September 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಯೋಜನಾ ಪ್ರಾಧಿಕಾರ ರಚನೆಗೆ ನಗರಾಭಿವೃದ್ಧಿ ಪ್ರಾಧಿಕಾರಗಳ ಆಯುಕ್ತ ಶಿವಾನಂದ ಕಾಪಶಿ ಹಾಗೂ ನಗರ–ಗ್ರಾಮಾಂತರ ಯೋಜನಾ ಆಯುಕ್ತರಿಗೆ ರಕ್ಷಿತ್ ಶಿವರಾಂ ಮನವಿ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಜನರಿಗೆ ಜಮೀನಿನ ತಾಂತ್ರಿಕ ಅನುಮೋದನೆ ಪಡೆಯಲು ಎದುರಾಗುತ್ತಿರುವ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಬೆಳ್ತಂಗಡಿ ಯೋಜನಾ ಪ್ರಾಧಿಕಾರವನ್ನು ರಚಿಸುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ನಗರಾಭಿವೃದ್ಧಿ ಪ್ರಾಧಿಕಾರಗಳ ಆಯುಕ್ತರಾದ ಶಿವಾನಂದ ಕಾಪಶಿ ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂದು ಎಕರೆ ಒಳಗಿನ ಜಮೀನುಗಳಿಗೆ ಅನುಮೋದನೆ ನೀಡುವ ಪ್ರಕರಣಗಳಲ್ಲಿ ತಾಂತ್ರಿಕ ಅನುಮೋದನೆ ನೀಡಲು ಈ ಹಿಂದೆ ಗ್ರಾಮ ಪಂಚಾಯಿತಿಗಳಲ್ಲಿಯೇ ಅವಕಾಶವಿತ್ತು. ಆದರೆ 2024ರ ಏಪ್ರಿಲ್ 1ರಿಂದ ಈ ಅವಕಾಶವನ್ನು ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರ ಕಚೇರಿ, ಮಂಗಳೂರು ವ್ಯಾಪ್ತಿಗೆ ವರ್ಗಾಯಿಸಲಾಗಿತ್ತು.

ಇದರಿಂದ ಬೆಳ್ತಂಗಡಿ ತಾಲೂಕಿನ ಜನರು ತಮ್ಮ ಜಮೀನಿನ ತಾಂತ್ರಿಕ ಅನುಮೋದನೆಗಾಗಿ ಸುಮಾರು 150 ಕಿ.ಮೀ. ದೂರದ ಮಂಗಳೂರಿಗೆ ತೆರಳಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಈ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿ ಮೂಡುಬಿದಿರೆ ಯೋಜನಾ ಪ್ರಾಧಿಕಾರದ ವ್ಯಾಪ್ತಿಗೆ ಅವಕಾಶ ಕಲ್ಪಿಸಲಾಗಿದೆ.

ಮೂಡುಬಿದಿರೆ ಯೋಜನಾ ಪ್ರಾಧಿಕಾರದ ಅಧಿಕಾರಿಗಳು ಅರ್ಜಿಗಳ ವಿಲೇವಾರಿಗಾಗಿ ವಾರದಲ್ಲಿ ಎರಡು ದಿನ ಬೆಳ್ತಂಗಡಿಗೆ ಆಗಮಿಸುತ್ತಿದ್ದರೂ, ತಾಲೂಕಿನ ಜನರು ತಮ್ಮ ಜಮೀನಿನ ತಾಂತ್ರಿಕ ಅನುಮೋದನೆ, 9/11 ಸೇರಿದಂತೆ ವಿವಿಧ ಪ್ರಕ್ರಿಯೆಗಳಿಗಾಗಿ ಸುಮಾರು 60 ಕಿ.ಮೀ. ದೂರದಲ್ಲಿರುವ ಮೂಡುಬಿದಿರೆ ಕಚೇರಿಗೆ ತೆರಳಬೇಕಾದ ಪರಿಸ್ಥಿತಿ ಮುಂದುವರಿದಿದೆ.

