25.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸುದ್ದಿಉದಯ ವಾರಪತ್ರಿಕೆಯ ದೀಪಾವಳಿ ವಿಶೇಷಾಂಕ, ಹೇ ಶಾರದೇ, ಕೃಷ್ಣ ವೇಷ ಸ್ಪರ್ಧೆಗಳ ಬಹುಮಾನ ವಿತರಣೆ

ಬೆಳ್ತಂಗಡಿ ತಾಲೂಕಿನ ಜನಪ್ರಿಯ ಸುದ್ದಿ ಉದಯ ವಾರಪತ್ರಿಕೆ 2025ನೇ ಸಾಲಿನಲ್ಲಿ ಆಯೋಜಿಸಿದ್ದ ದೀಪಾವಳಿ ವಿಶೇಷಾಂಕ, ಹೇ ಶಾರದೇ, ಕೃಷ್ಣ ವೇಷ ಸ್ಪರ್ಧೆಗಳ ಬಹುಮಾನ ವಿತರಣಾ ಸಮಾರಂಭವು ನ.22 ರಂದು ಬೆಳ್ತಂಗಡಿ ರಕ್ಷಾ ಆರ್ಕೇಡ್‌ನಲ್ಲಿರುವ ಸುದ್ದಿ ಉದಯ ಕಚೇರಿಯಲ್ಲಿ ನಡೆಯಿತು.

ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ‘ಕನಸಿನ ಮನೆ ಮಾಲಕ, ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಸಂಚಾಲಕ ಕೆ. ಮೋಹನ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಭಾಗದ ಆಗು-ಹೋಗುಗಳನ್ನು ಸಂಗ್ರಹಿಸಿ ವಾರಕ್ಕೊಮ್ಮೆ ಓದುಗರ ಮುಂದೆ ನೀಡುವ ಪ್ರಾಮಾಣಿಕ ಕೆಲಸವನ್ನು ಸುದ್ದಿ ಉದಯ ಪತ್ರಿಕೆ ನಿರಂತರ ಮಾಡುತ್ತಿದೆ. ಸ್ಪರ್ಧಾತ್ಮಕ ಯುಗದಲ್ಲಿ ಪತ್ರಿಕೆಗಳು ನಾನಾ ಸವಾಲುಗಳನ್ನು ಎದುರಿಸಿಕೊಂಡು ಮುನ್ನಡೆಯಬೇಕಾದ ಪರಿಸ್ಥಿತಿ ಇದೆ. ಪತ್ರಿಕೆ ನಡೆಸುವರು ಸ್ವಪ್ರತಿಷ್ಠೆಯಾಗಿ ಪತ್ರಿಕೆಯನ್ನು ಮಾಡಬಾರದು, ಸಮಾಜ ಮತ್ತು ಜನರ ಮಧ್ಯೆ ಕೊಂಡಿಯಾಗಿ ಮಾಧ್ಯಮ ಕಾರ್ಯನಿರ್ವಹಿಸಬೇಕು. ಸುದ್ದಿ ಉದಯ ಪತ್ರಿಕೆ ಉತ್ತಮ ಗುಣಮಟ್ಟದೊಂದಿಗೆ ಹೊರಬರುತ್ತಿದ್ದು, ಇನ್ನಷ್ಟು ಬೆಳೆಯಲಿ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅಥಿತಿಯಾಗಿ ಉಜಿರೆ ಎಸ್‌ಡಿಎಮ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಎಂ.ಜನಾರ್ದನ್ ಅವರು ಮಾತನಾಡಿ ಒಳ್ಳೆಯ ಉದ್ದೇಶವನ್ನಿಟ್ಟುಕೊಂಡು ಸುದ್ದಿಉದಯ ಪತ್ರಿಕೆ ಜನಮಾನಸದಲ್ಲಿ ಬೆಳೆಯುತ್ತಿದೆ. ಉತ್ತಮ ಗುಣಮಟ್ಟದ ವಾರ ಪತ್ರಿಕೆಯಾಗಿದ್ದು ಮತ್ತಷ್ಟು ಬೆಳೆಯಲಿ. ಪತ್ರಿಕೆ ವರದಿಗಾರಿಕೆಗೆ ಸಿಮೀತವಾಗದೆ ಓದುಗರ ಪ್ರತಿಭೆಯ ವಿಕಸನಕ್ಕೆ ವೇದಿಕೆ ಕಲ್ಪಿಸಿ ಕೊಟ್ಟಿರುವುದು ಅಭಿನಂದನೀಯ ಎಂದರು.

