25.7 C
ಪುತ್ತೂರು, ಬೆಳ್ತಂಗಡಿ
October 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸೋಜಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ಸಂಸ್ಥೆಗೆ ಚಲನಚಿತ್ರ ನಿರ್ದೇಶಕ ಜಿ. ಕೃಷ್ಣ ಬೆಳ್ತಂಗಡಿ ಭೇಟಿ

ಬೆಳ್ತಂಗಡಿ: ಸೋಜಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ಸಂಸ್ಥೆಗೆ ಚಲನಚಿತ್ರ ನಿರ್ದೇಶಕರಾದ ಜಿ. ಕೃಷ್ಣ ಬೆಳ್ತಂಗಡಿ ಭೇಟಿ ನೀಡಿ ಸಿಬ್ಬಂದಿಗಳಿಗೆ ಜೀವನದಲ್ಲಿ ಅವಮಾನಗಳನ್ನು ಎದುರಿಸಿ, ಎಲ್ಲಾ ಕಷ್ಟಗಳನ್ನು ಮೆಟ್ಟಿ ನಿಂತರೆ ಮಾತ್ರ ನಾವು ನಮ್ಮ ಭವಿಷ್ಯವನ್ನು ಚೆನ್ನಾಗಿ ರೂಪಿಸಿಕೊಳ್ಳಬಹುದು ಎಂದು ಹಿತವಚನವನ್ನು ನೀಡಿದರು.

ಅವರೊಂದಿಗೆ ಪ್ರೊಫೆಷನಲ್ ಕೊರಿಯರ್ ನ ಮ್ಯಾನೇಜರ್ ಹಾಗೂ ಜಾದುಗಾರರಾಗಿರುವಂತಹ ರಾಜೀವ್ ಬಿ ಎಚ್ ಇವರು ಕೂಡ ಉಪಸ್ಥಿತರಿದ್ದು ಸಂಸ್ಥೆಗೆ ಬರುವ ಗ್ರಾಹಕರೊಂದಿಗೆ ಹೇಗೆ ನಡೆದುಕೊಳ್ಳಬೇಕೆಂದು ತನ್ನ ಜಾದುವಿನ ಮೂಲಕ ತಿಳಿಸಿದರು. ಹಾಗೂ ನಮ್ಮ ಜೀವನದಲ್ಲಿ ಕಷ್ಟ ಇದೆ ಎಂದು ಕುಗ್ಗದೆ, ನಮ್ಮಿಂದ ಎಲ್ಲಾ ಕೆಲಸವು ಸಾಧ್ಯವಿದೆಯೆಂದು ಮುನ್ನಡೆಯಬೇಕು ಎಂದು ಹೇಳಿದರು.

ಸಂಸ್ಥೆಯ ಸಿಬ್ಬಂದಿಗಳಾದ ಅರುಫಾ ಸುಹಾನ ಸ್ವಾಗತಿಸಿ, ಯಶೋಧರ ವಂದಿಸಿದರು. ಸಂಸ್ಥೆಯ ಮಾಲಕರಾದ ಅಲ್ಫೋನ್ಸ್ ಫ್ರಾಂಕೋರವರು ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು.

Related posts

ಪ್ರಯಾಗ್ ರಾಜ್‌ ಮಹಾಕುಂಭ ಮೇಳದಲ್ಲಿ ಪವಿತ್ರ ಸ್ನಾನಗೈದ ಶಾಸಕ ಹರೀಶ್ ಪೂಂಜ ಹಾಗೂ ಉದ್ಯಮಿ ಶಶಿಧರ ಶೆಟ್ಟಿ

Suddi Udaya

ಇಂದಬೆಟ್ಟು ಗ್ರಾಮ ಪಂಚಾಯತ್ ನ ಗ್ರಾಮ ಸಭೆ

Suddi Udaya

ಗೇರುಕಟ್ಟೆ ಸ.ಪ.ಪೂ. ಕಾಲೇಜಿನ ಪ್ರಾಂಶುಪಾಲರು ವಿ. ಲಕ್ಷ್ಮೇ ಗೌಡ ಹೃದಯಾಘಾತದಿಂದ ನಿಧನ

Suddi Udaya

ಬೌದ್ಧ ಮಹಾಸಭಾ ಮಾಲಾಡಿ ಇದರ ವತಿಯಿಂದ ಬುದ್ಧ ಪೂರ್ಣಿಮೆ ಆಚರಣೆ

Suddi Udaya

ಜಮೀಯತುಲ್ ಫಲಾಹ್ ಉಡುಪಿ- ದ.ಕ ಕೇಂದ್ರ ಸಮಿತಿ ಕಾರ್ಯದರ್ಶಿಯಾಗಿ ಅಬ್ಬೋನು ಮದ್ದಡ್ಕ ಆಯ್ಕೆ

Suddi Udaya

ಕಾರಿನಲ್ಲಿ ಮಲಗಿದ್ದವರ ಮೇಲೆ ಕಿಡಿಗೇಡಿಗಳಿಂದ ಹಲ್ಲೆ : ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ನಡೆದ ಘಟನೆ: ಗಾಯಗೊಂಡ ಮಿತ್ತಬಾಗಿಲು ಸಂಶುದ್ದೀನ್ ಮಂಗಳೂರು ಆಸ್ಪತ್ರೆಯಲ್ಲಿ ದಾಖಲು

Suddi Udaya
error: Content is protected !!