30.8 C
ಪುತ್ತೂರು, ಬೆಳ್ತಂಗಡಿ
September 15, 2026
Uncategorized

ಶಿಶಿಲ : ಸೃಷ್ಟಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಮಹಾಸಭೆ

ಶಿಶಿಲ : ಸೃಷ್ಟಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ 2025-26 ನೇ ಸಾಲಿನ ವಾರ್ಷಿಕ ಮಹಾಸಭೆಯು ಒಕ್ಕೂಟದ ಅಧ್ಯಕ್ಷೆ ಮೀನಾಕ್ಷಿ ಬೈರಕಟ್ಟ ಇವರ ಅಧ್ಯಕ್ಷತೆಯಲ್ಲಿ ಶಿಶಿಲ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಒಕ್ಕೂಟದ ಮುಖ್ಯ ಬರಹಗಾರರಾದ ಶಾರದಾ ಗತ ವರ್ಷದ ವರದಿ ವಾಚಿಸಿದರು. ಸಭೆಯಲ್ಲಿ ಭಾಗವಹಿಸಿದ ವಲಯ ಮೇಲ್ವಿಚಾರಕಿ ಶ್ರೀಮತಿ ವೀಣಾಶ್ರೀಯವರು ಸಂಜೀವಿನಿ ಕಾರ್ಯಕ್ರಮದ ಸಮಗ್ರ ಮಾಹಿತಿಯನ್ನು ನೀಡಿ ನೂತನ ಪದಾಧಿಕಾರಿಗಳ ಪದಗ್ರಹಣವನ್ನು ನಡೆಸಿಕೊಟ್ಟು ಶುಭ ಹಾರೈಸಿದರು.

ಮಹಾಸಭೆಯ ಪ್ರಯುಕ್ತ ಏರ್ಪಡಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರು ಹಾಗೂ ಅತ್ಯುತ್ತಮ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
ಒಕ್ಕೂಟದ ವತಿಯಿಂದ PMJJBY ಯಡಿಯಲ್ಲಿ ವಿಮೆ ಹೊಂದಿದ್ದು ಮೃತಹೊಂದಿದ ಸಂಜೀವಿನಿ ಸಂಘದ ಸದಸ್ಯೆಯ ಕುಟುಂಬದ ಸದಸ್ಯರಿಗೆ ವಿಮಾ ಮೊತ್ತವನ್ನು ಬ್ಯಾಂಕ್ ಆಫ್ ಬರೋಡಾ ಅಧಿಕಾರಿ ರಮೇಶ್ ಹಸ್ತಾಂತರಿಸಿದರು. ನಿರ್ಗಮನ ಪದಾಧಿಕಾರಿಗಳನ್ನು ವಲಯ ಮೇಲ್ವಿಚಾರಕರನ್ನು , ಸಿಬ್ಬಂದಿವರ್ಗದವರನ್ನು ಹಾಗೂ ಸಹಕರಿಸಿದವರನ್ನು ಗೌರವಿಸಲಾಯಿತು.
ಮಹಾಸಭೆಯ ಅಂಗವಾಗಿ ಒಕ್ಕೂಟದ ಸದಸ್ಯೆಯರ ಉತ್ಪನ್ನಗಳ ವಿಶೇಷ ಹಳ್ಳಿ ಸಂತೆ ಆಯೋಜಿಸಲಾಗಿತ್ತು.

ಸ್ವಾತಿ ಸೂರಜ್ ಪ್ರಾರ್ಥಿಸಿದರು. ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿ ಸಂಧ್ಯಾ ಸ್ವಾಗತಿಸಿದರು. ಪಶುಸಖಿ ಆಶಿಕಾ ಧನ್ಯವಾದಗೈದರು. ಕೃಷಿ ಸಖಿ ಸುಮಾ ಸಂಜಯ್ ಕಾರ್ಯಕ್ರಮ ನಿರೂಪಿಸಿದರು.

Related posts

ಮೇ.3 : ಪುಂಜಾಲಕಟ್ಟೆಯಲ್ಲಿ ಹೆಸರಾಂತ ಬಿ.ಪುಂಡಲೀಕ ಬಾಳಿಗಾ & ಸನ್ಸ್ ಜ್ಯುವೆಲ್ಲರ್‍ಸ್ ವಿಸ್ತೃತ ನೂತನ ಮಳಿಗೆಯ ಶುಭಾರಂಭ

Suddi Udaya

ಸಂಪೂರ್ಣ ಹದಗೆಟ್ಟ ಕರಂಬಾರು ಬಂತಡ್ಕದ ರಸ್ತೆ ದುರಸ್ತಿಗಾಗಿ ಸ್ಥಳೀಯರಿಂದ ಅಗ್ರಹ

Suddi Udaya

ಪುದುವೆಟ್ಟು ಗ್ರಾ.ಪಂ.ನ ಗ್ರಾಮ ಸಭೆ

Suddi Udaya

ಬೆಳ್ತಂಗಡಿ ಸ.ಪ್ರ.ದ. ಕಾಲೇಜಿನಲ್ಲಿ ಮಂಗಳೂರು ವಿ.ವಿ. ಮಟ್ಟದ ತ್ರೋಬಾಲ್ ಕ್ರೀಡಾಕೂಟ

Suddi Udaya

ಬೆಳಾಲು ಗ್ರಾ.ಪಂ. ಮಾಜಿ ಅಧ್ಯಕ್ಷ ಲಕ್ಷ್ಮಣ ಗೌಡ ಕಾಂಗ್ರೆಸ್ ಸೇರ್ಪಡೆ

Suddi Udaya

ಸೆ.22ರಿಂದ ಅ.1: ಓಡೀಲು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ

Suddi Udaya
error: Content is protected !!