ವೇಣೂರು: ಇಲ್ಲಿನ ಎಕ್ಸೆಲ್ ಟೆಕ್ನೋ ಸ್ಕೂಲ್ ನಲ್ಲಿ ಸೆ.12ರಂದು ಪೋಷಕರ ಸಭೆ ನಡೆಯಿತು.

ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಮುಖ್ಯ ಶಿಕ್ಷಕ ಶಾಂತಿರಾಜ್ ಜೈನ್, ವಿದ್ಯಾರ್ಥಿಗಳನ್ನು ಸಾಧ್ಯವಾದಷ್ಟು ಸ್ವಾವಲಂಬಿಗಳಾಗುವತ್ತ ಬೆಳೆಸಬೇಕು. ನೈತಿಕ ಮೌಲ್ಯಗಳ ಜೊತೆಗೆ ಶಿಕ್ಷಣದ ಅವಶ್ಯಕತೆಯನ್ನು ವಿವರಿಸಿದರು. ಶಿಕ್ಷಣ ಸಂಯೋಜಕಿ ಶ್ರೀಮತಿ ಕಾವ್ಯಶ್ರೀ ಎನ್ . ಪೋಷಕರಿಗೆ ಸಲಹೆಗಳನ್ನು ನೀಡಿದರು. ಪೋಷಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಎಂ.ಕೆ ಕನ್ಯಾಡಿ ನಿರೂಪಿಸಿದರು.