ಸಂಪಾದಕ ಬಿ.ಎಸ್.ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಮುಳಿಯ ಜುವೆಲ್ಸ್ ಸಂಸ್ಥೆಯ ಮ್ಯಾನೇಜರ್ ಲೋಹಿತ್ ಕುಮಾರ್, ವ್ಯವಸ್ಥಾಪಕ ನಿರ್ದೇಶಕ ತುಕರಾಮ್ ಬಿ., ಉಪಸಂಪಾದಕ ಸಂತೋಷ್ ಪಿ.ಕೋಟ್ಯಾನ್ ಬಳಂಜ, ಕಚೇರಿ ವ್ಯವಸ್ಥಾಪಕ ತಿಮ್ಮಪ್ಪ ಗೌಡ ನಿಡ್ಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುದ್ದಿ ಉದಯ ಬಳಗದ ವರದಿಗಾರರಾದ ಮನಿಷ್ ಅಂಚನ್, ಸುದೀತ್ ಉಜಿರೆ, ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ಆನಂದ ಗೌಡ ಜೋಗಿಲಬೆಟ್ಟು,ಅಕೌಂಟೆಂಟ್ ಸುಧಾ ಹುಣ್ಸೆಕಟ್ಟೆ, ಡಿಸೈನರ್ ಇರ್ಫಾನ್ ಉಜಿರೆ, ಆನ್ ಲೈನ್ ವರದಿಗಾರ್ತಿ ಪ್ರತಿಭಾ, ಕಂಪ್ಯೂಟರ್ ವಿಭಾಗದ ಧನ್ಯಾ ಭಂಡಾರಿ ಉಪಸ್ಥಿತರಿದ್ದರು.

ಬಹುಮಾನ ಸ್ವೀಕರಿಸಿದ ವಿದ್ಯಾಶ್ರೀ ಆಡೂರ್, ಶಿವಪ್ರಸಾದ್ ಸುರ್ಯ, ಪವಿತ್ರ ದಿನೇಶ್, ರಮ್ಯ ಭಟ್, ಅದಿತಿ ಕೆ., ಅದ್ವೈತ್ ಕೆ ಸುದ್ದಿಉದಯ ಪತ್ರಿಕೆ ಬರಹಗಾರರಿಗೆ ಸೂಕ್ತ ವೇದಿಕೆ ಕಲ್ಪಿಸಿ ಪ್ರತಿಭೆಗಳ ಅನಾವರಣಕ್ಕೆ ಸಾಕ್ಷಿಯಾಗಿದೆ. ತಾಲೂಕಿನ ಉತ್ತಮ ಗುಣಮಟ್ಟದ ಪತ್ರಿಕೆಯಾಗಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಸುದ್ದಿ ಉದಯ ವಾರಪತ್ರಿಕೆ ಪ್ರತಿ ವರ್ಷದಂತೆ ಈ ವರ್ಷವೂ “ಶ್ರೀಕೃಷ್ಣ’, ‘ಹೇ ಶಾರದೇ” ಫೋಟೋ ಸ್ಪರ್ಧೆ ಹಾಗೂ “ದೀಪಾವಳಿ” ಹಬ್ಬ-ಹರಿದಿನಗಳಲ್ಲಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಂಡು ಮಕ್ಕಳು, ಮಹಿಳೆಯರು ಹಾಗೂ ಸಾರ್ವಜನಿಕರ ಪ್ರತಿಭೆಗಳ ವಿಕಸನಕ್ಕೆ ವೇದಿಕೆಯನ್ನು ಒದಗಿಸಿತ್ತು. ಈ ಸ್ಪರ್ಧೆಗಳ ವಿಜೇತರಾಗಿ ಆಕರ್ಷಕ ಉಡುಗೊರೆಯನ್ನು ವಿತರಿಸಲಾಯಿತು.

ಮುಳಿಯ ಜುವೆಲ್ಸ್ ಪ್ರಾಯೋಜಕತ್ವದ ಶ್ರೀ ಕೃಷ್ಣ ಫೋಟೋ ಸ್ಪರ್ಧೆಯಲ್ಲಿ ಪ್ರಥಮ ಧೃತಿ ಬಿ. ಪಾಂಗಳ ಅರಳಿ ಉಜಿರೆ, ದ್ವಿತೀಯ ಪ್ರಣಿದಿ ಪೂಜಾರಿ ಮೇಲಂತಬೆಟ್ಟು ಹಾಗೂ ಗಾಯನ್ ಪಕಳ ಪುತ್ತಿಲ, ತೃತೀಯ ಶ್ರೀಯಾ ಚಾರ್ಮಾಡಿ ಮತ್ತು ಲಕ್ಷ್ಯ ಪ್ರಶಾಂತ್ ಲಾಯಿಲ, ಸಮಾಧಾನಕರ ಬಹುಮಾನ ಗಾನ್ವಿ ಪಕಳ ಪುತ್ತಿಲ, ಧೃತಿ ಸನ್ಮಯಿ ತಣ್ಣೀರುಪಂತ, ಅಥಾರು ಸಾವ್ಯ, ಓಶ್ಮಿ ಜಿ. ಪುತ್ತಿಲ, ಸಶ್ವಿತಾ ಎಸ್. ಬಂಗೇರ ಶಿರ್ಲಾಲು ಪಡೆದುಕೊಂಡರು.

