30.1 C
ಪುತ್ತೂರು, ಬೆಳ್ತಂಗಡಿ
September 11, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸೆ.14: ನಡ-ಕನ್ಯಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ

ನಡ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನಡ-ಕನ್ಯಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದರ ವತಿಯಿಂದ ಸಾರ್ವಜನಿಕ ಶ್ರೀ ಗಣೇಶೋತ್ಸವವು ನಡ ಸಮಾಜ ಮಂದಿರದಲ್ಲಿ ಸೆ.14ರಂದು ಜರಗಲಿದೆ.

ಪೂರ್ವಾಹ್ನ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್ ವಿ.ಜಿ ಮೂಡಬೆಟ್ಟು ವಹಿಸಲಿದ್ದಾರೆ. ಶ್ರೀ ಕ್ಷೇ. ಧ. ಗ್ರಾ.ಯೋಜನೆ ಲಾÊಲ ವಲಯದ ಮೇಲ್ವಿಚಾರಕಿ ಮಲ್ಲಿಕಾ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಂಗಳೂರು ಮೆಸ್ಕಾಂ ನಿಗಮದ ಅಧ್ಯಕ್ಷ ಹರೀಶ್ ಕುಮಾರ್, ಗುರುವಾಯನಕೆರೆ ಎಕ್ಸೆಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಬೆಳ್ತಂಗಡಿಯ ಧಾರ್ಮಿಕ ಮುಖಂಡ ಕಿರಣ್‌ಚಂದ್ರ ಡಿ. ಪುಷ್ಪಗಿರಿ ಆಗಮಿಸಲಿದ್ದಾರೆ. ನಿವೃತ್ತ ಸೈನಿಕ ಅಶೋಕ್ ಗೌಡ ಮಾಲ್ದಂಡ ಕನ್ಯಾಡಿ 1, ಉಜಿರೆ ಹೊಳ್ಳ ಆರ್ಟ್ಸ್ನ ಗಿರೀಶ್ ಹೊಳ್ಳ ರವರಿಗೆ ವಿಶೇಷ ಸನ್ಮಾನ ನಡೆಯಲಿದೆ.

ಬೆಳಗ್ಗೆ ಮೂರ್ತಿ ಪ್ರತಿಷ್ಠಾಪನೆ, ಗಣಹೋಮ, ಅಂಗನವಾಡಿ, ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ಆಟೋಟ ಸ್ಪರ್ಧೆ, ಧಾರ್ಮಿಕ ಸಭಾ ಕಾರ್ಯಕ್ರಮ, ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ, ಅಪರಾಹ್ನ ಶಾಲಾ ಮಕ್ಕಳಿಗೆ ಭಕ್ತಿಗೀತೆ ಸ್ಪರ್ಧೆ, ಸಂಜೆ ಅಂಗನವಾಡಿ ಮತ್ತು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯ, ಉಜಿರೆ ಡೈನಾಮಿಕ್ ಡ್ಯಾನ್ಸ್ ಫ್ಯಾಕ್ಟರಿ ಇವರಿಂದ ನೃತ್ಯ ವೈವಿಧ್ಯ, ರಾತ್ರಿ ವಿವಿಧ ಭಜನಾ ತಂಡದೊಂದಿಗೆ ಗಣಪತಿ ಮೂರ್ತಿಯ ಭವ್ಯ ವರ್ಣರಂಜಿತ ಮೆರವಣಿಗೆ ನಡೆಯಲಿದೆ.

Related posts

ತಣ್ಣೀರುಪಂಥ ವಲಯದ ಕರಾಯ ಕಲ್ಲೇರಿ, ಕುಪ್ಪೆಟ್ಟಿ ಒಕ್ಕೂಟಗಳ ನೂತನ ಪದಾಧಿಕಾರಿಗಳ ಪದಗ್ರಹಣ

Suddi Udaya

ಕಡಿರುದ್ಯಾವರ ಮುಸ್ತಾಫರ ಮನೆಗೆ ನುಗ್ಗಿದ ಕಳ್ಳರು: ರೂ.1.71 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 1.20 ಲಕ್ಷ ನಗದು ಕಳವು

Suddi Udaya

ಎ.3ರಿಂದ ಎ.7: ಮೇಲಂತಬೆಟ್ಟು ಶ್ರೀ ದೇವಿ ಭಗವತಿ ಅಮ್ಮನವರ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ

Suddi Udaya

ಉದ್ಯೋಗಾವಕಾಶಗಳನ್ನು ಒದಗಿಸುವುದೇ ಗುರಿ – MIFSE ಮತ್ತು ಅನುಗ್ರಹ ಟ್ರೈನಿಂಗ್ ಕಾಲೇಜು ಸಂಸ್ಥೆಗಳ ಜಾಗೃತಿ ಅಭಿಯಾನದ ವಾಹನ ತಾಲೂಕಿನಾದ್ಯಂತ ಮನೆ ಬಾಗಿಲಿಗೆ – ಚಾರ್ಮಾಡಿಯಿಂದ ಚಾಲನೆ

Suddi Udaya

ದೀಕ್ಷಾನ್ವಯ : ಎಸ್.ಡಿ.ಎಂ. ಬಿ.ಎಡ್ ಕಾಲೇಜಿನ ಪ್ರಾರಂಭೋತ್ಸವ

Suddi Udaya

ಡಿ.14: ಅನಾರು ಹಾ.ಉ.ಸ. ಸಂಘದ ನೂತನ ಕಟ್ಟಡ “ಕ್ಷೀರ ವಾರಿಧಿಯ” ಉದ್ಘಾಟನೆ

Suddi Udaya
error: Content is protected !!