ಬೆಳ್ತಂಗಡಿ ತಾಲೂಕಿನಲ್ಲಿ 48 ಗ್ರಾಮ ಪಂಚಾಯಿತಿಗಳಿದ್ದು ತಾಲೂಕಿನ ಜನರು ತಮ್ಮ ಜಮೀನಿನ ಕೆಲಸಗಳಿಗಾಗಿ ದೂರದ ಕಚೇರಿಗಳಿಗೆ ಪದೇಪದೇ ಅಲೆದಾಡಬೇಕಾಗಿರುವುದರಿಂದ ಸಮಯ, ಹಣ ಹಾಗೂ ಶ್ರಮ ವ್ಯರ್ಥವಾಗುತ್ತಿದೆ. ವಿಶೇಷವಾಗಿ ಗ್ರಾಮೀಣ ಭಾಗದ ಜನರಿಗೆ ಇದರಿಂದ ಹೆಚ್ಚಿನ ತೊಂದರೆಯಾಗುತ್ತಿದೆ.

ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಬೆಳ್ತಂಗಡಿ ತಾಲೂಕಿನ ಕೇಂದ್ರ ಭಾಗದಲ್ಲಿಯೇ “ಬೆಳ್ತಂಗಡಿ ಯೋಜನಾ ಪ್ರಾಧಿಕಾರ”ವನ್ನು ರಚಿಸಿ ತಾಲೂಕಿನ 48 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಜನರಿಗೆ ಸ್ಥಳೀಯವಾಗಿಯೇ ತಾಂತ್ರಿಕ ಅನುಮೋದನೆ ಸೇರಿದಂತೆ ಅಗತ್ಯ ಸೇವೆಗಳನ್ನು ಒದಗಿಸುವ ವ್ಯವಸ್ಥೆ ಕಲ್ಪಿಸಬೇಕು ಎಂದು ರಕ್ಷಿತ್ ಶಿವರಾಂ ಅವರು ಆಯುಕ್ತರಾದ ಶಿವಾನಂದ ಕಾಪಶಿಅವರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಬೆಳ್ತಂಗಡಿಯಲ್ಲಿಯೇ ಯೋಜನಾ ಪ್ರಾಧಿಕಾರ ಸ್ಥಾಪನೆಯಾದಲ್ಲಿ ತಾಲೂಕಿನ ಜನರ ಅನಗತ್ಯ ಓಡಾಟ ತಪ್ಪುವುದರ ಜೊತೆಗೆ, ಜಮೀನು ಮತ್ತು ಕಟ್ಟಡ ಸಂಬಂಧಿತ ಅರ್ಜಿಗಳ ವಿಲೇವಾರಿ ತ್ವರಿತವಾಗಿ ನಡೆಯಲು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

Related posts

ವೇಣೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ

Suddi Udaya

ಇಂದಬೆಟ್ಟು: ಕಲ್ಲಾಜೆ ನವಭಾರತ್ ಗೆಳೆಯರ ಬಳಗದ ಮಹಾಸಭೆ: ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಅ.11: ಶ್ರೀ ಧ.ಮಂ. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್ , ಶ್ರೀ ಕ್ಷೇ.ಧ. ಗ್ರಾ.ಯೋ. ಹೆಚ್.ಡಿ ಕೋಟೆ ಇದರ ಆಶ್ರಯದಲ್ಲಿ ಪಂಚಮುಖಿ ವ್ಯಕ್ತಿತ್ವ ವಿಕಸನ ಯೋಗ ಶಿಬಿರದ ಉದ್ಘಾಟನೆ

Suddi Udaya

ಬೆಳ್ತಂಗಡಿ ಸ.ಪ.ಪೂ. ಕಾಲೇಜಿನಲ್ಲಿ ‘ರಸ್ತೆ ಸುರಕ್ಷತೆ ಮತ್ತು ವೃತ್ತಿ ಮಾರ್ಗದರ್ಶನ’ ಬಗ್ಗೆ ಉಪನ್ಯಾಸ

Suddi Udaya

ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ 56ನೇ ವರ್ಷದ ಪಟ್ಟಾಭಿಷೇಕ ವರ್ಧಂತ್ಯುತ್ಸವ

Suddi Udaya

ಕಲ್ಮಂಜ: ಗರ್ಭಿಣಿ ಮಹಿಳೆ ಹೃದಯಾಘಾತದಿಂದ ನಿಧನ

Suddi Udaya
error: Content is protected !!