28.3 C
ಪುತ್ತೂರು, ಬೆಳ್ತಂಗಡಿ
September 11, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಎಲ್.ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ

ಕಕ್ಯ ಪದವು : ಪಾದೆಗುತ್ತು ಲಿಂಗಪ್ಪ ಮಾಸ್ಟರ್ ಮೆಮೋರಿಯನ್ ಎಜುಕೇಶನ್ ಟ್ರಸ್ಟ್ (ರಿ ) ನಿಂದ ನಡೆಸಲ್ಪಡುವ ಎಲ್.ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ
ಕಕ್ಯಪದವು ಸೆಪ್ಟೆಂಬರ್ 5 ರ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮವನ್ನು ಅತ್ಯಂತ ಸಂಭ್ರಮ ಹಾಗೂ ಗೌರವದಿಂದ ಸೆಪ್ಟೆಂಬರ್ 11 ರಂದು ಆಚರಿಸ ಲಾಯಿತು . ಭಾರತದ ಮಾಜಿ ರಾಷ್ಟ್ರಪತಿ ಡಾ II ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ರಾಷ್ರೀಯ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.

ಹತ್ತನೇ ತರಗತಿಯ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಆಯೋಜಿಸಿದರು. ಪ್ರಾರ್ಥನಾ ಗೀತೆಯ ಮೂಲಕ ಕಾರ್ಯಕ್ರಮವನ್ನು ಆರಂಭಿಸಿ, ಶಾಲಾ ವಿದ್ಯಾರ್ಥಿ ಸಂಘದ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಹೂ ನೀಡುವುದರ ಮೂಲಕ ಸಂಸ್ಥೆಯ ಎಲ್ಲಾ ಶಿಕ್ಷಕರನ್ನು ಸ್ವಾಗತಿಸಿ ಶಿಕ್ಷಕರೆಲ್ಲರೂ ಪುಷ್ಪಾರ್ಚನೆ ಹಾಕುವುದರ ಮೂಲಕ ಡಾ| ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಗೌರವ ವಂದನೆ ಸಲ್ಲಿಸಿ, ನಂತರ ಸಂಸ್ಥೆಯ ಸಂಯೋಜಕರು ಶಾಲಾ ಮುಖ್ಯೋಪಾಧ್ಯಾಯಿನಿ ಹಾಗೂ ಶಿಕ್ಷಕರೆಲ್ಲರೂ ಗೂಡಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು . ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿಜಯ ಕೆ ಇವರು ಶಿಕ್ಷಕರಿಗೆ , ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಮಾತುಗಳನ್ನು ತಿಳಿಸಿದರು. ಹಾಗೂ ಜೀವನದಲ್ಲಿ ಶಿಸ್ತು ಪರಿಶ್ರಮ ಮತ್ತು ಉತ್ತಮ ಮೌಲ್ಯಗಳನ್ನು ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು ಮತ್ತು ಎಲ್ಲಾ ಶಿಕ್ಷಕರಿಗೆ ಶುಭಾಶಯ ತಿಳಿಸಿದರು.

ಸಂಯೋಜಕರಾದ ಯಶವಂತ ಜಿ ನಾಯಕ್ ಇವರು ಎಲ್ಲಾ ಶಿಕ್ಷಕರಿಗೆ ಶುಭಾಶಯ ತಿಳಿಸುತ್ತ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಶಿಕ್ಷಣದ ಮಹತ್ವ ಹಾಗೂ ಶಿಕ್ಷಕರ ಬಾಂಧವ್ಯ ಅನೇಕ ರೀತಿಯ ಬದಲಾವಣೆಯನ್ನು ಹೊಂದಿದ್ದು ಹಾಗೂ ಸಂಸ್ಥೆಯಲ್ಲಿ ದುಡಿಯುವ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿದರು. ದೈಹಿಕ ಶಿಕ್ಷಕಿಯಾದ ಹರಿಣಾಕ್ಷಿ ಜಿ.ಕೆ ವೃಕ್ತಿತ್ವ ಆದರ್ಶ ಹಾಗೂ ತತ್ವಗಳನ್ನು ವಿದ್ಯಾರ್ಥಿಗಳೆಲ್ಲರೂ ಮೈಗೂಡಿಸಿಕೊಂಡು ಶಿಕ್ಷಕರನ್ನು ಸದಾ ಗೌರವದಿಂದ ಕಾಣಬೇಕು ಹಿತನುಡಿದರು.
ವಿದ್ಯಾರ್ಥಿಗಳು ಗೀತೆ ಹಾಡುವುದರ ಮೂಲಕ ಮನರಂಜಿಸಿ, ಎಲ್ಲಾ ಶಿಕ್ಷಕ ವರ್ಗದವರಿಗೆ ಒಳಾಂಗಣ, ಹೊರಾಂಗಣ ಕ್ರೀಡಾ ಸ್ಪರ್ಧೆಯನ್ನು ಏರ್ಪಡಿಸಿ ಶಿಕ್ಷಕರನ್ನು ಮನರಂಜಿಸಿದರು. ಹತ್ತನೇ ತರಗತಿಯ ವಿದ್ಯಾರ್ಥಿಗಳು ಸಮನ್ವಿ ಸ್ವಾಗತಿಸಿ , ರಶ್ಮೀ ಪ್ರಭು ಮತ್ತು ಪ್ರತೀಕ್ಷಾ ರಾಫಿದಾ ಬಾನು ನಿರೂಪಿಸಿದರು. ಸ್ವಸ್ತಿಶ್ರೀ ಕಾರ್ಯಕ್ರಮವನ್ನು ವಂದಿಸಿದರು.

Related posts

ಗೇರುಕಟ್ಟೆ : ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಹಾಗೂ ಜಾನುವಾರು ಆರೋಗ್ಯ ಮಾಹಿತಿ ಶಿಬಿರ

Suddi Udaya

ಪದ್ಮಂಜ ಸೇವಾ ಸಹಕಾರಿ ಸಂಘದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಸಾಮರಸ್ಯ ಸಾರಿದ ಮಂಗಳೂರು ದಸರಾ ಬೆಳ್ತಂಗಡಿ ಧರ್ಮಪ್ರಾಂತ್ಯದ ಬಿಷಪ್ ಹರ್ಷ

Suddi Udaya

ಕಾಂಗ್ರೆಸ್ ಸರ್ಕಾರದ “ಜನ ವಿರೋಧಿ ನೀತಿ”ಗಳನ್ನು ಖಂಡಿಸಿ ಕೊಕ್ಕಡ ಗ್ರಾ.ಪಂ. ಎದುರು ಬಿಜೆಪಿ ಪ್ರತಿಭಟನೆ

Suddi Udaya

ಸೆ.28: ಬೆಳ್ತಂಗಡಿ ರಾಜ ಕೇಸರಿ ಸೇವಾ ಟ್ರಸ್ಟ್ ವತಿಯಿಂದ ನಾವೂರಿನಲ್ಲಿ ಉಚಿತ ನೇತ್ರಾ ಮತ್ತು ಹೃದಯ ತಪಾಸಣಾ ಶಿಬಿರ

Suddi Udaya

ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಗೆ ಯುವವಾಹಿನಿ ಬೆಳ್ತಂಗಡಿ ಘಟಕದ ಪದ ಪ್ರದಾನ‌ ಸಮಾರಂಭದಲ್ಲಿ ಗೌರವ ಸನ್ಮಾನ

Suddi Udaya
error: Content is protected !!