28.2 C
ಪುತ್ತೂರು, ಬೆಳ್ತಂಗಡಿ
September 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮೊಗ್ರು :ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ

ಮೊಗ್ರು.: ಜೈ ಶ್ರೀರಾಮ ಸೇವಾ ಟ್ರಸ್ಟ್(ರಿ.) ಮುಗೇರಡ್ಕ -ಅಲೆಕ್ಕಿ ಇದರ ಶ್ರೀ ರಾಮ ಶಿಶು ಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ ಮತ್ತು ಮಕ್ಕಳ ಧಾರ್ಮಿಕ ಹಾಗೂ ಆಧುನಿಕ ಶಿಕ್ಷಣಕ್ಕೆ ಪೂರಕವಾಗಿ ಕಾಶಿ ಶೆಟ್ಟಿ ನವಶಕ್ತಿ ಗುರವಾಯನಕೆರೆ ಇವರ ಸ್ಮರಣಾರ್ಥ “ಕಾಶಿ ಶೆಟ್ಟಿ ವಿದ್ಯಾ ಮಂದಿರ” ಹಾಗೂ ಶಾಸಕರಾದ ಹರೀಶ್ ಪೂಂಜಾರವರ ನೆರವಿನಿಂದ ಮಕ್ಕಳ ಅನ್ನ ಯಜ್ಞಕ್ಕಾಗಿ ನಿರ್ಮಾಣಗೊಂಡ ಅಡುಗೆ ಕೊಠಡಿಯ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ಸೆ. 6 ರಂದು ನೆರವೇರಿತು.

ಉದ್ಘಾಟನೆ ನೆರವೇರಿಸಿದ ಶಶಿಧರ ಶೆಟ್ಟಿ, ನವಶಕ್ತಿ ಗುರುವಾಯನಕೆರೆ ಇವರು ಮಾತನಾಡುತ್ತಾ ಅಂದಾಜು ರೂ.7 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಾಣಗೊಂಡಿದ್ದು, ಶ್ರೀರಾಮ ಶಿಶು ಮಂದಿರ ಧಾರ್ಮಿಕ ಶಿಕ್ಷಣ ಮತ್ತು ಇಲ್ಲಿಯ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕಟ್ಟಡಕ್ಕೆ ತನ್ನ ತಾಯಿ ಕಾಶಿ ಶೆಟ್ಟಿ ಸ್ಮರಣಾರ್ಥ ನೆರವು ನೀಡಿ, ಶ್ರೀರಾಮ ಶಿಶು ಮಂದಿರದ ಮುಂದಿನ ಅಭಿವೃದ್ಧಿ ಕಾರ್ಯಕ್ಕೆ ಎಲ್ಲಾ ರೀತಿಯಲ್ಲೂ ಸಹಕಾರ ನೀಡುತ್ತೇವೆ ಎಂದು ಭರವಸೆ ನೀಡಿದರು.
ಹಾಗೂ ಮಕ್ಕಳ ಆಟೋಟಕ್ಕೆ ಪೂರಕವಾಗಿ ಬೇಕಾದ ಸೂಕ್ತ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ಜೈ ಶ್ರೀರಾಮ ಸೇವಾ ಟ್ರಸ್ಟ್(ರಿ) ಅಲೆಕ್ಕಿ , ಮುಗೇರಡ್ಕ ಇದರ ಗೌರವಾಧ್ಯಕ್ಷ ಉದಯ ಭಟ್ ಕೊಳಬ್ಬೆ ಸಭಾಧ್ಯಕ್ಷತೆಯನ್ನು ವಹಿಸಿದ್ದರು.

ಈ ಸಂದರ್ಭದಲ್ಲಿ ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಕ್ಷಿತ್ ಪಣೆಕ್ಕರ, ಮುಗೇರಡ್ಕ ಮೂವರು ದೈವಗಳ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮನೋಹರ ಗೌಡ ಅಂತರ, ನಿವೃತ್ತ ಸೈನಿಕರಾದ ದೇವ ಪ್ರಸಾದ್ ಗೌಡ ಬರೆಮೇಲು, ಜೈ ಶ್ರೀ ರಾಮ ಟ್ರಸ್ಟ್ ಅಧ್ಯಕ್ಷ ಅಶೋಕ ಬರುಂಗುಡೇಲು , ಮಹಿಳಾ ಮಂಡಲ ಅಧ್ಯಕ್ಷೆಯಾದ ಶ್ರೀಮತಿ ದೇಜಶ್ರೀ ಕೀಲಾರು, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಟ್ರಸ್ಟಿಗಳು , ಪದಾಧಿಕಾರಿಗಳೂ ಮತ್ತು ಸರ್ವ ಸದಸ್ಯರು, ಪೋಷಕರು, ಮಾತಾಜಿಯವರು ಸಹಕರಿಸಿದರು.ನಿವೃತ್ತ ಸೈನಿಕರಾದ ದೇವಪ್ರಸಾದ್ ಗೌಡ ಬರೆಮೇಲು ಇವರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿತು .

