32.2 C
ಪುತ್ತೂರು, ಬೆಳ್ತಂಗಡಿ
September 11, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಳಿಯ ಕಲ್ಪವೃಕ್ಷ ಜ್ಞಾನ ವಿಕಾಸ ಕೇಂದ್ರದಿಂದ ಶಿಕ್ಷಣದ ಮಾಹಿತಿ ಕಾರ್ಯಕ್ರಮ

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಬೆಳ್ತಂಗಡಿ ವಲಯದ ಕಳಿಯ ಕಲ್ಪವೃಕ್ಷ ಜ್ಞಾನ ವಿಕಾಸ ಕೇಂದ್ರದಿಂದ ಶಿಕ್ಷಣದ ಮಾಹಿತಿ ಕಾರ್ಯಕ್ರಮವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗೇರುಕಟ್ಟೆಯಲ್ಲಿ ಪೋಷಕರು ಶಿಕ್ಷಕರು ಮತ್ತು ಮಕ್ಕಳ ಉಪಸ್ಥಿತಿಯಲ್ಲಿ ಸಂವಾದದ ಮೂಲಕ ಮಕ್ಕಳ ಶಿಕ್ಷಣದಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರದ ಬಗ್ಗೆ ಎಸ್.ಎಸ್.ಎಲ್.ಸಿ ಪಿಯುಸಿ ನಂತರದ ವಿಧ್ಯಾಭ್ಯಾಸದ ಅವಕಾಶಗಳ ಬಗ್ಗೆ ಸಂಪನ್ಮೂಲ ವ್ಯಕ್ತಿ ಉಷಾ ವಿ ನಾಯಕ್ ರವರು ಮಾಹಿತಿ ನೀಡಿದರು.

ಶಾಲೆಯ ಎಸ್.ಡಿ.ಎಮ್ ಸಿ ಅಧ್ಯಕ್ಷ ಹರೀಶ್ ಕುಮಾರ್ ರವರು ಶಾಲೆಯ ಅಭಿವೃದ್ಧಿಗೆ ಶ್ರೀ ಕ್ಷೇತ್ರದಿoದ ಹಲವಾರು ಸಹಾಯವನ್ನು ನೀಡಿದ್ದು ಮಕ್ಕಳ ಮುಂದಿನ ವಿಧ್ಯಾಭ್ಯಾಸಕ್ಕೆ ಪೂರಕವಾದ ಉತ್ತಮ ಮಾಹಿತಿ ಈ ದಿನ ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ ನೀಡಿದ್ದು ಎಲ್ಲಾ ಪೋಷಕರಿಗೆ ಮಕ್ಕಳ ಉತ್ತಮ ಭವಿಷ್ಯವನ್ನು ರೂಪಿಸುವಲ್ಲಿ ಸಹಕಾರಿಯಾಗಿದೆ ಎಂದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿಯವರಾದ ಮಧುರಾ ವಸಂತ್ ರವರು ಸುಜ್ಞಾನನಿಧಿ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಸೇವಾಪ್ರತಿನಿಧಿ ಸೌಮ್ಯ ಶಾಲಾ ಶಿಕ್ಷಕರು ಹಾಗೂ ಪೋಷಕರು ಉಪಸ್ಥಿ ತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಅನುರಾಧ ಸ್ವಾಗತಿಸಿ ವಂದಿಸಿದರು.

Related posts

ಆಕಸ್ಮಿಕವಾಗಿ ನದಿಗೆ ಬಿದ್ದು ಬಾಲಕ ಸಾವು

Suddi Udaya

ಬೆಳ್ತಂಗಡಿ ಹಾಗೂ ವೇಣೂರು ಠಾಣೆ ವ್ಯಾಪ್ತಿಯ ಸೂಕ್ಷ ಸ್ಥಳಗಳಲ್ಲಿ ಅರೆಸೇನಾಪಡೆ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ಪಥ ಸಂಚಲನ

Suddi Udaya

ಓಡಿಲ್ನಾಳ ಶ್ರೀ ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ 3ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ, ಧಾರ್ಮಿಕ ಸಭೆ

Suddi Udaya

ಬೆಳ್ತಂಗಡಿ ವಕೀಲರ ಭವನದಲ್ಲಿ “ಆಟಿದ ನೆಂಪು” ವಿಶೇಷ ಕಾರ್ಯಕ್ರಮ: ಮನಸೆಳೆದ 8 ವರ್ಷದ ಪೋರನ ಆಟಿ ಕಳೆಂಜ ವೇಷ

Suddi Udaya

ನಿವೃತ್ತ ನೌಕರರ ಸಂಘದ ರಜತ ಮಹೋತ್ಸವ ಸ್ಮರಣಸಂಚಿಕೆ “ಪ್ರಬುದ್ಧ” ಡಾ| ಡಿ. ಹೆಗ್ಗಡೆಯವರಿಗೆ ಅರ್ಪಣೆ

Suddi Udaya

ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನ ಆಡಳಿತ ಸಮಿತಿ ರಚನೆ

Suddi Udaya
error: Content is protected !!