ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಬಂದಾರು : ಪೆರ್ಲ-ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ

ಬಂದಾರು :ಬಂದಾರು ಗ್ರಾಮ ಪೆರ್ಲ -ಬೈಪಾಡಿ ಶ್ರಿ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಆ. 8 ರಂದು ವರಮಹಾಲಕ್ಷ್ಮೀ ಪೂಜೆಯು ನೆರವೇರಿತು.


ಪ್ರಧಾನ ಅರ್ಚಕರಾದ ಅನಂತರಾಮ ಶಬರಾಯ ಹಾಗೂ ಮಧುಸೂಧನ ಹೊಳ್ಳ ರವರು ಪೂಜೆ ನೆರವೇರಿಸಿದರು.
ಪೂಜೆಯ ಸಂದರ್ಭದಲ್ಲಿ ಉಜಿರೆ ಅಮೃತ್ ಸಿಲ್ಕ್ಸ್ , ಟೆಕ್ಸ್ ಟೈಲ್ & ರೆಡಿಮೇಡ್ಸ್ ಮಾಲಕರಾದ ಪ್ರಶಾಂತ್ ಜೈನ್, ಹಾಗೂ ಆದಿತ್ಯ ಕ್ಲೋತ್ ಸೆಂಟರ್ ಮಾಲಕರಾದ ವಿಶ್ವನಾಥ ಗೌಡ ಇವರುಗಳು ವರಮಹಾಲಕ್ಷ್ಮೀ ಪೂಜೆಯ ವೃತಧಾರಿಗಳಿಗೆ ರವಿಕೆ ನೀಡಿರುತ್ತಾರೆ. ಮಹಿಳಾ ಸಮಿತಿಯ ಸದಸ್ಯರು ಅಪಾರ ಸಂಖ್ಯೆಯಲ್ಲಿ ಪೂಜೆಯಲ್ಲಿ ಭಾಗವಹಿಸಿದ್ದರು.ನೆರೆದವರಿಗೆಲ್ಲರಿಗೂ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ, ಹಾಗೂ ಮಹಿಳಾ ಸಮಿತಿ ಪದಾಧಿಕಾರಿಗಳು, ಸರ್ವ ಸದಸ್ಯರು, ಭಕ್ತಭಿಮಾನಿಗಳು ಉಪಸ್ಥಿತರಿದ್ದರು.

Related posts

ಎಕ್ಸೆಲ್ ಪ.ಪೂ. ಕಾಲೇಜಿನ ಸಂಸ್ಕೃತ ಉಪನ್ಯಾಸಕ ರಘು ಬಿಜೂರ್ ರಿಗೆ ರಾಜ್ಯ ಗಾನಸಿರಿ ಕರ್ನಾಟಕ ಭೂಷಣ ಪ್ರಶಸ್ತಿ

Suddi Udaya

ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ನಿರ್ಲಕ್ಷ್ಯ: ಆಸ್ಪತ್ರೆಗೆ ದಾಖಲಾಗಿದ್ದ ರೋಗಿ ಸಾವು

Suddi Udaya

ಭಾರತ್ ಕೋ ಆಪರೇಟಿವ್ ಬ್ಯಾಂಕ್ ಮುಂಬೈ ಲಿಮಿಟೆಡ್ ಇದರ ನೂತನ ನಿರ್ದೇಶಕರಾಗಿ ಮುಂಬಯಿ ಉದ್ಯಮಿ ನಾರಾಯಣ ಸುವರ್ಣ ಮರೋಡಿ ಆಯ್ಕೆ

Suddi Udaya

ಜ.6 : ವಿಶ್ವ ಹಿಂದೂ ಪರಿಷದ್ ಬಜರಂಗದಳ ಬೆಳ್ತಂಗಡಿ ಪ್ರಖಂಡದ ವತಿಯಿಂದ ಕಕ್ಕಿಂಜೆಯಲ್ಲಿ ಬೃಹತ್ ಪ್ರತಿಭಟನೆ

Suddi Udaya

ಮುಂಡಾಜೆ : ಕುರುಡ್ಯ ಎಂಬಲ್ಲಿ ಗುಡ್ಡಕ್ಕೆ ಬೆಂಕಿ

Suddi Udaya

ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಕನ್ಯಾಡಿ ಕಾರ್ಯಕ್ಷೇತ್ರದಲ್ಲಿ ದೀಪಶ್ರೀ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನೆ

Suddi Udaya
error: Content is protected !!