ಸುದ್ದಿ ಉದಯ ಪತ್ರಿಕೆ ನಡೆಸಿದ ಹೇ-ಶಾರದೇ ಫೋಟೋ ಸ್ಪರ್ಧೆಯಲ್ಲಿ ಪ್ರಥಮ ಚಿನ್ಮಯಿ ಗುರುವಾಯನಕೆರೆ, ದ್ವಿತೀಯ ನಿಹಾ ಜಿ, ಕಡಂದಲೆ ಮೂಡಬಿದ್ರೆ ಹಾಗೂ ತೃತೀಯ ವೈಷ್ಣವಿ ಗೌಡ ಕೆದಿಲ, ಕಣಿಯೂರು, ಚಿತ್ರಕಲಾ ಸ್ಪರ್ಧೆಯಲ್ಲಿ ೧ರಿಂದ ೫ನೇ ತರಗತಿಯಲ್ಲಿ ಪ್ರಥಮ ತೃಷಾ ಜೆ.,ದ್ವಿತೀಯ ಶ್ರಾವ್ಯ, ತೃತೀಯ ಹರ್ಷಲ್ ಜೆ. ೬-೧೦ ನೇ ತರಗತಿಯಲ್ಲಿ ಅದಿತಿ ಕೆ.ಪ್ರಥಮ, ದ್ವಿತೀಯ ದ್ವಿತಿ ಡಿ., ತೃತೀಯ ಪ್ರಾರ್ಥನಾ ಪಿ ಹಾಗೂ ಲತೇಶ್ ಪಡೆದುಕೊಂಡರು.

