September 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಪ್ರಗತಿ ಮಹಿಳಾ ಮಂಡಲ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ಆಟಿಕೂಟ ಆಚರಣೆ

ಉಜಿರೆ : ಪ್ರಗತಿ ಮಹಿಳಾ ಮಂಡಲ, ಉಜಿರೆ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಇತ್ತೀಚೆಗೆ ನಡೆಯಿತು.
ಅಧ್ಯಕ್ಷರಾಗಿ ಸುಜಾತ ಭಟ್, ಕಾರ್ಯದರ್ಶಿಯಾಗಿ ಶೋಭಾ ರಘುಪತಿ ಕಾಮತ್, ಕೋಶಾಧಿಕಾರಿಯಾಗಿ ನಳಿನಿ ಇಚ್ಚಿಲ ಆಯ್ಕೆಯಾಗಿರುತ್ತಾರೆ.

ಗೌರವಾಧ್ಯಕ್ಷರಾಗಿ ಸರಸ್ವತಿ. ಎನ್ ರಾಜ್ ಹಾಗೂ ಜಯಶ್ರೀ ಬಿಎಮ್ ಗೌಡ, ಉಪಾಧ್ಯಕ್ಷರಾಗಿ ಕಾಂತಿ ಶ್ರೀಧರ್, ಜೊತೆ ಕಾರ್ಯದರ್ಶಿಯಾಗಿ ರೀನಾ ಎಸ್ ಗೌಡ , ಗೌರವ ಸಲಹೆಗಾರರಾಗಿ ಕಾಂತಿ ಶೇಷಗಿರಿ ಶೆಣೈ, ಜ್ಯೋತಿ ಪ್ರತಾಪ್ ಸಿಂಹ ನಾಯಕ್, ಸದಸ್ಯರಾಗಿ ಗಾಯತ್ರಿ ಶ್ರೀಧರ್, ಜಯಶ್ರೀ ಪ್ರಕಾಶ್(ಅಪ್ರಮೇಯ ), ಧರ್ಮಾವತಿ, ಸವಿತಾ ಜಯದೇವ್, ನಂದಿನಿ ಶೆಟ್ಟಿ ಆಯ್ಕೆಯಾಗಿದ್ದಾರೆ.

ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳು ಮತ್ತು ಮಾಜಿ ಪದಾಧಿಕಾರಿಗಳ ಜಂಟಿ ನೇತೃತ್ವದಲ್ಲಿ ಆಟಿ ಕೂಟವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಚೆನ್ನಮಣೆ ಆಟ ಆಡುವ ಮೂಲಕ ಆಟಿ ಕೂಟದ ಉದ್ಘಾಟನೆಯನ್ನು ನೆರವೇರಿಸಲಾಯಿತು.

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ಸುಜಾತ ಭಟ್ ಆಟಿಯ ವಿವರಣೆ, ಶೋಭಾ ಆರ್ ಕಾಮತ್ ಆಟಿಯ ವಿಶೇಷ ತಿಂಡಿ ತಿನಿಸುಗಳನ್ನು ತಂದವರ ಹೆಸರುಗಳನ್ನು ಓದಿದರು ಹಾಗೂ ಪ್ರೋತ್ಸಾಹಕರ ಬಹುಮಾನವನ್ನು ಎಲ್ಲರಿಗೂ ನೀಡಲಾಯಿತು.

ಸುನಿತಾ ಶೆಟ್ಟಿ ಪ್ರಾರ್ಥಿಸಿ, ಜಯಶ್ರೀ ಪ್ರಕಾಶ್ ಸ್ವಾಗತಿಸಿ, ಗಾಯತ್ರಿ ಶ್ರೀಧರ್ ನಿರೂಪಿಸಿದರು. ನಳಿನಿ ಇಚ್ಚಿಲ ಧನ್ಯವಾದವಿತ್ತರು.

Related posts

ಉಜಿರೆ: ಅನಾರೋಗ್ಯದಿಂದ ಬಳಲುತ್ತಿರುವ ರಕ್ಷಿತ್ ರಾಜ್ ರವರ ಚಿಕಿತ್ಸೆಗೆ ಕರಿಗಂಧ ಸೇವಾ ಟ್ರಸ್ಟ್ ನಿಂದ ಧನಸಹಾಯ

Suddi Udaya

ಮಾ.3 ರಿಂದ ಮಾ.11ರವರೆಗೆ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂಭ್ರಮ: ಮಾ.4ರಂದು ಡಾ. ಹೆಗ್ಗಡೆಯವರಿಂದ ನೂತನ ವಿಜಯಗೋಪುರ ಲೋಕಾರ್ಪಣೆ,

Suddi Udaya

ಎಕ್ಸೆಲ್ ಕಾಲೇಜಿನಿಂದ ಗುರುವಾಯನಕೆರೆ ಶಾಲೆಗೆ ಪೀಠೋಪಕರಣಗಳ ಹಸ್ತಾಂತರ, ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ರವರಿಗೆ ಶಾಲೆಯ ವತಿಯಿಂದ ಸನ್ಮಾನ

Suddi Udaya

ತಣ್ಣೀರುಪoತ ವಲಯದ ಕರಾಯ ಕಾರ್ಯಕ್ಷೇತ್ರದಲ್ಲಿ ವಿಕ್ರಂ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ವಾರ್ಷಿಕೋತ್ಸವ ಕಾರ್ಯಕ್ರಮ

Suddi Udaya

ಶ್ರೀ ನಾಗ ರಕ್ತೇಶ್ವರಿ ಹಾಗೂ ಪರಿವಾರ ದೈವಗಳ ಸಾನಿಧ್ಯ ಕ್ಷೇತ್ರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ದೇಣಿಗೆ ಹಸ್ತಂತಾರ

Suddi Udaya

ಸಿಯೋನ್ ಆಶ್ರಮ ಟ್ರಸ್ಟ್ ಗೆ “ಅತ್ಯುತ್ತಮ ಎನ್‌.ಜಿ.ಒ” ಪ್ರಶಸ್ತಿ

Suddi Udaya
error: Content is protected !!