September 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಕ್ಯಪದವು ಎಲ್.ಸಿ.ಆರ್ ವಿದ್ಯಾಸಂಸ್ಥೆ ಪದವಿ ವಿಭಾಗದಲ್ಲಿ “ಮೂಲ ಸೌಕರ್ಯ ಹೂಡಿಕೆ ಟ್ರಸ್ಟ್” ವಿಷಯದ ಕುರಿತು ಕಾರ್ಯಾಗಾರ

ಕಕ್ಯಪದವು: ಪಾದೆಗುತ್ತು ಲಿಂಗಪ್ಪ ಮಾಸ್ತರ್ ಎಜುಕೇಷನಲ್ ಟ್ರಸ್ಟ್ ನಿಂದ ನಡೆಸಲ್ಪಡುವ ಎಲ್.ಸಿ.ಆರ್ ವಿದ್ಯಾಸಂಸ್ಥೆಯ ಪದವಿ ವಿಭಾಗದಲ್ಲಿ ಸೆ.7 ರಂದು ವಾಣಿಜ್ಯ ಸಂಘದ ವತಿಯಿಂದ ಪದವಿ ವಿಭಾಗದ ಬಿ.ಕಾಂ. ವಿದ್ಯಾರ್ಥಿಗಳಿಗೆ ” ಮೂಲ ಸೌಕರ್ಯ ಹೂಡಿಕೆ ಟ್ರಸ್ಟ್” ವಿಷಯದ ಕುರಿತು ಜಾಗೃತಿ ಹಾಗೂ ಶೈಕ್ಷಣಿಕ ಅಧಿವೇಶನವನ್ನು ಆಯೋಜಿಸಲಾಯಿತು.

 ಸಂಸ್ಥೆಯ  ಸಂಯೋಜಕರಾದ ಯಶವಂತ್ ಜಿ. ನಾಯಕ್  ಕಾರ್ಯಗಾರವನ್ನು ನಡೆಸಿಕೊಟ್ಟರು.
“ಮೂಲಸೌಕರ್ಯ ಹೂಡಿಕೆ ಟ್ರಸ್ಟ್ – InvITs” ಎಂಬ ವಿಷಯದ ಕುರಿತು ವಿಶೇಷ ಜಾಗೃತಿ ಹಾಗೂ ಶೈಕ್ಷಣಿಕ ಅಧಿವೇಶನವನ್ನು ಆಯೋಜಿಸಿ,  ವಿದ್ಯಾರ್ಥಿಗಳಿಗೆ ಆಧುನಿಕ ಹೂಡಿಕೆ ವಿಧಾನಗಳು ಹಾಗೂ ಮೂಲಸೌಕರ್ಯ ಕ್ಷೇತ್ರದಲ್ಲಿನ ಹೂಡಿಕೆಯ ಅವಕಾಶಗಳ ಕುರಿತು ಅರಿವು ಮೂಡಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿರಿಸಿ,  ಮೂಲಸೌಕರ್ಯ ಹೂಡಿಕೆ ಟ್ರಸ್ಟ್‌ಗಳ ಕುರಿತು ವಿದ್ಯಾರ್ಥಿಗಳಿಗೆ ಸರಳವಾಗಿ ಹಾಗೂ ಪ್ರಾಯೋಗಿಕವಾಗಿ ವಿವರಿಸಿದರು.

ಅದೇ ರೀತಿ InvITs‌ನ ರಚನೆ, ಕಾರ್ಯವಿಧಾನ, ಪ್ರಯೋಜನಗಳು, ಹೂಡಿಕೆಯ ಅವಕಾಶಗಳು ಮತ್ತು ಸಂಭವನೀಯ ಅಪಾಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ವಿವರವಾದ ಮಾಹಿತಿಯನ್ನು ನೀಡಿದರು.
ಈ ಅಧಿವೇಶನವು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದ ಜ್ಞಾನವನ್ನು ನೈಜ ಹಣಕಾಸು ಕ್ಷೇತ್ರದೊಂದಿಗೆ ಸಂಪರ್ಕಿಸಲು ಸಹಕಾರಿಯಾಯಿತು.
ಕಾರ್ಯಕ್ರಮವು ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಅರ್ಥಪೂರ್ಣವಾಗಿ ಸಂಪನ್ನಗೊಂಡಿತು.

Related posts

ಕೊಕ್ಕಡ ವಿಶ್ವ ಹಿಂದೂ ಪರಿಷತ್ ಭಜರಂಗದಳ ಘಟಕದ ನೂತನ ಪದಾಧಿಕಾರಿಗಳ ರಚನೆ

Suddi Udaya

ವಿಧಾನಸಭೆ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಗೆ ಸದಸ್ಯರಾಗಿ ವಿಧಾನ ಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್ ನಾಮನಿರ್ದೇಶನ

Suddi Udaya

ನಡ: ಪ್ರಗತಿಪರ ಕೃಷಿಕ ಫ್ರಾನ್ಸಿಸ್ ಮೊರಾಸ್ ಹೃದಯಾಘಾತದಿಂದ ನಿಧನ

Suddi Udaya

ಮಹಿಳಾ ಹೆಡ್ ಕಾನ್ ಸ್ಟೇಬಲ್ ಹುದ್ದೆಗೆ ಮುಂಭಡ್ತಿಗೊಂಡ ವೇಣೂರು ಪೊಲೀಸ್ ಠಾಣೆಯ ಜಯಶ್ರೀ

Suddi Udaya

ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ, ಪ್ರಸಿದ್ದ ಉದ್ಯಮಿ ಮೋಹನ್ ಕುಮಾರ್ ಅವರನ್ನು ಭೇಟಿಯಾದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಮೋಹಿತ್

Suddi Udaya

ಜೆಇಇ ಮೈನ್ಸ್ ಫಲಿತಾಂಶ ಪ್ರಕಟ: ಕ್ರಿಯೇಟಿವ್ ಕಾಲೇಜಿನ  ವಿದ್ಯಾರ್ಥಿಗಳ ಅಮೋಘ ಸಾಧನೆ

Suddi Udaya
error: Content is protected !!