ಸುದ್ದಿ ಉದಯ ದೀಪಾವಳಿ ವಿಶೇಷಾಂಕದ ಚಿತ್ರಕವನ ಸ್ಪರ್ಧೆಯಲ್ಲಿ ಪ್ರಥಮ ಶಿವಪ್ರಸಾದ್ ಸುರ್ಯ, ದ್ವಿತೀಯ ಶಾರದಾ ತುಳುನಾಡ್, ತೃತೀಯ ವಿದ್ಯಾಶ್ರೀ ಅಡೂರು, ಕಾರ್ಡುಕತೆ ಸ್ಪರ್ಧೆ ಪ್ರಥಮ ಪವಿತ್ರ ದಿನೇಶ್ ಹಳ್ಳಿಂಗೇರಿ ಕೊಕ್ಕಡ, ದ್ವಿತೀಯ ರಮ್ಯ ರಘುಪತಿ ಭಟ್ ಕೊಕ್ಕಡ, ತೃತೀಯ ಸರೀನ್‌ತಾಜ್ ಕಾಶಿಪಟ್ಟ, ರೂಪದರ್ಶಿಯರ ಫೋಟೋ ಸ್ಪರ್ಧೆಯಲ್ಲಿ ಪ್ರಥಮ ಜ್ಯೋತಿ ಡಿ’ಕುನ್ಹ ಬೆಳ್ತಂಗಡಿ, ದ್ವಿತೀಯ ರಿಶಲ್ ಲಸ್ರಾದೋ ಉಜಿರೆ, ತೃತೀಯ ಪೂಜಾ ಗೌಡ ಮಾಚಾರು ಉಜಿರೆ, ಮುದ್ದು ಮಗುವಿನ ಫೋಟೋ ಸ್ಪರ್ಧೆಯಲ್ಲಿ ಪ್ರಥಮ ಸುಗುಣ ಎಸ್. ಕೋಟ್ಯಾನ್ ಪಾರೊಟ್ಟು ನಿಟ್ಟಡೆ, ದ್ವಿತೀಯ ಲಿಶಾನ್ ಆರ್. ಪುತ್ತಿಲ, ತೃತೀಯ ಸಿಯಾರ ಮೆಲೋನ ಪಾಯ್ಸ್ ಮದ್ದಡ್ಕ ಜೋಡಿ ಹಕ್ಕಿ (ಸಂಗಾತಿ) ಫೋಟೋ ಸ್ಪರ್ಧೆಯಲ್ಲಿ ಪ್ರಥಮ ಶರತ್ ಕುಮಾರ್-ರಚಿತಾ ಸೋಮಂತಡ್ಕ, ದ್ವಿತೀಯ ಯಶ್ವಿತ್-ವಿದ್ಯಾಶ್ರೀ ರೆಂಕೆದಗುತ್ತು ಬೆಳ್ತಂಗಡಿ, ತೃತೀಯ ಸುಜಿತ್ ಡೋಲಿನ್ ಮೋನಿಸ್. ಪಣೆಜಾಲು ಬೆಳ್ತಂಗಡಿ, ಅವಳಿ-ಜವಳಿ ಫೋಟೋ ಸ್ಪರ್ಧೆಯಲ್ಲಿ ಪ್ರಥಮ ಗೇಷ್ಠಾ-ಗೆಹನಾ ಗೌಡ ಹಾಕೋಟೆ ಕರಾಯ, ದ್ವಿತೀಯ ಅದ್ವಿಕಾ ಎಚ್.ಎಸ್-ಅದ್ವಿತಾ ಎಚ್.ಎಸ್ ಓಡಿಲ್ನಾಳ, ತೃತೀಯ ಮೋಕ್ಷ-ಮೋಕ್ಷಿತಾ ಬದ್ಯಾರು, ಸಾಂಪ್ರದಾಯಿಕ ಉಡುಗೆಯಲ್ಲಿ ಮಕ್ಕಳ ಫೋಟೋ ಸ್ಪರ್ಧೆಯಲ್ಲಿ ಪ್ರಥಮ ಪ್ರಗ್ಯಾನ್ ಕೆ. ಓಡಿಲ್ನಾಳ, ದ್ವಿತೀಯ ಶ್ರೀವತ್ಸ ಛತ್ರ ಶ್ರೀರಾಗ ಮನೆ ಮಡಂತ್ಯಾರು ಹಾಗೂ ತೃತೀಯ ಅದ್ವೈತ್ ಕೆ. ಸಂತೃಪ್ತಿ ಹಳ್ಳಿಂಗೇರಿ ಕೊಕ್ಕಡ ಪಡೆದುಕೊಂಡರು.

ಇದೆ ವೇಳೆ ಬೆಳಕಿನ ಉದಯ ದೀಪಾವಳಿ ವಿಶೇಷಾಂಕದ ಓದುಗರ ಅದೃಷ್ಟ ಕೂಪನ್ ಡ್ರಾ ಮಾಡಲಾಯಿತು. ಅದೃಷ್ಟವಂತ ೨೫ ಮಂದಿ ಓದುಗರಿಗೆ ೨೫ ಸಾವಿರ ಬಹುಮಾನವನ್ನು ಘೋಷಿಸಲಾಯಿತು.

