ಪೆರಿಂಜೆ ಬ್ರಹ್ಮಶ್ರೀ ಸತ್ಯ ಸಾರಮನಿ , ಅಲೆರ ಪಂಜುರ್ಲಿ ದೈವಸ್ಥಾನ ಕುರ್ಲೊಟ್ಟು ಮತ್ತು ಕುರ್ಲೊಟ್ಟು ಯುವ ಬಾಂದವರ ಸಹಯೋಗದೊಂದಿಗೆ ಸತ್ಯಸಾರಮನಿ ದೈವಸ್ಥಾನಕ್ಕೆ ಮೇಲ್ಛಾವಣಿ ಶಿಲಾನ್ಯಾಸ ಮತ್ತು ಕೃಷ್ಣ ಜನ್ಮಾಷ್ಟಮಿಯ ಕ್ರೀಡಾಕೂಟ ನಡೆಯಿತು.

ಶಾಸಕ ಹರೀಶ್ ಪೂಂಜರವರು ಶಿಲಾನ್ಯಾಸ ನೆರವೇರಿಸಿ ಮಾತನಾಡಿ ಪೆರಿಂಜೆ ದೈವಸ್ಥಾನಗಳು ನಮ್ಮ ಪೂರ್ವಜರ ಪರಂಪರೆ ಮತ್ತು ಶ್ರದ್ಧಾ ಕೇಂದ್ರ, ಸರ್ವರನ್ನು ಒಗ್ಗೂಡಿಸುವ ಮತ್ತು ಹಾರೈಸುವ ಕೇಂದ್ರಗಳು ಆ ಕಾರಣಕ್ಕಾಗಿ ದೈವಸ್ಥಾನ ನಿರ್ಮಾಣಕ್ಕೆ ರೂ. 18 ಲಕ್ಷ ಮತ್ತು ಮೇಲ್ಛಾವಣಿ ನಿರ್ಮಾಣಕ್ಕೆ ರೂ.10 ಲಕ್ಷ ಅನುದಾನ ಒದಗಿಸಿದ್ದೇನೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಉಪನ್ಯಾಸಕಿ ಸುಜಾತಾ ಶೆಟ್ಟಿ ತುಳು ಭಾಷೆ ಸಂಸ್ಕೃತಿಯ ವಿಚಾರ ಮತ್ತು ತುಳುನಾಡಿನ ದೈವಗಳ ಶಕ್ತಿ, ಭಕ್ತಿಯ ಬಗ್ಗೆ ತಿಳಿಸಿದರು.

ವೇದಿಕೆಯಲ್ಲಿ ಜಯಂತ್ ಕೋಟ್ಯಾನ್, ಲಕ್ಷ್ಮಣ ಜಿ. ಎಸ್, ಸುಧಾಕರ್ ನೂಯಿ, ಲೀಲೇಶ್ ಕೋಟ್ಯಾನ್, ಪಂಚಾಯತ್ ಮಾಜಿ ಅಧ್ಯಕ್ಷ ಕರುಣಾಕರ, ರಮೇಶ್, ಸುಶಾನ್ ಬೊಟ್ಟ, ರಮೇಶ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.
ಕು. ನಿರೀಕ್ಷ ಮತ್ತು ಬಳಗದವರ ಪ್ರಾರ್ಥನೆಯೊಂದಿಗೆ, ನಿರೂಪಕ ಪ್ರವೀಣ್ ಸೂರ್ಯ ಸ್ವಾಗತಿಸಿ, ಶಿಕ್ಷಕ ಚಂದ್ರಪ್ಪ ನಿರೂಪಿಸಿದರು.












