ಬೆಳ್ತಂಗಡಿ: ಗುರುವಾಯನಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2025-26ನೇ ಸಾಲಿನ ಮಹಾಸಭೆಯು ಸೆ.8 ರಂದು ಸಂಘದ ಜೇಷ್ಠ ಸಭಾಭವನದಲ್ಲಿ ಜರುಗಿತು.
ಸಂಘದ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು ೨೦೨೫-೨೬ರ ಸಾಲಿನಲ್ಲಿ ಒಟ್ಟು ೨,೫೦,೮೬,೮೧೦ ಬಂಡವಾಳ ಹೊಂದಿದ್ದು, ಒಟ್ಟು ರೂ. ೩೩,೬೬,೨೫,೩೬೯ ಠೇವಣಿ ಸಂಗ್ರಹವಾಗಿರುತ್ತದೆ. ರೂ.158ಕೋಟಿ ವ್ಯವಹಾರ ನಡೆಸಿ ರೂ.68,41,887 ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.11ರಷ್ಟು ಡಿವಿಡೆಂಟ್ ನೀಡುವುದಾಗಿ ಘೋಷಿಸಿದರು.
ಎಸ್.ಎಸ್.ಎಲ್.ಸಿ., ಪಿ.ಯು.ಸಿ, ಪದವಿ, ವೃತ್ತಿಪರ ಕೋರ್ಸ್ಗಳಲ್ಲಿ ಉತ್ತಮ ಅಂಕ ಪಡೆದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಸಂಘದ ಶತಮಾನೋತ್ಸವದ ಸವಿ ನೆನಪಿಗಾಗಿ ಸದಸ್ಯರಿಗೆ ಕಿರುಕಾಣಿಕೆಯನ್ನು ನೀಡಲಾಯಿತು.
ಸಂಘದ ಉಪಾಧ್ಯಕ್ಷ ವಡಿವೇಲು, ನಿರ್ದೇಶಕರಾದ ಭಗೀರಥ ಜಿ., ಸುಜಿತಾ ವಿ.ಬಂಗೇರ, ಸಚಿನ್ ಕುಮಾರ್ ನೂಜೋಡಿ, ನಾರಾಯಣ ಪೂಜಾರಿ ಬರೆಮೇಲು, ಪುರಂದರ ಶೆಟ್ಟಿ ಪಾಡ್ಯಾರ್, ಅರುಣ್ ಕುಮಾರ್, ಜಯಂತಿ, ಮೋಹನ್ ನಾಯ್ಕ, ಶಶಿರಾಜ್ ಶೆಟ್ಟಿ, ಡಿ.ಸಿ.ಸಿ. ಪ್ರತಿನಿಧಿ ಸಿರಾಜುದ್ದೀನ್ ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿಕಲಾ ಎನ್. ವಾರ್ಷಿಕ ವರದಿ ಮಂಡಿಸಿದರು. ನಿರ್ದೇಶಕ ಅನಂತರಾಜ್ ಜೈನ್ ವಂದಿಸಿದರು. ಸಂಘದ ಸಿಬ್ಬಂದಿಗಳಾದ ಮಮತಾ, ಚೇತನ ಕೆ, ಭಾಗ್ಯಶ್ರೀ ಡಿ, ಅಕ್ಷತ್, ಯಶೋಧ, ನವೋದಯ ಪ್ರೇರಕಿ ಪ್ರತಿಭಾ ಸಹಕರಿಸಿದರು.












