September 5, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿವರದಿ

ಮಾದಕವಸ್ತು ಮಾರಾಟ ಯತ್ನ: ನೌಫಲ್ ಬಂಧನ

ಬೆಳ್ತಂಗಡಿ : ಡ್ರಗ್ಸ್ ಮುಕ್ತ ಸಮಾಜಕ್ಕಾಗಿ ಬೆಳ್ತಂಗಡಿ ಪೊಲೀಸರ ಬೇಟೆ ಚುರುಕುಬೆಳ್ತಂಗಡಿ : ಡ್ರಗ್ಸ್ ಮುಕ್ತ ಸಮಾಜಕ್ಕಾಗಿ ಬೆಳ್ತಂಗಡಿ ಪೊಲೀಸರ ಕಾರ್ಯಾಚರಣೆ ಕಳೆದ ಕೆಲ ತಿಂಗಳಿಂದ ಮುಂದುವರಿದ್ದು.ಇದೀಗ ಮತ್ತೆ ಬೆಳ್ತಂಗಡಿ ಪೊಲೀಸರಿಂದ ಮಾದಕವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ಓರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳ್ತಂಗಡಿ ಪೊಲೀಸರು ಠಾಣೆಯ ಸಬ್ ಇನ್ಸ್‌ಪೆಕ್ಟರ್ ಆನಂದ್.ಎಂ ಮತ್ತು ತಂಡ ಸೆ.4 ರಂದು ರಾತ್ರಿ 9 ಗಂಟೆಗೆ ಇಲಾಖಾ ಜೀಪಿ‌ನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಬೆಳ್ತಂಗಡಿ ನಗರದ ರೆಂಕೆದಗುತ್ತು ಎಂಬಲ್ಲಿ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಓರ್ವ ಯುವಕ ಪ್ಲಾಸ್ಟಿಕ್ ಚೀಲವೊಂದನ್ನು ಹಿಡಿದು ಬುಲ್ಲೆಟ್ ಬೈಕ್ ಬಳಿ ನಿಂತುಕೊಂಡಿದ್ದಾಗ ಈ ಬಗ್ಗೆ ಆತನನ್ನು ನಿಲ್ಲಿಸಿ ವಿಚಾರಿಸಿದಾಗ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಆಲಂದಿಲ ನಿವಾಸಿ ಅಬ್ದುಲ್ ಖಾದರ್ ಮಗ ನೌಫಲ್(31) ಎಂಬುವುದಾಗಿ ತಿಳಿಸಿದ್ದು. ಆತನ ಚೀಲವನ್ನು ಪರಿಶೀಲನೆ ನಡೆಸಿದಾಗ ಮಾರಾಟ ಮಾಡಿ ಉಳಿದ ಸುಮಾರು 14 ಗ್ರಾಂ ಗಾಂಜಾ ಪತ್ತೆಯಾಗಿದೆ‌. ಈ ಗಾಂಜಾವನ್ನು ಮಡದ್ಕದ ರಫೀಕ್ ಎಂಬಾತನಿಂದ ಖರೀದಿಸಿ ತಂದು ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಮಾರಾಟ ಮಾಡಲು ಬಂದಿರುವುದಾಗಿ ತಿಳಿಸಿದ್ದಾನೆ.

ಆತನ ಚೀಲದಲ್ಲಿದ್ದ ಸುಮಾರು 14 ಗ್ರಾಂ ಗಾಂಜಾ, ಒಂದು KL-57-S-1424 ನಂಬರಿನ ರಾಯಲ್ ಎನ್ ಪೀಲ್ಡ್ ಬೈಕ್, ಬ್ಯಾಟರಿ ಚಾಲಿತ ತೂಕದ ಮಾಪನ ಹಾಗೂ ಆರೋಪಿ ನೌಫಲ್ ನನ್ನು ಬಂಧಿಸಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎರಡನೇ ಬಾರಿ NDPS ಪ್ರಕರಣದಲ್ಲಿ ಸಿಕ್ಕಿರುವ ನೌಫಲ್ ಮತ್ತು ಗಾಂಜಾ ನೀಡಿದ ಹಲವಾರು NDPS ಪ್ರಕರಣದಲ್ಲಿ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿರುವ ಮದಡ್ಕ ನಿವಾಸಿ ರಫೀಕ್ ವಿರುದ್ಧ ಕಲಂ 8(C),20(B)(ii)(A) NDPS ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿನಿ.ಸಿ.ಕೆ ಮತ್ತು ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ‌.ಬಿ.ಎಸ್ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಆನಂದ್.ಎಂ ಮತ್ತು ಸಿಕಂದರ್ ಪಾಷ ನೇತೃತ್ವದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

Related posts

ಮಚ್ಚಿನ ಕೊಡಿಯೇಲು ಎಂಬಲ್ಲಿ ಹೆಜ್ಜೇನು ದಾಳಿ: ಆರು ಮಂದಿಗೆ‌ ಗಾಯ- ಗಂಭೀರ ಗಾಯಗೊಂಡ‌ ಯುವಕ ಪುತ್ತೂರು ಆಸ್ಪತ್ರೆಗೆ ದಾಖಲು

Suddi Udaya

ಎರಡೂ ಕಾಲುಗಳ ಮೂಳೆ ಮುರಿತಕ್ಕೊಳಗಾಗಿರುವ ಕನ್ಯಾಡಿಯ ವಿಶ್ವನಾಥ ರವರ ಚಿಕಿತ್ಸೆಗೆ ನೆರವಾಗಿ

Suddi Udaya

ಕಾಶಿಪಟ್ಣ: ಮಜಲಡ್ಡ ನಿವಾಸಿ ಮಣ್ಯಪ್ಪ ಪೂಜಾರಿ ನಿಧನ

Suddi Udaya

ಪಲ್ಕೆ ಹೊಡಿಕಾರ್ ರಸ್ತೆಯ ಇಂಟರ್ಲಾಕ್ ಕಾಮಗಾರಿ ಕಳಪೆ ಆರೋಪ: ನಾವೂರು ಗ್ರಾ.ಪಂ.ಗೆ ಎಸ್.ಡಿ.ಪಿ.ಐ ಮನವಿ

Suddi Udaya

ಬೆಳ್ತಂಗಡಿ : ಮುಖ್ಯ ಪುಸ್ತಕ ಬರಹಗಾರರಿಗೆ ಪುಸ್ತಕ ನಿರ್ವಹಣೆ ಮತ್ತು ಜವಾಬ್ದಾರಿಗಳ ಕುರಿತು ತರಬೇತಿ

Suddi Udaya

ಶ್ರೀರಾಮ ಕ್ರೆಡಿಟ್ ಕೋ ಆಪರೇಟ್ ಸೊಸೈಟಿನಲ್ಲಿ ಗ್ರಾಹಕರ ಹಣ ವಂಚನೆ ಪ್ರಕರಣ: ತನಿಖೆಗಾಗಿ ಬ್ಯಾಂಕಿಗೆ ಎಂಟ್ರಿಯಾದ ಸಿಐಡಿ ತಂಡ

Suddi Udaya
error: Content is protected !!