡ್ ಕಂಪನಿಯಿಂದ ಕಂಪ್ಯೂಟರ್ ಮತ್ತು ಕಂಪ್ಯೂಟರ್ ಟೇಬಲ್ ಕೊಡುಗೆ

Suddi Udaya

ಜ.16: ಬೆಳ್ತಂಗಡಿ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya
error: Content is protected !!