28.2 C
ಪುತ್ತೂರು, ಬೆಳ್ತಂಗಡಿ
September 9, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ: ರೂ.319.20 ಕೋಟಿ ವ್ಯವಹಾರ, ರೂ.1.10 ಕೋಟಿ ಲಾಭ, ಶೇ.12 ಡಿವಿಡೆಂಡ್

ಬೆಳ್ತಂಗಡಿ: ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ೨೦೨೫-೨೬ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಶೇಷಪ್ಪ ಸಾಲಿಯಾನ್ ಅಧ್ಯಕ್ಷತೆಯಲ್ಲಿ ಸೆ.೯ರಂದು ಸಂಘದ ವಠಾರದ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಸಂಘವು ಪ್ರಸಕ್ತ ಸಾಲಿನಲ್ಲಿ ೩೧೯.೨೦ ಕೋಟಿ ವ್ಯವಹಾರ ನಡೆಸಿ, ರೂ. ೨೭ ಕೋಟಿ ಠೇವಣಿ ಇರಿಸಿ, ರೂ.೧.೧೦ ಕೋಟಿ ಲಾಭಗಳಿಸಿ ಸಂಘದ ಸದಸ್ಯರಿಗೆ ಶೇ.೧೨ ಡಿವಿಡೆಂಡ್ ನೀಡುವುದಾಗಿ ಸಂಘದ ಅಧ್ಯಕ್ಷ ಶೇಷಪ್ಪ ಸಾಲಿಯಾನ್ ಘೋಷಣೆ ಮಾಡಿದರು.

ಸಾಧಕರಿಗೆ ಸನ್ಮಾನ -ಗೌರವ
ಶೈಕ್ಷಣಿಕ ಕ್ಷೇತ್ರ ಸಾಧಕರಾದ ಯಶ್ವಿನಿ ಅಜಿರ, ದಿಶಾ ಬಿ.ಆರ್, ತೃಪ್ತಿ ಕೆ. ಹಾಗೂ ಯೋಗ ಸಾಧಕ ವಿಕಾಸ್ ಅವರನ್ನು ಸನ್ಮಾನಿಸಲಾಯಿತು.ಎಸ್.ಎಸ್.ಎಲ್.ಸಿ ಪಿಯುಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಕಂಬಳ ಓಟಗಾರ ಚರಣ್ ಪೂಜಾರಿ ಪುತ್ತಿಲ ಹಾಗೂ ಹೈನುಗಾರಿಕೆಗೆ ಕ್ಷೇತ್ರದಲ್ಲಿ ಸಾಧಕ ಚಂದ್ರಶೇಖರ್ ಗೌಡ ಅವರನ್ನು ಸನ್ಮಾನಿಸಲಾಯಿತು. ಕೃಷಿ ಸಾಧಕರಾದ ಕಮಲ ಅಜಿಲ, ಮೋನಪ್ಪ ಗೌಡ ಮನಿಲ, ಸೂರ್ಯನಾರಾಯಣ ಕುದ್ದಣ್ಣಾಯ, ಪಿ.ಕೆ..ಇಬ್ರಾಹಿಂ ಅವರನ್ನು ಸನ್ಮಾನಿಸಲಾಯಿತು. ಸಂಘದ ನಿವೃತ್ತ ಕಾವಲುಗಾರ ಹಿರಿಯರಾದ ಶೇಖಬ್ಬ ಬ್ಯಾರಿ ಅವರನ್ನು ಗೌರವಿಸಲಾಯಿತು. ಉತ್ತಮ ವ್ಯವಹಾರ ನಡೆಸಿದ ಸ್ಪರ್ಶ ನವೋದಯ ಸ್ವಸಹಾಯ ಸಂಘವನ್ನು ಸನ್ಮಾನಿಸಲಾಯಿತು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಮೋಹನ್ ಗೌಡ, ನಿರ್ದೇಶಕರಾದ ಪ್ರಸನ್ನ ಗೌಡ ಎನ್, ಪ್ರಶಾಂತ್ ಪೈ, ಚಂದ್ರಶೇಖರ್, ಹರ್ಷಿತ್ ಪೂಜಾರಿ, ಸವಿತಾ, ಹೇಮಾವತಿ, ಸುರೇಶ್ ಸುಣ್ಣಾಜೆ, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಸಿರಾಜುದ್ದೀನ್, ವೃತ್ತಿಪರ ನಿರ್ದೇಶಕರಾದ ಅರುಣ್ ಬಂಗೇರ ಹಾಗೂ ವಸಂತ ಗೌಡ ಉಪಸ್ಥಿತರಿದ್ದರು. ತಣ್ಣೀರುಪಂತ ಪ್ಯಾಕ್ಸ್ ಅಧ್ಯಕ್ಷ ಜಯಾನಂದ ಕಲ್ಲಾಪು ಸಹಿತ ಸದಸ್ಯರು ಉಪಸ್ಥಿತರಿದ್ದರು.

ನಿರ್ದೇಶಕರಾದ ಪ್ರವೀಣ್ ರೈ ಪಿ, ಶಿವರಾಮ ಕೆಳಗಿನಂಗಡಿ ಸನ್ಮಾನ ಪತ್ರ ವಾಚಿಸಿದರು. ನಿರ್ದೇಶಕ ರಾಜೇಶ್ ರೈ ಹೆನ್ನಡ್ಕ ಸ್ವಾಗತಿಸಿ, ಸಂಘದ ಉಪಾಧ್ಯಕ್ಷ ಮೋಹನ್ ಗೌಡ ವಂದಿಸಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ವಾರ್ಷಿಕ ವರದಿ ಮಂಡಿಸಿ, ಕಾರ್ಯಕ್ರಮ ನಿರೂಪಿಸಿದರು.

Related posts

ಕುವೆಟ್ಟು: ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದೇ ರಸ್ತೆಯಲ್ಲೇ ಹರಿದ ಮಳೆ ನೀರು

Suddi Udaya

ಉಜಿರೆಗೆ ಹೋಗಿ ಬರುತ್ತೇನೆ ಎಂದ ನಿಡ್ಲೆಯ ವ್ಯಕ್ತಿ ನಾಪತ್ತೆ

Suddi Udaya

ಕಲ್ಮಂಜ: ಪುರೋಹಿತ ಶ್ರೀಕಾಂತ ಭಿಡೆ ನಿಧನ

Suddi Udaya

ಉಜಿರೆ ಶ್ರೀ ಧ. ಮಂ. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದಲ್ಲಿ ಚಿಣ್ಣರ ಯೋಗ ಶಿಬಿರ ಉದ್ಘಾಟನೆ

Suddi Udaya

ಉಜಿರೆ ಶ್ರೀ ಧ. ಮಂ. ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ: ಬದುಕಿನ ಸ್ಫೂರ್ತಿ ಪಡೆಯಲು ಎನ್ನೆನ್ನೆಸ್ ಅಡಿಪಾಯ – ಎ. ಜೀವಂಧರ ಕುಮಾರ್

Suddi Udaya

ಜೆಸಿಐ ಮಡಂತ್ಯಾರಿಗೆ ಜೆಸಿಐ ಭಾರತದ ವಲಯ 15 ರ ಮಧ್ಯಂತರ ಸಮ್ಮೇಳನದಲ್ಲಿ ಪ್ರಶಸ್ತಿ

Suddi Udaya
error: Content is protected !!