ಅದೃಷ್ಟ ಕೂಪನ್ ಡ್ರಾ ವಿಜೇತರು
ವಂಶಿಕ್ ನಾಯ್ಕ ಕುಕ್ಕಾವು ಮನೆ ಮಿತ್ತಬಾಗಿಲು, ತನುಷ್ ಗುರ್ಬಿತ್ತಡ್ಕ ಮನೆ ನಿಡ್ಲೆ, ಜ್ಯೋತಿ ಅಂಬಿಕಾ ನಿಲಯ ಬೆಳ್ತಂಗಡಿ, ಸಂದೀಪ್ ಆಚಾರ್ಯ ವಗ್ಗ, ಜಿ ಪದ್ಮರಾಜ್ ಶೆಟ್ಟಿ ಗುತ್ತು ಮನೆ ಕಿಲ್ಲೂರು, ರುತ್ವಿ ಗೌಡ ಕಣಿಯೂರು, ಲಿಂಗಪ್ಪ ಪೂಜಾರಿ ಪಾದೆ ಮನೆ ಮಿತ್ತಬಾಗಿಲು, ವಿನೀಶ್ ಲಸ್ರಾದೋ ಹುಣ್ಸೆಕಟ್ಟೆ ಮನೆ ಬೆಳ್ತಂಗಡಿ, ರೂಪೇಶಾ ರೈ ಮಲ್ಲೊಟ್ಟು ಗೇರುಕಟ್ಟೆ, ಶಿವರಂಜಿನಿ ಕುಲಾಲ್ ಪುಂಜಾಲಕಟ್ಟೆ, ರುತ್ವಿ ಶೆಟ್ಟಿ ಗುರುವಾಯನಕೆರೆ, ಕೇಶವ ಕುಲಾಲ್ ದೇವಿನಗರ ಚಾರ್ಮಾಡಿ, ಯೋಗೀಶ್ ಕೆಲ್ಲಗುತ್ತು , ವಾಣಿ ಉಪ್ಪಾರಪಳಿಕೆ, ಸಾವಿತ್ರಿ ಉಮೇಶ್ ಆಚಾರ್ಯ ಕಡಿರುದ್ಯಾವರ ಕಿಲ್ಲೂರು, ವಸಂತಿ ಆನಂದ ಗೌಡ ಕುಕ್ಕಾವು ಕಿಲ್ಲೂರು, ಚಂದನಾ ಕೆ. ಶೆಟ್ಟಿ ರಾಮಕೃಷ್ಣ ನಗರ ಉಜಿರೆ, ಮಹಾಲಿಂಗ ಗೌಡ ಗುತ್ತಿಮಾರು ಮನೆ ನಿಡ್ಲೆ, ಯಾನ್ವಿ ಲಕ್ಷ್ಮಣ ಮಲೆಬೆಟ್ಟು, ಅದ್ವೈತ್ ಕೆ. ಹಳ್ಳಿಂಗೇರಿ, ಕುಸುಮಾವತಿ ತಿಮ್ಮಯ್ಯ ನಾಯ್ಕ ನಡ, ಸರೋಜ ಕೇಶವ ನಾಯಕ್ ನೆಕ್ಕರಾಜೆ ಮನೆ ಕನ್ಯಾಡಿ 1, ಚಿರಸ್ವಿ ವೈ. ಡಿ ಡೆಚ್ಚಾರು ಪುದುವೆಟ್ಟು, ಕಾಸಿಂ ಕೊಲ್ಕಜೆ ಮನೆ , ಹೆಚ್ ಬಾಲಪ್ಪ ಗೌಡ ಉರುವಾಲು ಪಡೆದುಕೊಂಡರು.

ಸುದ್ದಿ ಉದಯ ಪತ್ರಿಕೆಯ ಉಪ ಸಂಪಾದಕ ಸಂತೋಷ್ ಪಿ ಕೋಟ್ಯಾನ್ ಬಳಂಜ ಸ್ವಾಗತಿಸಿದರು. ಕನ್ನಿಕಾ ನಿರೂಪಿಸಿದರು. ವ್ಯವಸ್ಥಾಪಕ ನಿರ್ದೇಶಕ ತುಕರಾಮ್ ಬಿ ವಂದಿಸಿದರು.

Related posts

ವಲಯ ಮಟ್ಟದ ಕ್ರೀಡಾಕೂಟ: ನಯನಾಡು ಸರಕಾರಿ ಪ್ರೌಢಶಾಲೆಗೆ ಸಮಗ್ರ ಪ್ರಶಸ್ತಿ

Suddi Udaya

ಭಾರತದ  ಉಪರಾಷ್ಟ್ರಪತಿ  ಸಿ. ಪಿ. ರಾಧಾಕೃಷ್ಣನ್ ರವರನ್ನು  ಭೇಟಿಯಾದ ಧರ್ಮಸ್ಥಳದ ಧರ್ಮಾಧಿಕಾರಿ  ಡಾ. ಡಿ. ವೀರೇಂದ್ರ ಹೆಗ್ಗಡೆಯವರು

Suddi Udaya

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಅಳದಂಗಡಿ ಶಾಖೆಯ 3ನೇ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಸಭೆ

Suddi Udaya

ಉಜಿರೆ ಅನುಗ್ರಹ ಶಾಲಾ ಪಾಲಕ ಪೋಷಕರ ಸಭೆ ಹಾಗೂ ಪ್ರತಿಭಾ ಪುರಸ್ಕಾರ

Suddi Udaya

ಲಾಯಿಲ: ಸಾರಿ ಫೋಲ್ಡಿಂಗ್, ಬ್ರೈಡಲ್ ಮೇಕಪ್ ಹಾಗೂ ಸಾರಿ ಗೊಂಡೆ ತರಬೇತಿಯ ಸಮಾರೋಪ ಕಾರ್ಯಕ್ರಮ

Suddi Udaya

ಬಂಟರ ಯಾನೆ ನಾಡವರ ಸಂಘ ಮಡಂತ್ಯಾರು ವಲಯದಿಂದ ಮನೆ ದುರಸ್ತಿ ಕಾರ್ಯ

Suddi Udaya
error: Content is protected !!