ಕೊಕ್ಕಡ ವಲಯ ಮಟ್ಟದ 17 ರ ವಯೋಮಾನದ ಬಾಲಕ ಬಾಲಕಿಯರ ಖೋ-ಖೋ ಪಂದ್ಯಾಟದಲ್ಲಿ ಕೊಕ್ಕಡ ಸರಕಾರಿ ಪ್ರೌಢ ಶಾಲೆಯ ಬಾಲಕರು ದ್ವಿತೀಯ ಹಾಗೂ ಬಾಲಕಿಯರು ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದೆ.
ಅತ್ಯುತ್ತಮ ಚೇಝರ್ ಪ್ರಶಸ್ತಿಯನ್ನು ಮಿಥೇಶ್ ಹಾಗೂ ಪ್ರೆಸಿಲ್ಲಾ ಗಲಬಾವೋ ಪಡೆದುಕೊಂಡಿರುತ್ತಾರೆ. ತಂಡಕ್ಕೆ ದೈಹಿಕ ಶಿಕ್ಷಣ ಶಿಕ್ಷಕರಾದ ಬೀನಾ ಸಾಗರ ಇವರು ತರಬೇತಿ ನೀಡಿದ್ದರು.












