30.1 C
ಪುತ್ತೂರು, ಬೆಳ್ತಂಗಡಿ
September 11, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸೆ.13-14: ಮರೋಡಿಯಲ್ಲಿ 25ನೇ ವರ್ಷದ ಬೆಳ್ಳಿಹಬ್ಬದ ಸಾರ್ವಜನಿಕ ಶ್ರೀ ಗಣೇಶೋತ್ಸವ

ಮರೋಡಿ: ಕೂಕ್ರಬೆಟ್ಟು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ 25ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸೆ.13 ಮತ್ತು 14ರಂದು ಮರೋಡಿ ಕೂಕ್ರಬೆಟ್ಟು ವಠಾರದಲ್ಲಿ ನಡೆಯಲಿದೆ.

ಸೆ.13ರಂದು ಬೆಳಿಗ್ಗೆ 9 ಗಂಟೆಗೆ ಗಣಹೋಮ, ದೇವತಾ ಪ್ರಾರ್ಥನೆ ಮತ್ತು ಆಟೋಟ ಸ್ಪರ್ಧೆಗಳ ಉದ್ಘಾಟನೆ ನಡೆಯಲಿದೆ. ಬೆಳಿಗ್ಗೆ 10ರಿಂದ ವಾಲಿಬಾಲ್ ಪಂದ್ಯಾಟ ನಡೆಯಲಿದ್ದು ರಾತ್ರಿ 10ರಿಂದ ಮಲ್ಲಿಗೆದ ಐತ ಕೈಟ್ ಬೆತ್ತ, ಮಣಿಗಂಟೆ ಶಬ್ದಡ್ ಜನಮಾನಿಗ್ ನಿರೆಲಾಯಿ ಅಪ್ಪೆ ಮಂತ್ರದೇವತೆನ ಕಥೆ ನಡೆಯಲಿದೆ.


ಸೆ.14ರಂದು ಬೆಳಿಗ್ಗೆ ಗಣೇಶನ ವಿಗ್ರಹ ಪ್ರತಿಷ್ಠೆ, ಗಣಯಾಗ, ಬೆಳಿಗ್ಗೆ 10ರಿಂದ ಆಹ್ವಾನಿತ ತಂಡಗಳ ಪುರುಷರ ವಾಲಿಬಾಲ್ ಪಂದ್ಯಾಟ ಹಾಗೂ ಆಹ್ವಾನಿತ ತಂಡಗಳ ಮಹಿಳೆಯರ ತ್ರೋಬಾಲ್ ಪಂದ್ಯಾಟ ನಡೆಯಲಿದೆ. ನಂತರ ಆಹ್ವಾನಿತ ತಂಡಗಳ ಗ್ರಾಮ ಸೀಮಿತ ಕಬ್ಬಡಿ ಪಂದ್ಯಾಟ ನಡೆಯಲಿದೆ.

ರಾತ್ರಿ 8ರಿಂದ ಬೆಳ್ಳಿ ಹಬ್ಬದ ಸವಿನೆನಪಿಗಾಗಿ ನಿರ್ಮಿಸಿರುವ ಶಾಸಕರ ಅನುದಾನದ ಶಾಶ್ವತ ಸಭಾ ಚಪ್ಪರದ ಸಮರ್ಪಣಾ ಕಾರ್ಯಕ್ರಮ ಹಾಗೂ ಶ್ರೀ ಸಿದ್ದಿವಿನಾಯಕ ಕಲಾ ಮಂಟಪದಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಪೂರ್ವಾಹ್ನ ಗಂಟೆ 11 ರಿಂದ ಭಜನಾ ಕಾರ್ಯಕ್ರಮ, ಭಕ್ತಿ ರಸಮಂಜರಿ ಹಾಗೂ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 3ರಿಂದ ಛದ್ಮವೇಷ ಸ್ಪರ್ಧೆ ಹಾಗೂ ಆಹ್ವಾನಿತ ತಂಡಗಳ ಪುರುಷರ ಮತ್ತು ಮಹಿಳೆಯರ ಹಗ್ಗ ಜಗ್ಗಾಟ ಪಂದ್ಯಾಟ ನಡೆಯಲಿದೆ. ಸಂಜೆ 6-30ರಿಂದ ಬಹುಮಾನ ವಿತರಣೆ ನಡೆಯಲಿದೆ. ಸಂಜೆ 7 ಗಂಟೆಗೆ ಸ್ಥಳೀಯ ಪ್ರತಿಭೆಗಳಿಂದ ಭಕ್ತಿ ಪ್ರಧಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ 9-30ರಿಂದ ಸುಡುಮದ್ದ ಪ್ರದರ್ಶನ ಹಾಗೂ ರಾತ್ರಿ ಗಂಟೆ 10ರಿಂದ ಶೋಭಾಯಾತ್ರೆ ಹಾಗೂ ಗಣಪತಿಯ ವಿಗ್ರಹದ ಜಲಸ್ತಂಭನ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ವಿಶು ಕುಮಾರ್ ಜೈನ್ ವಿನಂತಿಸಿದ್ದಾರೆ.

Related posts

ಮೇ 26: ವಿದ್ಯುತ್ ನಿಲುಗಡೆ

Suddi Udaya

ಲಾಯಿಲ : ಸವಣಾಲು ಆಯಿಲ ರಸ್ತೆಯ ಕತ್ಪಾಜೆಯಲ್ಲಿ ಗುಡ್ಡ ಕುಸಿತ: ಲಾಯಿಲ ಗ್ರಾ.ಪಂ. ವತಿಯಿಂದ ಎಚ್ಚರಿಕೆ ಫಲಕ ಅಳವಡಿಕೆ: ಘನ ವಾಹನಗಳ ಸಂಚಾರ ನಿರ್ಬಂಧ

Suddi Udaya

ಉಜಿರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಪ್ರಶಸ್ತಿ

Suddi Udaya

ಜು. 27, 28: ಗೃಹಜ್ಯೋತಿ ಫಲಾನುಭವಿಗಳ ಹೆಚ್ಚುವರಿ ಮಾಹಿತಿ ಸಂಗ್ರಹಣೆ: ಜಿಲ್ಲಾ ಕೆಡಿಪಿ ಸದಸ್ಯ ಸಂತೋಷ್ ಕುಮಾರ್ ಲಾಯಿಲ

Suddi Udaya

ರಮ್ಯ 1 ಗ್ರಾಂ ಗೋಲ್ಡ್ & ಫ್ಯಾನ್ಸಿಯಲ್ಲಿ ಲ್ಯಾಕ್ಮಿ ಶೋಕೇಸ್ ಅಳವಡಿಕೆ

Suddi Udaya

ಫೆ. 26ರಿಂದ ಮಾ.4: ಬೆಳಾಲು ಮಾಯ ಮಹಾದೇವ ದೇವಸ್ಥಾನದ ವಾರ್ಷಿಕ ಜಾತ್ರೆ

Suddi Udaya
error: Content is protected !!