32.1 C
ಪುತ್ತೂರು, ಬೆಳ್ತಂಗಡಿ
September 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ : ತಾಲೂಕಿನ ಕುವೆಟ್ಟು, ಮಡಂತ್ಯಾರು  ಗ್ರಾಮ ಪಂಚಾಯತ್ ಗೆ ಲೋಕಾಯುಕ್ತ ಅಧಿಕಾರಿಗಳ ಧಿಡೀರ್ ಭೇಟಿ

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ವಾಣಿಜ್ಯ ನಗರದ ಎರಡು ಗ್ರಾಮ ಪಂಚಾಯತ್ ಸೇರಿದ್ದಂತೆ ದಕ್ಷಿಣ ಜಿಲ್ಲೆಯ ಏಳು ಗ್ರಾಮ ಪಂಚಾಯತ್ ಗೆ ಏಕಕಾಲದಲ್ಲಿ ಲೋಕಾಯುಕ್ತ ಅಧಿಕಾರಿಗಳು ಧಿಡೀರ್ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸುತ್ತಿರುವ ಬಗ್ಗೆ ಸೆ. 8 ರಂದು ವರದಿಯಾಗಿದೆ.

ಬೆಳ್ತಂಗಡಿ ತಾಲೂಕಿನ ಕುವೆಟ್ಟು ಮತ್ತು ಮಡಂತ್ಯಾರು ಗ್ರಾಮ ಪಂಚಾಯತ್ ಗೆ ಲೋಕಾ ಅಧಿಕಾರಿಗಳು ಬೆಳಗ್ಗೆ 10 ಗಂಟೆ ವೇಳೆಗೆ ಧಿಡೀರ್ ಭೇಟಿ ಕಡತಗಳನ್ನು ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಲೋಕಾಯುಕ್ತ ಕೇಂದ್ರ ಕಛೇರಿಗೆ ಸಾರ್ವಜನಿಕರಿಂದ ಭ್ರಷ್ಟಾಚಾರ ಕುರಿತು ದೂರುಗಳು ಬಂದ ಹಿನ್ನಲೆಯಲ್ಲಿ,  ತನಿಖೆಯ ಮುಂದುವರಿದ ಭಾಗವಾಗಿ ಲೋಕಾ ಅಧಿಕಾರಿಗಳು ಭೇಟಿ ನೀಡಿ ಗ್ರಾಮ ಪಂಚಾಯತ್ ಅಧಿಕಾರಿಗಳು, ಸಿಬ್ಬಂದಿಗಳಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಉಡುಪಿ  ಜಿಲ್ಲೆಯ ಲೋಕಾಯುಕ್ತ ಇನ್ ಸ್ಪೇಕ್ಟರ್  ಮಂಜುನಾಥ್ ಶಂಕರಹಳ್ಳಿ ನೇತೃತ್ವದ ರಾಘವೇಂದ್ರ ಸಾಲಿಗ್ರಾಮ, ಸೂರಜ್ ಕಾಪು, ಆದರ್ಶ, ಅರುಣ್ ಕುಮಾರ್ ಸಹಿತ ಮತ್ತಿತರ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ಸಂಜೆ ತನಕ ಮುಂದುವರಿಯಲಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಪೆರ್ಮುದೆ ಗ್ರಾಮ ಪಂಚಾಯತ್, ಬಂಟ್ವಾಳ ತಾಲೂಕಿನ ಪುದು, ಮಾಣಿ, ಗೊಳ್ತಮಜಲು, ಅಡ್ಯಾರ್ ಗ್ರಾಮ ಪಂಚಾಯತ್ ,ಬೆಳ್ತಂಗಡಿ ತಾಲೂಕಿನ ಕುವೆಟ್ಟು ಮತ್ತು ಮಡಂತ್ಯಾರ್ ಗ್ರಾಮ ಪಂಚಾಯತ್ ಸೇರಿ ಒಟ್ಟು ಏಳು ಗ್ರಾಮ ಪಂಚಾಯತ್ ಗಳಿಗೆ ಕಾರವಾರ, ಉಡುಪಿ, ಮಂಗಳೂರು ವಿಭಾಗದ ಲೋಕಾಯುಕ್ತ ಅಧಿಕಾರಿಗಳ ತಂಡ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Related posts

ಜ.13: ಗೃಹಲಕ್ಷ್ಮೀ ನೋಂದಣಿ ವಿಶೇಷ ಶಿಬಿರ

Suddi Udaya

ಗುರುವಾಯನಕೆರೆ ಅಂಗಡಿಯ ಬ್ಯಾನರ್ ಗೆ ಬೆಂಕಿ ಆರೋಪಿಯನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

Suddi Udaya

ಹಾಸನ ಮೂಲದ ವ್ಯಕ್ತಿ ಚಾರ್ಮಾಡಿ ಘಾಟ್ ನಲ್ಲಿ ಆತ್ಮಹತ್ಯೆಗೆ ಯತ್ನ: ಜೀವ ಉಳಿಸಿದ ಪೊಲೀಸರು

Suddi Udaya

ಕಳೆಂಜ: ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ- ಶವ ಮೇಲೆತ್ತಿದ ಶೌರ್ಯ ವಿಪತ್ತು ನಿರ್ವಹಣಾ ತಂಡ

Suddi Udaya

ಮುಂಡೂರು ಸಾರ್ವಜನಿಕ ಶ್ರೀ ಗಣೇಶೋತ್ಸವ : ಧಾರ್ಮಿಕ ಸಭೆ ಮತ್ತು ಭಜನಾ ಕಾರ್ಯಕ್ರಮ

Suddi Udaya

ಅಂಗಡಿಯಲ್ಲಿದ್ದ ಕಾರ್ಮಿಕನ ಗಮನ ಬೇರೆಡೆ ಸೆಳೆದು ಲಕ್ಷಾಂತರ ನಗದು ದೋಚಿದ ಕಳ್ಳರು: ಮಾಲಾಡಿ ಪುಷ್ಪರಾಜ ಹೆಗ್ಡೆಯವರ ಅಡಕೆ ವ್ಯಾಪಾರ ಅಂಗಡಿಯಿಂದ ರೂ. 2.31 ಲಕ್ಷ ಕಳವು

Suddi Udaya
error: Content is protected !!