26.2 C
ಪುತ್ತೂರು, ಬೆಳ್ತಂಗಡಿ
October 28, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಧಾರ್ಮಿಕ

ದ.ಕ.ಜಿಲ್ಲಾ ಗೊಲ್ಲ‌ ಸಮಾಜ ಸೇವಾ ಸಂಘ‌ ಬೆಳ್ತಂಗಡಿ ವಲಯ : ವಾರ್ಷಿಕ ಮಹಾಸಭೆ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಗೊಲ್ಲ (ಯಾದವ) ಸಮಾಜ ಸೇವಾ ಸಂಘ, ಮಂಗಳೂರು ಇದರ ಬೆಳ್ತಂಗಡಿ ವಲಯದ ತೃತೀಯ ವರ್ಷದ ವಾರ್ಷಿಕ ಮಹಾಸಭೆ ಕಾಶಿಪಟ್ಟಣ ಶ್ರೀ ಆದಿಶಕ್ತಿ ಅಮ್ಮನವರ ದೇವಸ್ಥಾನದ ಅನ್ನಪೂರ್ಣ ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಬೆಳ್ತಂಗಡಿ ವಲಯದ ಅಧ್ಯಕ್ಷ ಎಚ್. ರತ್ನಾಕರ್ ರಾವ್ ಮಾತನಾಡಿ, ಸಮಾಜ ಬಾಂಧವರು ಸಂಘಕ್ಕೆ ಹೆಚ್ಚಿನ ಸಹಕಾರ ನೀಡಿದಲ್ಲಿ ಇನ್ನಷ್ಟು ಉತ್ತಮ ರೀತಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯವಾಗುತ್ತದೆ. ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಸದಸ್ಯರಾಗಿ, ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಗೊಲ್ಲ (ಯಾದವ) ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಯು.ಎನ್. ಪ್ರಮೋದ್ ಕುಮಾರ್ ರಾವ್ ಮಾತನಾಡಿ, ಯಾದವ ಸಮಾಜದ ಅಭಿವೃದ್ಧಿಗಾಗಿ ಸರ್ಕಾರದಿಂದ ಅನೇಕ ಯೋಜನೆಗಳು ಲಭ್ಯವಿವೆ. ಸಮಾಜದ ಬಾಂಧವರು ಈ ಯೋಜನೆಗಳ ಬಗ್ಗೆ ಮಾಹಿತಿ ಪಡೆದು, ಅವುಗಳ ಸದುಪಯೋಗ ಮಾಡಿಕೊಳ್ಳಬೇಕು. ಆ ಮೂಲಕ ಸಮಾಜದ ಪ್ರಗತಿಗೆ ಕೊಡುಗೆ ನೀಡುವುದರೊಂದಿಗೆ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಗೊಲ್ಲ (ಯಾದವ) ಸಮಾಜ ಸೇವಾ ಸಂಘದ ಅಧ್ಯಕ್ಷ ಟಿ.ಆರ್. ಕುಮಾರಸ್ವಾಮಿ ಮಾತನಾಡಿ, ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ಪಠ್ಯಪರಿಕರಗಳ ವಿತರಣೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಸಂಘದ ನೆರವು ಪಡೆದು ಶಿಕ್ಷಣ ಮುಂದುವರಿಸಿದ ಹಲವು ವಿದ್ಯಾರ್ಥಿಗಳು ಇಂದು ಸಮಾಜದ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಶ್ರೀ ಆದಿಶಕ್ತಿ ಅಮ್ಮನವರ ದೇವಸ್ಥಾನದ ಆಡಳಿತ ಮೊಕ್ತೇಸರ ವೆಂಕಟ್ರಮಣ ಗೊಲ್ಲ ಹಾಗೂ ಗೊಲ್ಲ (ಯಾದವ) ಸಮಾಜ ಸೇವಾ ಸಂಘದ ಬೆಳ್ತಂಗಡಿ ವಲಯದ ಗೌರವಾಧ್ಯಕ್ಷ ರಾಜೇಶ್ ರಾವ್ ಅಳದಂಗಡಿ ಉಪಸ್ಥಿತರಿದ್ದರು. ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಮಾನಿಷಾ ಕಾಶಿಪಟ್ಟಣ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಚೈತನ್ಯಾ ರಾವ್ ಶಿರ್ತಾಡಿ ಮಕ್ಕಿ ಅವರನ್ನು ಸನ್ಮಾನಿಸಲಾಯಿತು.

ಬಳಿಕ ಸಂಘದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಸಂಘದ ಸಲಹೆಗಾರರಾದ ಶರ್ಮಿಳಾ ಸ್ವಾಗತಿಸಿದರು. ಮುಖ್ಯ ಸಲಹೆಗಾರರಾದ ವಿದ್ಯಾಲತಾ ಎಂ.ಕೆ. ನಿರೂಪಿಸಿದರು. ಕಾರ್ಯದರ್ಶಿ ರಾಜೇಶ್ ಕೆ. ವರದಿ ಮಂಡಿಸಿದರು. ಸಂಘದ ಸಲಹೆಗಾರರಾದ ಸುಭಾಷ್ಚಂದ್ರ ರಾವ್ ವಂದಿಸಿದರು.

Related posts

ಕಡಿರುದ್ಯಾವರ ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ಎಲ್ ಸಿ ಆರ್ ಇಂಡಿಯನ್ ಪದವಿ ವಿಭಾಗದಲ್ಲಿ ವಾಣಿಜ್ಯ ಚಟುವಟಿಕೆ

Suddi Udaya

ಬಳಂಜ: ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಹರೀಶ್ ವೈ ಆಯ್ಕೆ

Suddi Udaya

ಇಳಂತಿಲ ವ್ಯಾಪ್ತಿಯಲ್ಲಿ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದಡಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ನೈನಾಡು :ಪಿಂಟೊ ಬೇಕರಿ ಸಂಸ್ಥೆಯ ಮಾಲಕ ಸಿಲ್ವೆಸ್ಟರ್ ಪಿಂಟೊ ನಿಧನ

Suddi Udaya

ಬಂದಾರು ಸ.ಹಿ. ಪ್ರಾ. ಶಾಲೆಯಲ್ಲಿ ಬೂತ್ ಸಂಖ್ಯೆ 217ರಲ್ಲಿ ತ್ರಾಂತಿಕ ದೋಷದಿಂದ ಮತದಾನ ಸ್ಥಗಿತ

Suddi Udaya
error: Content is protected !!