32.2 C
ಪುತ್ತೂರು, ಬೆಳ್ತಂಗಡಿ
September 11, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎಕ್ಸೆಲ್ ವಿದ್ಯಾರ್ಥಿಗಳು ಭಾರತದ ಅತ್ಯುನ್ನತ ವೈದ್ಯಕೀಯ ವಿದ್ಯಾ ಸಂಸ್ಥೆ ಏಮ್ಸ್ ಗೆ ಆಯ್ಕೆ

ರಾಷ್ಟ್ರ ಮಟ್ಟದ ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್ ನಡೆದು , 2 ಸುತ್ತಿನ ಕೌನ್ಸಿಲಿಂಗ್ ಆಗಿರುವ ಈ ಹೊತ್ತಿನಲ್ಲಿ ಎಂದಿನಂತೆ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾರತದ ಅತ್ಯುನ್ನತ ವೈದ್ಯಕೀಯ ವಿದ್ಯಾ ಸಂಸ್ಥೆಗಳಾದ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್(ಏಮ್ಸ್) ಗೆ ಆಯ್ಕೆಯಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ಇತಿಹಾಸದಲ್ಲಿಯೇ ಏಮ್ಸ್ ಗೆ ಪ್ರವೇಶಾತಿ ಕಲ್ಪಿಸಿದ ಏಕೈಕ ಕಾಲೇಜು ಎಕ್ಸೆಲ್. ಭಾರತದಲ್ಲಿ ವರ್ಷವೊಂದಕ್ಕೆ ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ರ್ಯಾಂಕ್ ಪಡೆದ ಸುಮಾರು 2250 ವಿದ್ಯಾರ್ಥಿಗಳಿಗೆ ಏಮ್ಸ್ ನಲ್ಲಿ ಪ್ರವೇಶಾತಿ ದೊರಕುತ್ತದೆ. ಪ್ರತಿ ವರ್ಷ ದೇಶದ ಅತ್ಯುನ್ನತ ವೈದ್ಯಕೀಯ ಸಂಸ್ಥೆಯಾದ ಏಮ್ಸ್ ಗೆ ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯುತ್ತಾ ಬಂದಿರುವುದು ಇಲ್ಲಿನ ಗುಣಮಟ್ಟದ ಶಿಕ್ಷಣಕ್ಕೆ ಹಿಡಿದ ಕೈಗನ್ನಡಿಯಾಗಿದೆ .

ರಾಷ್ಟ್ರ ಮಟ್ಟದಲ್ಲಿ 271 ನೆಯ ರಾಂಕ್ ಗಳಿಸಿದ ಮೌರ್ಯ ವೈ ಡಿ ಹಾಗೂ 331 ನೆಯ ರಾಂಕ್ ಗಳಿಸಿದ ಚಿನ್ಮಯಿ ಎಲ್ ಆರ್ ಗೌಡ ಅವರಿಗೆ ದೇಶದ ಅತ್ಯುನ್ನತ ವೈದ್ಯಕೀಯ ವಿದ್ಯಾ ಸಂಸ್ಥೆಯಾದ ಏಮ್ಸ್ ನಲ್ಲಿ ವ್ಯಾಸಂಗ ಮಾಡುವ ಅವಕಾಶ ಈ ಬಾರಿ ಲಭಿಸಿದೆ.


ಮೊದಲ ಹಾಗೂ ಎರಡನೆಯ ಸುತ್ತಿನಲ್ಲಿ ಎಕ್ಸೆಲ್ ಕಾಲೇಜಿನಲ್ಲಿ ಓದಿದ 400 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಬೆಂಗಳೂರು ಮೆಡಿಕಲ್ ಕಾಲೇಜು, ಮೈಸೂರು ಮೆಡಿಕಲ್ ಕಾಲೇಜು ಸೇರಿ ದೇಶದ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶಾತಿ ಲಭ್ಯವಾಗಿದೆ. ಅಂತಿಮ ಸುತ್ತಿನಲ್ಲಿ ಎಕ್ಸೆಲ್ ಕಾಲೇಜಿನ ಇನ್ನೂ 70 ರಷ್ಟು ವಿದ್ಯಾರ್ಥಿಗಳಿಗೆ ಮೆಡಿಕಲ್ ಸೀಟ್ ದೊರೆಯಲಿದೆ.
ದಕ್ಷಿಣ ಭಾರತದಲ್ಲೇ ಖ್ಯಾತನಾಮರಾದ ಉಪನ್ಯಾಸಕರ ಬೋಧನೆ, ಶಿಸ್ತು ಬದ್ಧ ತರಗತಿಗಳು, ನಿಯಮಿತವಾಗಿ ನಡೆಯುವ ಮೋಕ್ ಟೆಸ್ಟ್ಗಳು ಮೊದಲಾಗಿ ಎಕ್ಸೆಲ್ ಕಾಲೇಜಿನ ಅಕಾಡೆಮಿಕ್ ಪ್ಲಾನ್ ಕಾಲೇಜಿನ ಶೈಕ್ಷಣಿಕ ಸಾಧನೆಗೆ ಕಾರಣವಾಗುತ್ತಿದೆ.
ಸಾಧಕರನ್ನು ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಪ್ರಾಂಶುಪಾಲರು, ಪ್ರಾಧ್ಯಾಪಕರು ಅಭಿನಂದಿಸಿದ್ದಾರೆ.

Related posts

ಬೆಳಾಲು ಪ್ರೌಢಶಾಲೆ ಪ್ರಾರಂಭೋತ್ಸವ ಮತ್ತು ಉಚಿತ ನೋಟ್ ಪುಸ್ತಕ ವಿತರಣೆ

Suddi Udaya

ನಾವೂರು: ಕಾಂತಪ್ಪ ಮೂಲ್ಯರವರ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ಬೆಳ್ತಂಗಡಿ:ಫೆ.21ಮತ್ತು24 ವಿದ್ಯುತ್ ನಿಲುಗಡೆ

Suddi Udaya

ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯ ವೇಳಾಪಟ್ಟಿ ಪ್ರಕಟ

Suddi Udaya

ಸಹಕಾರಿ ಸಪ್ತಾಹದಲ್ಲಿ ಪಿಲಿಗೂಡು ಹಾ.ಉ.ಮ.ಸ. ಸಂಘಕ್ಕೆ ಉತ್ತಮ ಹಾಲು ಉತ್ಪಾದಕರ ಸಹಕಾರಿ ಸಂಘ ಪ್ರಶಸ್ತಿ

Suddi Udaya

ಮಳೆ ಹಾನಿ- ವಿಪತ್ತು ನಿರ್ವಹಣೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಯವರ ಸೂಚನೆಯಂತೆ ತಾಲೂಕು ಮಟ್ಟದ ಅಧಿಕಾರಿಗಳ ಸಭೆ

Suddi Udaya
error: Content is protected !!