ಬೆಳಗ್ಗೆ ಗಣಪತಿ ಹೋಮದೊಂದಿಗೆ ಪ್ರಾರಂಭವಾಗಿ, ಶ್ರೀ ಬಾಲಕೃಷ್ಣ ತೊಟ್ಟಿಲ ಸಂಭ್ರಮ, ಶ್ರೀ ಕೃಷ್ಣ, ಬಾಲಕೃಷ್ಣ ವೇಷಧಾರ ಹಾಗೂ ರಾಧಾಕೃಷ್ಣ ಸ್ಪರ್ಧೆ ನಡೆಯಿತು.
ದಿವ್ಯಶ್ರೀ ಪದ್ಮುಂಜ ಪ್ರಾರ್ಥನೆಗೈದು, ಶ್ರೀಮತಿ ಪುಷ್ಪಲತಾ ಸ್ವಾಗತಿಸಿ ಪ್ರಾಸ್ತವಿಕ ಮಾತನಾಡಿದರು. ಶ್ರೀಮತಿ ನವ್ಯಶ್ರೀ ಧನ್ಯವಾದ ಸಲ್ಲಿಸಿ. ಭರತೇಶ್ ಗೌಡ ಪುಣ್ಕೆದಡಿ ಕಾರ್ಯಕ್ರಮ ನಿರೂಪಿಸಿದರು. ಮಕ್ಕಳಿಗೆ, ವಿಶೇಷವಾಗಿ ಆಕರ್ಷಣಿಯ ಶ್ರೀ ಕೃಷ್ಣ ಹಾಗೂ ರಾಧೆಯರ ವೇಷ ಭೂಷಣ ನೃತ್ಯ ಸ್ಪರ್ಧೆ, ಮಕ್ಕಳಿಗೆ,ಪೋಷಕರಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಮೊಸರು ಕುಡಿಕೆ, ಆಟೋಟ ಸ್ಪರ್ಧೆ ನೆರವೇರಿತು.

Related posts

ಹೊಸಮಜಲುವಿನಲ್ಲಿ ಎಸ್‌ಜೆಎಮ್ ರೇಂಜ್ ಕಾನ್ಫರೆನ್ಸ್ ಸಂಪನ್ನ

Suddi Udaya

ಮಂಗಳೂರು ವಿ.ವಿ. ವಾಲಿಬಾಲ್ ಪಂದ್ಯಾಟ: ಉಜಿರೆ ಎಸ್ .ಡಿ.ಎಂ.ಕಾಲೇಜಿಗೆ ಪ್ರಶಸ್ತಿ

Suddi Udaya

ಇಂದಬೆಟ್ಟು ಟೀಮ್ ದೇವನಾರಿ ಸೇವಾ ಯೋಜನೆಯಿಂದ ನೀರಿನ ಟ್ಯಾಂಕ್ ಕೊಡುಗೆ

Suddi Udaya

ಧರ್ಮಸ್ಥಳ: ಅಪರಿಚಿತ ವ್ಯಕ್ತಿಯ ಶವ ಪತ್ತೆ : ವಾರೀಸುದಾರರ ಪತ್ತೆಗಾಗಿ ಮನವಿ

Suddi Udaya

ಹದಗೆಟ್ಟ ರಸ್ತೆ: ಸಮಾಜಸೇವಕ ಕಲಾಯಿ ಗಣೇಶ್ ಗೌಡ ಹಾಗೂ ಊರವರ ಸಹಕಾರದೊಂದಿಗೆ ರಸ್ತೆ ದುರಸ್ತಿ

Suddi Udaya

ಶ್ರೀ ಕ್ಷೇತ್ರ ಗೆಜ್ಜೆಗಿರಿಯ ವಾರ್ಷಿಕ ಜಾತ್ರಾ ಮಹೋತ್ಸವ ಇಂದಬೆಟ್ಟುವಿನಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!